ಮತ್ತೆ ಮೋದಿ ಸರ್ಕಾರ,ಕರ್ನಾಟಕದಲ್ಲಿ ಅಬ್ಬರಿಸಲಿದೆ Bjp ಲೋಕಸಭಾ ಚುನಾವಣೆ ABP Cವೋಟರ್ ಸಮೀಕ್ಷೆ,
news.ashwasurya.in
ನವದೆಹಲಿ: ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ಕಾವು ಏರತೊಡಗಿದೆ. ಇದರ ಜೋತೆಗೆ ABP Cವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದ್ದು. ಬಹುತೇಕ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ವರದಿಮಾಡಿದೆ,ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ 22ರಿಂದ 24 ಸ್ಥಾನ ಗೆಲ್ಲಲಿದೆ ಯಂತೆ!?
ನವದೆಹಲಿ(ಡಿ.24) ಇನ್ನೇನು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ ಆಖಾಡ ಸ್ಪರ್ಧಿಗಳು ಸಜ್ಜಾಗುತ್ತಿದ್ದಾರೆ.ಕೆಲವು ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆಯ ಮತ ಬೇಟೆಯ ರಣತಂತ್ರಗಳು ಆರಂಭಗೊಂಡಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದೊಂದಿಗೆ ಮತ್ತೆ ಮೋದಿಯನ್ನು ಪ್ರಧಾನಿ ಮಾಡುವ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್ ಮಿತ್ರ ಪಕ್ಷಗಳೊಂದಿಗೆ ಕೂಡಿಕೊಂಡು ಇಂಡಿಯಾ ಒಕ್ಕೂಟದ ಮೂಲಕ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿದೆ. ಹೀಗಾಗಿ 2024ರ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ.ಒಂದು ಕಡೆ ಚುನಾವಣೆ ಸಮೀಪಿಸುತ್ತಿದೆ ಇನ್ನೊಂದು ಮಗ್ಗುಲಲ್ಲಿ ಕಾವು ಏರುತ್ತಿದ್ದಂತೆ ಚುನಾವಣೆ ಪೂರ್ವ ಸಮೀಕ್ಷೆಗಳು ಬಹಿರಂಗವಾಗುತ್ತಿದೆ. ಇತ್ತೀಚೆಗೆ ABP Cವೋಟರ್ ನಡೆಸಿದ ಲೋಕಸಭಾ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಬಹುತೇಕ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ವರದಿಮಾಡಿದೆ!? ಇನ್ನು ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿರುವ ಬಿಜೆಪಿಗೆ ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದಂತ ಸೀಟುಗಳಿಗಿಂತ ಈ ಬಾರಿ ಕಡಿಮೆಯಾಗಲಿದೆ ಎಂದಿದೆ. ಈ ಬಾರಿ 22 ರಿಂದ 24 ಸ್ಥಾನವನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತನ್ನ ಮಡಿಲಿಗೆ ಹಾಕಿಕೋಳ್ಳಲಿದೆ ಎಂದಿದೆ.
ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 26 ಸ್ಥಾನ ಪಡೆದು ದಿಗ್ವಿಜಯ ಸಾಧಿಸಿತ್ತು ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿ ಲೋಕಸಭೆ ಚುನಾವಣೆ ಎದುರಿಸಿದ್ದವು. ಈ ವೇಳೆ ಜೆಡಿಎಸ್ ಒಂದು ಸ್ಥಾನ ಹಾಗೂ ಕಾಂಗ್ರೆಸ್ ಒಂದು ಸ್ಥಾನ ಗೆದ್ದುಕೊಂಡು ಬಾರಿ ಮುಖಭಂಗ ಅನುಭವಿಸಿದ್ದವು. ಆದರೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ 22 ರಿಂದ 24 ಸ್ಥಾನ ಗೆಲ್ಲಲಿದೆ ಎಂದು Cವೋಟರ್ ಸಮೀಕ್ಷೆ ವರದಿಮಾಡಿದೆ. ಕಳೆದ ಬಾರಿ ಒಂದು ಸ್ಥಾನ ಗೆದ್ದಂತಹ ಕಾಂಗ್ರೆಸ್ ಈ ಚುನಾವಣೆಯಲ್ಲಿ 4 ರಿಂದ 6 ಸ್ಥಾನ ಗೆಲ್ಲಲಿದೆ ಎಂದಿದೆ.
ಇತ್ತೀಚೆಗೆ ವಿಧಾನಸಭೆ ಚುನಾವಣೆ ಗೆದ್ದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಘಡದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ ಎಂದಿದೆ. ಇನ್ನೂ ವಿಧಾನಸಭೆಯಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲೂ ಮೋಡಿ ಮಾಡಲಿದೆ ಸಾಕಷ್ಟು ಕ್ಷೇತ್ರದಲ್ಲಿ ವಿಜಯಸಾಧಿಸಲಿದೆ ಎಂದಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 11 ಸ್ಥಾನ ಗೆಲ್ಲಲಿದೆ ಎಂದಿದೆ.
ABP Cವೋಟರ್ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ನಾಲ್ಕು ರಾಜ್ಯಗಳಲ್ಲಿ ಗೆಲುವಿನ ಲೆಕ್ಕಚಾರ ಈ ರೀತಿ ಇದೆ.
ಕರ್ನಾಟಕದಲ್ಲಿ ಒಟ್ಟು 28 ಸ್ಥಾನ
ಬಿಜೆಪಿ + ಜೆಡಿಎಸ್ ಮೈತ್ರಿ : 22 ರಿಂದ 24 ಸ್ಥಾನ
ಕಾಂಗ್ರೆಸ್ : 4 ರಿಂದ 6 ಸ್ಥಾನ
ಮಧ್ಯಪ್ರದೇಶ ಒಟ್ಟು 29 ಸ್ಥಾನ
ಬಿಜೆಪಿ : 27 ರಿಂದ 29
ಕಾಂಗ್ರೆಸ್ : 0 -2 ಸ್ಥಾನ
ರಾಜಸ್ಥಾನ ಒಟ್ಟು 25 ಸ್ಥಾನ
ಬಿಜೆಪಿ : 23 ರಿಂದ 25 ಸ್ಥಾನ
ಕಾಂಗ್ರೆಸ್ :0 – 2 ಸ್ಥಾನ
ತೆಲಂಗಾಣ ಒಟ್ಟು 17 ಸ್ಥಾನ
ಬಿಜೆಪಿ : 1 ರಿಂದ 3 ಸ್ಥಾನ
ಕಾಂಗ್ರೆಸ್ : 9 ರಿಂದ 11 ಸ್ಥಾನ
ಬಿಆರ್‌ಎಸ್ : 3 ರಿಂದ 5 ಸ್ಥಾನ
ಚತ್ತೀಸಘಡ ಒಟ್ಟು 11 ಸ್ಥಾನ
ಬಿಜೆಪಿ : 9 ರಿಂದ 11 ಸ್ಥಾನ
ಕಾಂಗ್ರೆಸ್ : 0 -2 ಸ್ಥಾನ
ಅದರೆ ಈ ಲೆಕ್ಕಚಾರ ಬುಡಮೇಲಾದರು ಆಶ್ಚರ್ಯವಿಲ್ಲ.ಸಾಕಷ್ಟು ಬಾರಿ ಸಮೀಕ್ಷೆಗಳು ಸುಳ್ಳಾಗುವಂತೆ ಮತದಾರ ಮತಚಲಾಯಿಸಿದ್ದಾನೆ ಎಲ್ಲವನ್ನೂ ಕಾಲವೆ ಉತ್ತರಿಸಲಿದೆ….