BIG BREAKING NEWS
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಗ್ ಟ್ವಿಸ್ಟ್ ? ಮಹಾದೇವಪ್ಪ, ಜಮೀರ್ ಅಹಮ್ಮದ್, ಸತೀಶ್ ಜಾರಕಿಹೋಳಿ ಸೇರಿದಂತೆ ಒಂಬತ್ತು ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್!?
news.ashwasurya.in
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ 9 ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆಯಂತೆ! ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ಕೂಡ ನೆಡೆಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಪ್ರಯತ್ನಕ್ಕೆ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಲು ಮುಂದಾಗಿದೆ, ಸಚಿವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದ್ದು ಮತಗಳ ಲೆಕ್ಕಾಚಾರವನ್ನು ಹಾಕಲಾಗಿದೆ!? ಇತ್ತೀಚೆಗಷ್ಟೇ ನಡೆದ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸಂಸದರನ್ನು ಕಣಕ್ಕಿಳಿಸಿ ಯಶಸ್ವಿಯಾಗಿತ್ತು. ಈಗ ಅದೇ ಪ್ರಯೋಗವನ್ನು ಸಂಸತ್ ಚುನಾವಣೆಯಲ್ಲಿ ಅನುಸರಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಬೆಂಗಳೂರು ಸೆಂಟ್ರಲ್ ನಿಂದ ಜಮೀರ್ ಅಹ್ಮದ್, ಜಾರ್ಜ್, ಹ್ಯಾರಿಸ್, ಉತ್ತರ ಕರ್ನಾಟಕದಿಂದ ಆರ್.ವಿ. ದೇಶಪಾಂಡೆ,
ಚಾಮರಾಜನಗರದಿಂದ ಡಾ. ಹೆಚ್.ಸಿ. ಮಹದೇವಪ್ಪ, ತುಮಕೂರಿನಿಂದ ಕೆ.ಎನ್. ರಾಜಣ್ಣ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಮಂಡ್ಯದಿಂದ ಚೆಲುವರಾಯಸ್ವಾಮಿ, ಹಾವೇರಿಯಿಂದ ಹೆಚ್.ಕೆ. ಪಾಟೀಲ್, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ. ಕೋಲಾರದಿಂದ ಪರಮೇಶ್ವರ್, ಮುನಿಯಪ್ಪ, ಬೀದರ್ ನಿಂದ ಈಶ್ವರ ಖಂಡ್ರೆ ಅವರನ್ನು ಕಣಕ್ಕಿಳಿಸುವ ಚಿಂತನೆ ಇದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಈ ಬಾರಿ 15ರಿಂದ 20 ಸ್ಥಾನಗಳನ್ನು ಗೆಲ್ಲುವ ಉದ್ದೇಶದೊಂದಿಗೆ ಕಾರ್ಯತಂತ್ರ ರೂಪಿಸಲಾಗುತ್ತಿದ್ದು, 9 ಸಚಿವರನ್ನು ಕಣಕ್ಕಿಳಿಸಲು ನಾಯಕರು ಚರ್ಚೆ ನಡೆಸಿದ್ದಾರೆ
ಎನ್ನಲಾಗಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಹಾಲಿ ಸಚಿವ ಮಧು ಬಂಗಾರಪ್ಪ ನವರ ಹೆಸರು ಕೇಳಿ ಬಂದಿದ್ದು ಅದು ಕಷ್ಟ ಸಾಧ್ಯ ಕಾರಣ ಇಲ್ಲಿ ಇನ್ನೊಬ್ಬ ಪ್ರಬಲ ಸ್ಫರ್ಧಿ ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಗೆಲ್ಲುವ ಕುದುರೆ ಆಗಿದ್ದಾರೆ ಸಾಕಷ್ಟು ಬಾರಿ ಟಿಕೆಟ್ ವಂಚಿತರಾಗಿರುವ ಇವರಿಗೆ ಈ ಬಾರಿ ಟಿಕೆಟ್ ನೀಡಲೆ ಬೇಕೆಂದು ಹೈಕಮಾಂಡ್ ಅಂಗಳದಲ್ಲಿ ಹೆಸರು ಪ್ರತಿಧ್ವನಿಸುತ್ತಿದೆ. ಈಗಾಗಲೇ ಕ್ಷೇತ್ರದೆಲ್ಲಡೆ ಓಡಾಡಿ ಬೂತ್ ಮಟ್ಟದಿಂದ ತನ್ನದೆ ಕಾರ್ಯಕರ್ತರ ಪಡೆ ಹೊಂದಿರವ ಸುಂದರೇಶ್ ಮತ ಬೇಟೆಗೆ ಅಣಿಯಾಗಿದ್ದಾರೆ.ಇನ್ನೂ ಮಂಗಳೂರು ಕ್ಷೆತ್ರದ ಟಿಕೆಟಿಗಾಗಿ ಬಾರಿ ಪೈಪೋಟಿ ನೆಡೆದಿದೆ ಮಿಥುನ್ ರೈ ಅವರ ಹೆಸರು ಮುನ್ನಲೆಗೆ ಬಂದಿದೆ.ಮತ್ತೆ ಮಂಡ್ಯ ಕ್ಷೇತ್ರಕ್ಕೆ ಮೋಹಕ ನಟಿ ರಮ್ಯಾ ಅವರ ಹೆಸರು ಕೇಳಿಬಂದಿದ್ದು ಮಂಡ್ಯ ಕ್ಷೇತ್ರ ಚುನಾವಣೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ, ಜೇಡಿಎಸ್ ಇವರಲ್ಲಿ ಯಾರಿಗೆ ಕ್ಷೇತ್ರ ಎನ್ನುವ ತಿರ್ಮಾನದ ನಂತರ ಕಾಂಗ್ರೆಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ಹಾಲಿ ಸಂಸದೆ ಸುಮಲತಾ ಕಾಂಗ್ರೆಸ್ ಪಕ್ಷದಿಂದ ಸ್ಫರ್ದಿಸುವುದು ಖಚಿತ ಎಂದು ತಿಳಿದು ಬಂದಿದೆ, ಒಟ್ಟಿನಲ್ಲಿ ಈ ಬಾರಿಯ ಲೋಕ ಸಮರ ಚುನಾವಣೆಯಲ್ಲಿ ಅಭ್ಯರ್ಥಿಗಳ ನಡುವೆ ಪ್ರಬಲ ಸ್ಫರ್ದೆ ಏರ್ಪಡುವ ಎಲ್ಲಾ ಸಾಧ್ಯತೆ ಇದೆ…