ಶಿವಮೊಗ್ಗ: ಪ್ರತಿಕಾರಕ್ಕೆ ಬಿದ್ದ ಹಂತಕರ ತಂಡ ಕೋಲೆ ಆರೋಪಿ ರೌಡಿಶೀಟರ್ ಓರ್ವನ ಸಹೋದರನನ್ನು ಮೂರು ಮಂದಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಹೇಮಂತ್ ಕುಮಾರ್ ಅಲಿಯಾಸ್ ಕರಿಚಿಕ್ಕಿ (38) ಕೊಲೆಯಾದ ವ್ಯಕ್ತಿ.! ತಮ್ಮ ಮಾಡಿದ ತಪ್ಪಿಗೆ ಅಮಾಯಕ ಅಣ್ಣ ಕರಿಕಿಚ್ಚನ ತಲೆ ಉರುಳಿದೆ.ಈ ಹತ್ಯೆ ಪ್ರಕರಣ ಸಂಬಂಧ ಮುಬಾರಕ್ ಅಲಿಯಾಸ್ ಮುಬ್ಬು, ಖಲೀಲ್ ಹಾಗೂ ಸತ್ಯಾನಂದ ಎನ್ನುವ ಆರೋಪಿಗಳನ್ನು ಹಳೇ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಹೇಮಂತ್ ಕುಮಾರ್ ಆಟೋ ಚಾಲಕನಾಗಿದ್ದನು.ತಾನಾಯಿತು ತನ್ನ ಕೆಲಸವಾಯಿತು ಎನ್ನುವಂತೆ ಬದುಕುತ್ತಿದ್ದ ಆಟೋ ಓಡಿಸಿ ದುಡಿದಂತ ಹಣದಲ್ಲಿ ಸಮಯ ಸಿಕ್ಕಾಗ ಎಣ್ಣೆ ಹೊಡೆಯುತ್ತಿದ್ದ ಬಿಟ್ಟರೆ ಯಾರಿಗೂ ತೊಂದರೆ ಕೊಡುವ ವ್ಯಕ್ತಿಯಲ್ಲ, ಅದೇನು ಗ್ರಹಚಾರವೊ ಈತ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೈನ್ ಶಾಪ್ಗೆ ಎಣ್ಣೆ ಹೊಡಿಯಲು ತೆರಳಿದ್ದಾಗ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹೇಮಂತ್ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ
ವೈನ್ ಶಾಪ್ನಲ್ಲಿ ಹೇಮಂತ್ ಕುಮಾರನ ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನೆಡೆಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಳೇ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಮಂತ ಅಲಿಯಾಸ್ ಕರಿಕಿಚ್ಚ ಹತ್ಯೆಯಾದ ವ್ಯಕ್ತಿ
Flashback
ಸರಣಿ ಹತ್ಯೆಯ ಫ್ಲ್ಯಾಶ್ ಬ್ಯಾಕ್…….
2019 ಏಪ್ರಿಲ್ ತಿಂಗಳ 8ನೇ ತಾರೀಖಿನಂದು ಮುಜ್ಜು ಅಮಾಯಕ ಯುವಕ ರಮೇಶನ ಹತ್ಯೆ ಗೈದು ಜೈಲುಪಾಲಾಗಿದ್ದ. ರಮೇಶ್ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲದಿದ್ದರು ಹಿನ್ನೆಲೆ ಇದ್ದವರ ಜೋತೆಗೆ ಹೆಂಡ ಕುಡಿಯಲು ಹೋಗಿ ಹೆಣವಾಗಿದ್ದ..! ನಿತ್ಯ ಪುಡಿ ಕಾಸಿಗಾಗಿ.ರಾತ್ರಿ ಪಾಳಯದ ಹೆಂಡಕ್ಕಾಗಿ ರಮೇಶ ಆಟೋ ಸುರೇಶ ಮತ್ತು ಸಂತೋಷ ಅಲಿಯಾಸ್ ಗುಂಡನ ಪಕ್ಕಾ ಶಿಷ್ಯನಾಗಿ ಹೊಗಿದ್ದ.
ರಮೇಶನ ಹತ್ಯೆ ಮಾಡಿದ ಮುಜಾಹೀದ್ ಅಲಿಯಾಸ್ ಮುಜ್ಜು..
ಅ ನಿಯತ್ತಿಗೆ ರಮೇಶ ಅಂದು ಬೊಮ್ಮನಕಟ್ಟೆಯ ವೈನ್ ಶಾಪ್ ಬಳಿ ರಾತ್ರಿ ಸುರೇಶ ಮತ್ತು ಸಂತೋಷನ ಜೋತೆಗೆ ಹೆಂಡಕುಡಿಯುತ್ತಿದ್ದ. ಅದೆ ಸಮಕ್ಕೆ ಅಲ್ಲಿಗೆ ಬಂದ ಮುಜ್ಜು ಇಸ್ಪೀಟ್ ದಂಧೆಗೆ ಕುರಿತಂತೆ ಸುರೇಶ ಮತ್ತು ಸಂತೋಷನ ಜೊತೆಗೆ ಜಗಳಕ್ಕೆ ಇಳಿದಿದ್ದ ಅ ಸಮಯದಲ್ಲಿ ಅಲ್ಲೆ ಪಕ್ಕದಲ್ಲೇ ಕುಳಿತಿದ್ದ ರಮೇಶ ನಶೆಯ ಮತ್ತಿನಲ್ಲಿ ಮುಜ್ಜು ಮೇಲೆ ಗಲಾಟೆಗೆ ನಿಂತಿದ್ದಾನೆ. ಮೊದಲೇ ಹತ್ಯೆಮಾಡಲು ಸಜ್ಜಾಗಿ ಬಂದಿದ್ದ ಮುಜ್ಜು ತನ್ನ ಬಳಿ ಇದ್ದ ಡ್ರ್ಯಾಗರ್ ನಿಂದ ರಮೇಶನ ಮೇಲೆ ಬಲವಾಗಿ ಅಟ್ಯಾಕ್ ಮಾಡಿದ್ದ ನಂತರ ಸುರೇಂದ್ರ ಮತ್ತು ಸಂತೋಷನ ಮೇಲು ಮುಗಿಬಿದ್ದು ಡ್ರಾಗರ್ ನಿಂದ ಚುಚ್ಚಿದ್ದ..! ಅಷ್ಟೋತ್ತಿಗಾಗಲೆ ಮುಜ್ಜುವಿನ ಅಟ್ಯಾಕ್ ನಿಂದ ಕುಸಿದು ಬಿದ್ದಿದ್ದ ರಮೇಶ್ ವೈನ್ ಶಾಪ್ ಅಂಗಳದಲ್ಲೆ ಹೆಣವಾಗಿ ಹೋಗಿದ್ದ…! ಸುರೇಂದ್ರ ಹಾಗೂ ಸಂತೋಷನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ಕಾರಣಕ್ಕೆ ಬದುಕುಳಿದಿದ್ದರು.
2013 ಜುಲೈ 21ರಂದು ಹತ್ಯೆಯಾದ ಮುಜ್ಜು
ಭದ್ರಾವತಿ 2023 ಜುಲೈ ,21 ಅಂದು ತಡರಾತ್ರಿ ಕೊಲೆಯಾದವನು ನಟೋರಿಯಸ್ ರೌಡಿ ಮುಜಾಹೀದ್ ಅಲಿಯಾಸ್ ಮುಜ್ಜು ಈತ 2019 ರಂದು ಬೊಮ್ಮನಕಟ್ಟೆ ವೈನ್ ಶಾಪ್ ಹತ್ತಿರ ರಮೇಶ್ ಎಂಬಾತನನ್ನು ಹತ್ಯೆಮಾಡಿದ ಆರೋಪಿ ನಟೋರಿಯಸ್ ರೌಡಿ ಮುಜ್ಜು ಈತ ಕೂಡ ಅಂದು ಮಡದಿಯ ನೆನಪಾಗಿ ಆಕೆಯ ಮನೆ ಹಾದಿ ಹಿಡಿದಿದ್ದ ಮುಜ್ಜು ಬೈಕಿನಿಂದ ಇಳಿದು ಇನ್ನೇನು ಆಕೆಯ ಮನೆ ಒಳ ಹೊಕ್ಕಬೇಕಿತ್ತು ಅಷ್ಟೋತ್ತಿಗಾಗಲೆ ಹೊಂಚು ಹಾಕಿ ಕುಳಿತ್ತಿದ್ದ ಐವರು ಹಂತಕರ ಗ್ಯಾಂಗ್..!! ಮುಜ್ಜು ತನ್ನ ಟು ವೀಲರ್ ಬೈಕಿನಲ್ಲಿ ಬಂದು ಇನ್ನೇನು ಅಕೆಯ ಮನೆಗೆ ಎಡತಾಗ ಬೇಕಿತ್ತು ಆದರೆ ಮುಜ್ಜು ಬೈಕಿನಿಂದ ಇಳಿಯುವ ಮೊದಲೇ ಲಾಂಗಿನಿಂದ ಮನಬಂದಂತೆ ಕೊಚ್ಚಿ ಕೆಡವಿದ್ದರು..! ಹಂತಕರು ಇತನ ಕೈ
ಹಾಗೂ ಮುಖದ ಭಾಗಕ್ಕೆ ಬಲವಾಗಿ ಬಿದ್ದ
ಲಾಂಗಿನೇಟಿಗೆ ಮಿಸುಕಾಡಲು ಸಾಧ್ಯವಾಗದೆ ಕತ್ತರಿಸಿ ಬಿದ್ದ ಮುಜ್ಜು ಬಿದ್ದ ಜಾಗದಲ್ಲಿಯೇ ರಕ್ತದ
ಮಡುವಿನಲ್ಲಿ ಕೊನೆ ಉಸಿರು ಏಳೆದಿದ್ದ..! ಅಲ್ಲಿಗೆ 2019 ರ ರಮೇಶನ ಹತ್ಯೆಯ ಪ್ರತಿಕಾರಕ್ಕೆ ಮುಜ್ಜು ಹತ್ಯೆ ನೆಡೆದುಹೋಗಿತ್ತು…..
2023 ಡಿಸೆಂಬರ್,20 ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹಂತಕರ ತಂಡವೊಂದು ರೌಡಿಶೀಟರ್ ಹಿರಿಯೂರಿನ ಸಂತೋಷ್ ಕುಮಾರ್ ಅಲಿಯಾಸ್ ಗುಂಡ ಅಲಿಯಾಸ್ ಕರಿಯಾ (33) ಇತನ ಸಹೋದರನನ್ನು ಹತ್ಯೆ ಮಾಡಿದ್ದಾರೆ! ಇದು ಮುಜ್ಜು ಹತ್ಯೆಯ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ ಓರ್ವನ ಸಹೋದರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಭದ್ರಾವತಿಯ ವೈನ್ ಶಾಪ್ ಒಂದರಲ್ಲಿ ನಡೆದಿದೆ. ಹೇಮಂತ್ ಕುಮಾರ್ ಅಲಿಯಾಸ್ ಕರಿಕ್ಕಿಚ್ಚ (38) ಕೊಲೆಯಾದ ವ್ಯಕ್ತಿ 2023 ರ ಜುಲೈ 21 ರಾತ್ರಿ ಹಿರಿಯೂರಿನ ಸಂತೋಷ್ ಕುಮಾರ್ ಅಲಿಯಾಸ್ ಗುಂಡ ಅಲಿಯಾಸ್ ಕರಿಯಾ, ಮುಜ್ಜು ಹತ್ಯೆಯ A1ಆರೋಪಿಯಾಗಿದ್ದ ರಿವೆಂಜಿಗೆ ಬಿದ್ದಿದ್ದ ಮುಜ್ಜು ಸಹಚರರು ಪ್ರತಿಕಾರಕ್ಕಾಗಿ ಕಾದು ಕುಳಿತು ಮುಜ್ಜು ಹತ್ಯೆಯ ಪ್ರಮುಖ ಆರೋಪಿಯ ಅಮಾಯಕ ಸಹೋದರನನ್ನೆ ಕೊಂದು ಕೆಡವಿದ್ದಾರೆ……..
ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ಳ ಬಹುದಾಗಿದ್ದ ವಿಷಯವನ್ನು ದೊಡ್ಡ ವಿಷಯ ಎನ್ನುವಂತೆ ಬಿಂಬಿಸಿಕೊಂಡ ವಿರೋಧಿಗಳ ಎರಡು ರೌಡಿ ಬಣಗಳು ಒಬ್ಬರಿಗೊಬ್ಬರು ನೆತ್ತರು ಹಾರಿಸಿಕೊಂಡು ಸೂತಕದ ಮನೆಯಲ್ಲಿ ಕುಳಿತಿದ್ದಾರೆ. ಎರಡು ಗ್ಯಾಂಗಿನ ಹಂತಕರಲ್ಲಿ ಯಾರ ತಲೆ ಉರುಳುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.!? ಅ ಮಟ್ಟಕ್ಕೆ ಹಂತಕ ಪಡೆಗಳು ಪ್ರತಿಕಾರಕ್ಕಾಗಿ ಸಮಯ ಕಾಯುತ್ತಿದ್ದಾರೆ ಮುಂದೆನಾಗುತ್ತದೆ, ಯಾರ ತಲೆ ಉರುಳುತ್ತದೆ ಎನ್ನುವುದು ಮಾತ್ರ…???
ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಗುಂಡನ ಸಹೋದರ ಹೇಮಂತ ಅಲಿಯಾಸ್ ಕರಿಕಿಚ್ಚನ ಹತ್ಯೆ ಮಾಡಿದ ಈ ಹಿಂದೆ ಮುಜ್ಜು ಸಹಚರರು
ಇಷ್ಟೆಲ್ಲಾ ಸರಣಿ ಹತ್ಯೆಗಳಾಗಿದ್ದರು ಭದ್ರಾವತಿಯ ಪೋಲಿಸರ ಮೌನವೆಕೆ? ಭದ್ರಾವತಿಯಲ್ಲಿ ಇಸ್ಫೀಟ್, ಗಾಂಜಾ ಕೊಲೆ,ಸುಲಿಗೆ,ಓಸಿ ಅಕ್ರಮದಂಧೆಯ ಆರ್ಭಟ ಮುಗಿಲು ಮುಟ್ಟಿದೆ
ಯಾಕೊ ಭದ್ರಾವತಿಯ ನಸಿಬು ನೆಟ್ಟಗೆ ಇದ್ದಂತೆ ಕಾಣುತ್ತಿಲ್ಲ, ಇಲ್ಲಿ ಜನನಾಯಕನಿಂದ ಆರಂಭಗೊಂಡು ಅಧಿಕಾರಿಗಳ ವರ್ಗದವರು ತಣ್ಣಗೆ ಹೊದ್ದು ಮಲಗಿದ್ದಾರೆ,ಅದರಲ್ಲೂ ಭದ್ರಾವತಿಯ ಪೋಲಿಸರಂತು ಎಲ್ಲಾ ಗೊತ್ತಿದ್ದು ಗೊತ್ತಿಲ್ಲದವರಂತೆ ಮೌನಕ್ಕೆ ಜಾರಿದ್ದಾರೆ. ಯಾವ ಮಟ್ಟಕ್ಕೆ ಕ್ರೈಮ್ ರೇಂಜ್ ಗಗನಕ್ಕೆ ಏರಿದೆ ಎಂದರೆ ಇಲ್ಲಿ ಅಕ್ರಮ ಚಟುವಟಿಕೆಗಳು ದೊ ನಂಬರ್ ದಂಧೆಗಳು,ಕೊಲೆ,ಸುಲಿಗೆ ಮತ್ತು ಇನ್ನಿತರ
ಕ್ರೈಮ್ ಆಕ್ಟಿವಿಟೀಸ್ ಗಳು
ರಾಜಾರೋಷವಾಗಿ ನಿತ್ಯ ಎಲ್ಲೆಂದರಲ್ಲಿ ನೆಡೆಯುತ್ತಿದ್ದರು ಪೊಲೀಸ್ ಇಲಾಖೆ ಮಾತ್ರ ಕಂಡು ಕಾಣದವರಂತೆ ಸೈಲೆಂಟಾಗಿ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಾರೆ.! ಇದಕ್ಕೆ ಕಾರಣವು ಇದೆ ಭದ್ರಾವತಿಯಲ್ಲಿ ಹೆಲ್ಮೆಟ್ ಕೆಸಿಗೂ ರಾಜಕಾರಣಿಗಳ ಫೋನ್ ಠಾಣೆಯಲ್ಲಿ ಪ್ರತಿಧ್ವನಿಸುತ್ತದೆ ಎಂದ ಮೇಲೆ ಪೋಲಿಸರು ಪಾಪದ ಕೃತ್ಯ ಮಾಡುವವರನ್ನು ಠಾಣೆಗೆ ಎಳೆದು ತಂದು ವಿಚಾರಣೆ ನೆಡೆಸಿ ದೂರು ದಾಖಲಿಸುವ ಮುನ್ನವೇ ಬರುವ ಫೋನ್ ಕಾಲಿನ ನಂತರ ಗೌರವವಾಗಿ ಕಳಿಸಿಕೊಡುವ ಪಾಪದ ಕೆಲಸ ಯಾರಿಗೂ ಬೇಡವಾಗಿದೆ, ಯಾವ ಮಟ್ಟಕ್ಕೆ ಕೇಲವು ರಾಜಕಾರಣಿಗಳು ಇಳಿಯುತ್ತಾರೆ ಎಂದರೆ ಆರೋಪಿಯನ್ನು ಹೊತ್ತು ತರವ ಜೀಪು ಇನ್ನೂ ಠಾಣೆಗೆ ಬಂದಿರುವುದಿಲ್ಲ ಅಷ್ಟೋತ್ತಿಗಾಗಲೆ ಆತನ ಬೆನ್ನಗೆ ನಿಂತ ಪುಡಾರಿಗಳ ದಂಡು ಠಾಣೆಯಲ್ಲಿ ಠಿಕಾಣಿ ಹೂಡಿರುತ್ತದೆ ಬಿಡಿಸಿಕೊಂಡು ಹೋಗಲು ಅ ಮಟ್ಟದ ಹೊಲಸು ರಾಜಕೀಯ ಭದ್ರಾವತಿಯನ್ನು ಸಂಪೂರ್ಣ ಕ್ರೈಮ್ ಸಿಟಿ ಮಾಡಿದೆ, ಮಾಡುತ್ತಿದ್ದಾರೆ ಯಾವ ಮಟ್ಟಕ್ಕೆ ನಗರ ಕುಲಗೆಟ್ಟು ಹೋಗಿದೆ ಎಂದರೆ ಒಂದು ಹತ್ಯೆಯಾದರೆ ಅ ಹತ್ಯೆಯ ಬೆನ್ನಿಗೆ ರಿವೆಂಜಿಗೆ ಮತ್ತೊಂದು ಹತ್ಯೆಯಾಗುತ್ತದೆ ಎನ್ನುವಷ್ಟರ ಮಟ್ಟಕ್ಕೆ ಲೆಕ್ಕ ಹಾಕಬಹುದಾಗಿದೆ, ಅ ಮಟ್ಟಕ್ಕೆ ಭದ್ರಾವತಿಯಲ್ಲಿ ರಿವೆಂಜಿನ ನೆತ್ತರು ಹರಿಸಲು ಹಂತಕ ಪಡೆ ರಾತ್ರಿ ಹಗಲೆನ್ನದೆ ಮಚ್ಚು ಮಸಿಯುತ್ತಾರೆ. ಭದ್ರಾವತಿಯ ವಾತವರಣ ಕುಲಗೆಟ್ಟು ಹೋಗಲು ಇಲ್ಲಿ ನೆಡೆಯುವ ಇಸ್ಫೀಟು, ಓಸಿ,ಕ್ರಿಕೆಟ್ ಬೆಟ್ಟಿಂಗ್ ದಂಧೆಯಿಂದ ಅದರಲ್ಲೂ ಇಸ್ಫೀಟ್ ದಂಧೆಯ ಖದರ್ರ್ ಮುಗಿಲು ಮುಟ್ಟಿದೆ,ಎಲ್ಲೆಂದರಲ್ಲಿ ರಲ್ಲಿ ಚಾಪೆಹಾಸಿ ಕುಳಿತು ಬಿಡುವ ಜೂಜು ಕೋರರ ದಂಡು ಒಳಗೆ ಹೊರಗೆ ಒಳಗೆ ಹೊರಗೆ ಎನ್ನುವಷ್ಟರಲ್ಲಿ ಆಟಕ್ಕೆ ಲಕ್ಷಗಟ್ಟಲೆ ಹಣತಂದು ಆಡಲು ಕುಳಿತವನ ಒಳಚಡ್ಡಿ ಜೇಬಿನಲ್ಲಿದ್ದ ಬಿಡಿಗಾಸು ಖಾಲಿಯಾಗಿರುತ್ತದೆ,ಇಲ್ಲಿಹಣ ಗೆದ್ದವನು ಅ ದಿನದ ಶೂರ ಸೋತವನು ಬಿಕಾರಿ ಇನ್ನೂ ಈ ದಂಧೆ ನೆಡೆಸುವವನದು ನಿತ್ಯ ಕಮಾಯಿ ಇನ್ನೂ ಈ ದಂಧೆಯಲ್ಲಿ ಯಾವುದೇ ಉಮೇದುವಾರಿಕೆ ಇಲ್ಲದೆಯೂ ಕೇಲವು ರಾಜಕಾರಣಿಗಳೆಂದು ಕೊಂಡವರ ಭರ್ಜರಿ ಲೂಟಿ ಇವರ ಕೆಲಸ ಎನೆಂದರೆ ಈ ದಂಧೆಕೋರರ ಸುತ್ತ ಪೋಲಿಸರು ಹೊಗದಿರುವಂತೆ ನೋಡಿಕೊಳ್ಳುವುದು ಮತ್ತು ಅರಿವಿಗೆ ಬಾರದೆ ರೈಡ್ ಅದರು ತಕ್ಷಣವೇ ಸಂಭಂದಪಟ್ಟ ಠಾಣೆಗೆ ಫೋನಾಯಿಸಿ ಬಂಧಿಸಿ ಕರೆತಂದಂತಹ ಜೂಜು ಕೋರರನ್ನು ಬಿಡುಸುವುದಷ್ಟೆ ಇವರ ಕೆಲಸವಾಗಿದೆ.ನಿತ್ಯ ಭದ್ರಾವತಿಯ ಚಿತ್ರಣ ಎಂತಹ ಹಿನತನಕ್ಕೆ ಬಂದು ನಿಂತಿದೆ ಎಂದರೆ ನೀವು ಉಹಿಸಲು ಸಾಧ್ಯವಿಲ್ಲ ಅ ಮಟ್ಟದ ಅಕ್ರಮ ಚಟುವಟಿಕೆಗಳು ಬಿಡುಬಿಟ್ಟಿವೆ ಭದ್ರೆಯ ಒಡಲಲ್ಲಿ
ರೌಡಿಗಳ ಹಾವಳಿಯಿಂದ ತತ್ತರಿಸಿ ಹೋಗಿದೆ ಭದ್ರಾವತಿ ಹಾಡುಹಗಲೇ ಚಿಮ್ಮುತ್ತಿರುವ ನೆತ್ತರಿನಿಂದ ತೋಯ್ದು ಹೋಗುತ್ತಿದೆ ಉಕ್ಕಿನ ನಗರಿ.!! ನಿತ್ಯ ಗ್ಯಾಂಗ್‌ವಾರ್‌ಗಳ ಅಬ್ಬರಕ್ಕೆ ತಲ್ಲಣಗೊಂಡಿದೆ. ಇಲ್ಲಿ ಕೊಲೆ, ಬೆದರಿಕೆ, ಹಫ್ತಾ ವಸೂಲಿ,ಇಸ್ಫೀಟ್, ಓಸಿ,ಗಾಂಜಾ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಂತಹ ದಂಧೆಯ ಹಪಾಹಪಿಗೆ ಬಿದ್ದ ರೌಡಿಗಳು ಮತ್ತು ದಂಧೆಕೋರರು ತಮ್ಮ ಕ್ರೂರತೆಯನ್ನೇ ಬಂಡವಾಳ ಮಾಡಿಕೊಂಡು ಮೆರೆಯುತ್ತಿದ್ದಾರೆ.ಭದ್ರಾವತಿಯ ಭೂಗತ ಜಗತ್ತು ಜಿಗಿತು ಕೊಂಡಾಗಿನಿಂದಲೂ ಒಂದಲ್ಲ ಒಂದು ರೀತಿಯಿಂದ ರೌಡಿಗಳನ್ನು ಮಟ್ಟಹಾಕುತ್ತಿದ್ದ ಕೆಲವೇ ಕೆಲವು ನಿಷ್ಟಾವಂತ ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಮಾಣಿಕ ಕರ್ತವ್ಯಕ್ಕೆ ಮುಂದಾಗುತ್ತಿದ್ದಂತೆ ಅದರ ಬೆನ್ನಿಗೆ ವರ್ಗಾವಣೆಯ ಅದೇಶ ಕೂಡ ಅವರನ್ನು ಹಿಂಬಾಲಿಸಿಕೊಂಡು ಬರುತ್ತದೆ.ಎಎಸ್ಐ, ಹೆಚ್ ಸಿ, ಪಿಸಿ ಅವರ ಪಾಡಂತು ಹೇಳ ತೀರದಾಗಿದೆ ಪಾಪ , ಎಲ್ಲಾ ಪಾಪಗಳನ್ನು ಕಣ್ಣಾರೆ ಕಂಡರು ಕಣ್ಣಿದ್ದು ಕುರುಡರಾಗಿದ್ದಾರೆ, ಏನಾದರೂ ತಮ್ಮ ಶಕ್ತಿ ಪ್ರದರ್ಶಿಸಲು ಹೋದರೆ ಮುಗಿತು ಕಥೆ ಅಲ್ಲಿಂದ ಸೂರಬ, ಕಾರ್ಗಲ್ ಕಡೆಗೆ ಪ್ರಯಾಣ ಬೆಳಸಬೇಕಾದ ಪರಿಸ್ಥಿತಿ.! ಹಾಗಂತ ಇಲ್ಲಿ ಎಲ್ಲರೂ ಪ್ರಾಮಾಣಿಕರಲ್ಲ! ಖಡಕ್ ಅಲ್ಲಾ 100 ಕ್ಕೆ 98% ಪ್ರಾಮಾಣಿಕರಿದ್ದರೆ ಗೊತ್ತಲ್ಲ ಒಂದೆರಡು ಪರ್ಸೆಂಟ್ ಬಕೆಟ್ ಗಿರಾಕಿಗಳು ಇಲಾಖೆ ಅಷ್ಟೂ ಮಾಹಿತಿಯನ್ನು ರವಾನಿಸುವಂತವರು ಹಣಕ್ಕಾಗಿ ತೊಟ್ಟ ಪವಿತ್ರ ಖಾಕೀಯನ್ನೆ ಮರೆತು ಮೆಸೇಜ್ ರವಾನಿಸುವ ನಿಚರು. ಪಕ್ಕಾ ಮಾಹಿತಿ ಆಧಾರದ ಮೇಲೆ ಪೋಲಿಸ್ ಅಧಿಕಾರಿಗಳ ತಂಡ ಯಾವುದಾದರೂ ಒಂದು ಇಸ್ಫೀಟ್ ರೈಡಿಗೆ ಅಂತ ಹೊರಟರೆ ಇಸ್ಫೀಟಿನ ಅಡ್ಡೆ ತಲಪುವಷ್ಟರಲ್ಲಿ ಅಲ್ಲಿ ಯಾರು ಇರುವುದಿಲ್ಲ. ಅಲ್ಲಿ ಬಿದ್ದಿದ್ದ ಚಾಪೆ ಮಾಸಿದ ಇಸ್ಫೀಟ್ ಎಲೆಗಳನ್ನು ಹೆಕ್ಕಿ ತರಬೇಕಾಗುತ್ತದೆ ಪೋಲಿಸರ ಪರಿಸ್ಥಿತಿ.!!, ಅಷ್ಟೋತ್ತಿಗಾಗಲೆ ಇಲಾಖೆಯಲ್ಲಿರುವ ಒಬ್ಬಾತನಿಂದ ರೈಡಿಗೆ ಬರುತ್ತಿದ್ದಾರೆ ಜಾಗ ಖಾಲಿಮಾಡಿ ಅಂತ ಮಾಹಿತಿ ತಲುಪಿರುತ್ತದೆ ಅ ಮಟ್ಟಕ್ಕೆ ಅಕ್ರಮ ದಂಧೆಗಳು ಬೆಳೆದು ನಿಂತಿದೆ ಭದ್ರಾವತಿಯಲ್ಲಿ….!?
ಪೋಲಿಸ್ ಇಲಾಖೆ ಇನ್ನಾದರು ಎಚ್ಚತ್ತು ಕೊಳ್ಳಬೇಕಿದೆ ಭದ್ರಾವತಿಯಲ್ಲಿ ನಿರಂತರವಾಗಿ ನೆಡೆಯುತ್ತಿರುವ ಇಸ್ಫೀಟ್, ಮಟ್ಕಾ ಮತ್ತು ಕ್ರಿಕೆಟ್ ಬೆಟ್ಟಿಂಗ್ ಹಾಗೂ ಅಕ್ರಮ ಮರಳು ದಂಧೆ.ಕಲ್ಲುಕೋರೆ ಮತ್ತು ಇನ್ನಿತರ ಜೂಜಿನಡ್ಡೆಗಳ ಮೇಲೆ ನಿಗಾ ಇಡಬೇಕಿದೆ ಎಲ್ಲಿ ಹಡಬೆ ದಂಧೆಗಳು ಮೈಚಾಚಿ ನಿಂತಿರುತ್ತವೆಯೊ ಅಲ್ಲಿ ಪಾತಕಲೋಕದ ನೆತ್ತರ ಕಮಟು ವಾಸನೆ ಬಡಿಯುತ್ತಿರುತ್ತವೆ.ಇಂತಹ ಪಾತಕಲೋಕದ ಅಕ್ರಮ ಚಟುವಟಿಕೆಗಳ ಮೇಲೆ ಪೋಲಿಸರು ಹದ್ದಿನ ಕಣ್ಣಿಡದೇ ಹೋದರೆ ಈಗಾಗಲೇ ರಿವೆಂಜಿನ ನಂಜಿಗೆ ನಲುಗಿ ಹೊಗಿರುವ ಭದ್ರಾವತಿ ಮತ್ತಷ್ಟು ಸರಣಿ ಕೊಲೆಗಳೊಂದಿಗೆ ಭೂಗತ ಲೋಕದಲ್ಲಿ ಮತ್ತಷ್ಟು ಆಕ್ಟಿವ್ ಆಗಲಿದೆ ಮತ್ತೆ ರಿವೆಂಜಿಗೊ ಇಲ್ಲಾ ಅಂಡರ್ ವರ್ಲ್ಡ್ಅನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲೊ ಮತ್ತೆ ಉಕ್ಕಿನ ನಗರಿ ಭದ್ರಾವತಿ ನೆತ್ತರ ಕೊಡಿಯಿಂದ ಮಿಂದೆಳಲಿದೆ…..!!
ಸರ್ಕಾರ ಕೂಡ ಇತ್ತ ಗಮನ ಹರಿಸ ಬೇಕಿದೆ,ತಮ್ಮನ್ನು ಅಧಿಕಾರದಲ್ಲಿ ಕೂರಿಸಿದ ಜನರ ಕಷ್ಟದ ಬಗ್ಗೆ ಧ್ವನಿ ಎತ್ತುವಂತಾಗಲಿ ಅಗ ಹಾಕಿದ ಮತಕ್ಕೂ ಸ್ಥಳೀಯ ಜನರಿಗೂ ನ್ಯಾಯಸಿಗುವಂತಾಗುತ್ತದೆ
ಹೇಮಂತ ಅಲಿಯಾಸ್ ಕರಿಕಿಚ್ಚನನ್ನು ಹತ್ಯೆಮಾಡಿದ ಮೂವರು ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದಾಗ ಹೇದರಿ ಹೋಗಿದ್ದಾರೆ..!? ಕಾರಣವಿಷ್ಟೇ ಎಲ್ಲಿ ಇವರನ್ನು ಶಿವಮೊಗ್ಗ ಜೈಲಿನ ಬ್ಯಾರಕ್ ತಳ್ಳುತ್ತಾರೆಂದು.? ಅದಕ್ಕಾಗಿ ಶಿವಮೊಗ್ಗ ಜೈಲನ್ನು ಬಿಟ್ಟು ಬೇರೆ ಜೈಲಿಗೆ ಕಳಿಸುಕೊಡುವಂತೆ ಕೇಳಿಕೊಂಡಿದ್ದರಂತೆ!? ಕಾರಣ ಶಿವಮೊಗ್ಗ ಜೈಲಿನ ಬ್ಯಾರಕ್ಕಿನ ಹಿಂದೆ ತನ್ನ ಮೇಲಿನ ಜಿದ್ದಿಗೆ ಸಹೋದರ ಹೇಮಂತನನ್ನು ಕಳೆದು ಕೊಂಡ ಸಂತೋಷ್ ಕುಮಾರ್ ಅಲಿಯಾಸ್ ಗುಂಡ ತಲೆಕೆಡಸಿಕೊಂಡು ಕುಳಿತ್ತಿದ್ದಾನೆ. ಎನ್ನುವ ಅರಿವಿದ್ದ ಆರೋಪಿಗಳು ನಡುಗಿ ಹೋಗಿದ್ದಾರೆ. ನಾವು ಶಿವಮೊಗ್ಗ ಜೈಲು ಪಾಲಾದರೆ ಅಲ್ಲೆ ಪ್ರತಿಕಾರಕ್ಕೆ ಬಲಿಯಾಗುತ್ತೇವೆ ಎನ್ನುವ ಅನುಮಾನ ಇವರನ್ನು ಕಾಡಿರ ಬಹುದು? ಸಧ್ಯಕ್ಕೆ ಮೂವರು ಆರೋಪಿಗಳು ಬೇರೆ ಜೈಲಿನಲ್ಲಿದ್ದಾರೆ ಎನ್ನುವುದೆ ಸಮಾಧಾನ…