ತುಂಗಾ ನಗರ ಪೋಲಿಸರ ಭರ್ಜರಿ ಬೇಟೆ: ನಾಲ್ಕು ಮಂದಿ ಖದೀಮರ ಬಂಧನದ ಜೋತೆಗೆ 13,87,000 ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡ ಹಿರಿಮೆ ಪೋಲಿಸರದ್ದು
ಶಿವಮೊಗ್ಗ-ಎ ಉಪ ವಿಭಾಗದ ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನವಾದ ಮಾಲು ಹಾಗೂ ಆರೋಪಿಗಳ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಲರಾಜ್, ಬಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ - ಎ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಶ್ರೀ ಮಂಜುನಾಥ್.ಬಿ. ಪಿಐ ರವರ ನೇತೃತ್ವದ, ಶ್ರೀ ಶಿವಪ್ರಸಾದ್ ವಿ. ಪಿಎಸ್ಐ, ಶ್ರೀ ಮಂಜುನಾಥ್ ಪಿ.ಎಸ್.ಐ, ಶ್ರೀ ರಘುವಿರ್ ಎಮ್. ಪಿ.ಎಸ್.ಐ. ಶ್ರೀ ಕುಮಾರ ಕೂರಗುಂದ ಪಿ.ಎಸ್.ಐ. ಶ್ರೀ ದೂದ್ಯಾನಾಯ್ಕ ಪಿ.ಎಸ್.ಐ, ಶ್ರೀ ಮನೋಹರ್ ಎ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಹೆಚ್ ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್ ಮತ್ತು ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ. ಹಾಗೂ ಚೇತನ ರವರಗಳನ್ನು ಒಳಗೊಂಡ ವಿಶೇಷ ಪೋಲಿಸರ ತನಿಖಾ ತಂಡವನ್ನು ರಚಿಸಲಾಗಿತ್ತು
ಖದೀಮರ ಗ್ಯಾಂಗನ್ನು ಖೆಡ್ಡಕ್ಕೆ ಕೆಡವಲು ಭಲೇ ಬಿಸಿದ ಪೋಲಿಸರ ತಂಡ ಕಳ್ಳರನ್ನು ಬಂಧಿಸುವುದರೊಂದಿಗೆ ಭರ್ಜರಿ ಬೇಟೆ ಆಡಿದ್ದಾರೆ. ಬಂಧಿತರಲ್ಲಿ ಸಂತೋಷ ಅಲಿಯಾಸ್ ಎಮ್ಮೆ ಸಂತೋಷ (36) ಮಾಗಡಿ ರಸ್ತೆ ಬೆಂಗಳೂರು, ಇತನ ಮೂಲ ವಿಳಾಸ ಶಿವಪ್ಪ ಬಡಾವಣೆ, ಅಲ್ಲೂರು ರಸ್ತೆ ಪಿರಿಯಾಪಟ್ಟಣ ಮೈಸೂರು ಜಿಲ್ಲೆ, ಎರಡನೇ ಆರೋಪಿ ಮಹಮದ್ ನದ್ದಿಮ್ ಅಲಿಯಾಸ್ ನದ್ದಿಮ್ (30) ಶಿವಮೊಗ್ಗ ನಗರದ ಅಶೋಕ ನಗರ ನಿವಾಸಿ, ಮೂರನೇ ಆರೋಪಿ ಇಮ್ರಾನ್ (32) ಶಿವಮೊಗ್ಗ ನಗರದ ಅಶೋಕನಗರ ನಿವಾಸಿ ಮತ್ತು ನಾಲ್ಕನೇ ಆರೋಪಿ ಸುರೇಶ್ ಕೆ (43) ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಶಿವಮೊಗ್ಗ ನಿವಾಸಿ ಈ ನಾಲ್ಕು ಮಂದಿ ಖದೀಮರನ್ನು ಬಂಧಿಸಿ ಆರೋಪಿಗಳಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಐದು ಸ್ವತ್ತು ಕಳವು ಪ್ರಕರಣಗಳಾದ 1) ಗುನ್ನೆ ಸಂಖ್ಯೆ 128/2023, 2) ಗುನ್ನೆ ಸಂಖ್ಯೆ 175/2023, 3) ಗುನ್ನೆ ಸಂಖ್ಯೆ 412/2023, 4) ಗುನ್ನೆ ಸಂಖ್ಯೆ 462/2023 ಮತ್ತು 5) ಗುನ್ನೆ ಸಂಖ್ಯೆ 483/2023 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ಮೌಲ್ಯ 12,65,000/- ರೂಗಳ 230 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 72,000/- ರೂಗಳ 1 ಕೆಜಿ 200 ಗ್ರಾಂ ಬೆಳ್ಳಿ ಆಭರಣಗಳು, ರೂ 25,140/- ನಗದು ಹಣ, ಅಂದಾಜು ಮೌಲ್ಯ 10,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು ರೂ 13,87,000/- ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ
ಸದರಿ ತನಿಖಾ ತಂಡದ ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರ ತಂಡ ಹಗಲಿರು ಖದೀಮರ ಪತ್ತೆಗಾಗಿ ಕಾರ್ಯಚರಣೆಗೆ ನೆಡೆಸಿ ಕೊನೆಗೂ ಆರೋಪಿತರನ್ನು ಬಂಧಿಸುವುದರ ಜೋತೆಗೆ ಕಳುವಾದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪ್ರಾಮಾಣಿಕತೆ ಮೆರೆದ ಪೋಲಿಸರ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಮೆಚ್ಚಿ ಅಭಿನಂದಿಸಿರುತ್ತಾರೆ.