ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ ಮಾಲತಿ ನದಿ ಪಾತ್ರದಲ್ಲಿ ನದಿ ನೀರಿಗೆ ಜೆಸಿಬಿ ಇಳಿಸಿ ಮರಳು ಲೂಟಿ! ಅಧಿಕಾರಿಗಳ ಮೌನ!! ಗ್ರಾಮಸ್ಥರ ಪ್ರತಿಭಟನೆ

ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ ಮಾಲತಿ ನದಿ ಪಾತ್ರದಲ್ಲಿ ನದಿ ನೀರಿಗೆ ಜೆಸಿಬಿ ಇಳಿಸಿ ಮರಳು ಲೂಟಿ! ಅಧಿಕಾರಿಗಳ ಮೌನ!! ಗ್ರಾಮಸ್ಥರ ಪ್ರತಿಭಟನೆ

ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ ಮಾಲತಿ ನದಿ ಪಾತ್ರದಲ್ಲಿ ಮರಳು ಲೂಟಿ! ಟೆಂಡರ್ ಹೆಸರಿನಲ್ಲಿ ನದಿಯ ನೀರಿಗೆ ಜೆಸಿಬಿ ಇಳಿಸಿ ನದಿಯ ಒಡಲನ್ನೆ ಬಗೆಯುತ್ತಿರುವ ಖದೀಮರು. ತಮ್ಮ ಟೆಂಡರ್ ಜಾಗವನ್ನು ಬಿಟ್ಟು ನದಿಯ ಎರಡು ದಡದಲ್ಲಿ ಅಕ್ರಮವಾಗಿ ಮರಳು ಲೂಟಿ! ಲೂಟಿ ಕೋರರ ಬೆನ್ನಿಗೆ ನಿಂತರ ಅಧಿಕಾರಿಗ ದಂಡು!

ತೀರ್ಥಹಳ್ಳಿಯ ಮಣ್ಣಲ್ಲೆ ಬೆಳೆದು ಈ ಪವಿತ್ರ ಮಣ್ಣಿನ ಅನ್ನ ತಿಂದಂತಹ ಖದೀಮರ ಗ್ಯಾಂಗ್ ಸರತಿ ಪ್ರಕಾರ ಅಕ್ರಮವಾಗಿ ಮರಳು ಲೂಟಿಗೆ ಇಳಿದಿದ್ದಾರೆ. ತಮ್ಮ ವೈಯುಕ್ತಿಕ ಸ್ವರ್ಥಕ್ಕಾಗಿ ತಾಲ್ಲೂಕನ್ನು ಬೆಂಗಾಡಾಗಿಸಲು ಹೊರಟಿರುವ ಅಕ್ರಮ ಮರಳು ಗಣಿಗಾರಿಕೆಯ ಖದೀಮರನ್ನು ಸ್ಥಳೀಯ ಜನರು ಇನ್ನೂ ಸಹಿಸಿಕೊಂಡಿದ್ದಾರೆಂಬುವುದೇ ದುರಂತ..! ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನೆಡೆಯುತ್ತಿರುವ ಮರಳು ಗಣಿಗಾರಿಕೆಯ ಅಗಾಧತೆಯನ್ನು ಅರಿಯಬೇಕಾದರೆ ತಾಲ್ಲೂಕಿನ ಬಾಗೋಡು,ಮಳಲೂರುಮಹಿಷಿ,ಆಗುಂಬೆ,ಮೇಗರವಳ್ಳಿ ಇನ್ನೂ ಹತ್ತು ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಪ್ರದೇಶಗಳನ್ನೊಮ್ಮೆ ಕಣ್ಣಾರೆ ಕಂಡು ಬರಬೇಕು. ಈ ಹಳ್ಳಿಗಳ ತೋಟ ಗದ್ದೆಗಳ ರೋಗಿಷ್ಟ ಬೆಳೆಗಳನ್ನು ಯಾವುದೊ ಶಾಪಕ್ಕೀಡಾದಂತೆ ನೀರಿಲ್ಲದೆ ಒಣಗಿ‌ ಕುಳಿತಿವೆ, ಇದರ ಬೆನ್ನಿಗೆ ಎಲೆ‌ಚುಕ್ಕಿ ರೋಗ ರೈತನನ್ನು ಸಂಪೂರ್ಣವಾಗಿ ನಲಗುವಂತೆ ಮಾಡಿದೆ. ಕುಡಿಯುವ ನೀರಿಲ್ಲದೆ ಮಾಲತಿ ನದಿ ಪಾತ್ರದ ಜನ ಮುಗಿಲು ನೋಡುವಂತಾಗಿದೆ. ಆ ಮಟ್ಟಕ್ಕೆ ಅಕ್ರಮ ಮರಳು ಲೂಟಿ ನೆಡೆಯುತ್ತಿದದ್ದರು ಸಂಭಂದಪಟ್ಟ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಇನ್ನೂ ಕೆಲವರಂತು ಅಕ್ರಮ ಮರಳಿನಲ್ಲೂ ಪಾಪದ ಹಣ ಏಣಿಸುತ್ತಿದ್ದಾರೆ. ಈ ಕಾರಣದಿಂದಲೇ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನೆಡೆಯುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ

ಅದರಲ್ಲೂ ಆಗುಂಬೆ ಹೋಬಳಿ ಮಳಲೂರು ಗ್ರಾಮದ ಸರ್ವೇ ನಂಬರ್ 74 ರಲ್ಲಿನ ಮಾಲತಿ ನದಿ ತೀರದಲ್ಲಿ ಮರಳು ಕೋರೆ ಟೆಂಡರ್ ಆಗಿದ್ದು ಅದರೆ ಗುತ್ತಿಗೆದಾರ ಜೆಸಿಬಿ ಮುಕಾಂತರ ನದಿಯ ನದಿಯ ಒಡಲಿಗೆ ಇಳಿದು ನಡು ನೀರಿನಿಂದ ಜೆಸಿಬಿಯಿಂದ ಮರಳು ತಗೆಯುತ್ತಿದ್ದಾನೆ.

ಇನ್ನೂ ರಾತ್ರಿ ಯಾಗುತ್ತಿದ್ದಂತೆ ಇನ್ನೂಳಿದ ನದಿಯ ಉದ್ದಗಲಕ್ಕೂ ಅಕ್ರಮ ಮರಳು ದಂಧೆಕೋರರು ಲೂಟಿಗಿಳಿದಿದ್ದಾರೆ. ರಾತ್ರಿ ಎಲ್ಲಾ ಗ್ರಾಮದ ರಸ್ತೆಯಲ್ಲಿ ಟಿಪ್ಪರ್, ಲಾರಿ,ಪಿಕಪ್ ವಾಹನಗಳದ್ದೆ ಆರ್ಭಟ ಜೋರಾಗಿ ಗ್ರಾಮದ ಜನರ ಸ್ಥಿತಿ ಹೇಗಾಗಿದೆ ಎಂದರೆ. ನದಿ ನೀರಿಗೆ ಜೆಸಿಬಿ ಇಳಿಸಿ ಮರಳು ಬಗೆಯುವುದರಿಂದ ಕುಡಿಯುವ ನೀರಿಲ್ಲ. ತೋಟ ಗದ್ದೆಗಳ ಪಾಡು ಅ ದೇವರಿಗೆ ಪ್ರೀತಿ ಇನ್ನೂ ಹಗಲು ತೋಟ ಗದ್ದೆಗಳಲ್ಲಿ ಧಣಿದ ದೇಹಕ್ಕೆ ವಿಶ್ರಾಂತಿ ಪಡೆಯೋಣ ಅಂದರೆ ಅದಕ್ಕೂ ತೊಂದರೆ ಯಾಗುತ್ತಿದೆ ಅಕ್ರಮ ಮರಳನ್ನು ಹೊತ್ತೊಯ್ಯುವ ವಾಹನಗಳ ಆರ್ಭಟದಿಂದ. ಒಟ್ಟಿನಲ್ಲಿ ಈ ಹಡಬೆ ದಂಧೆಯನ್ನು ಕೆಳುವವರಿಲ್ಲದಂತಾಗಿದೆ. ಸ್ಥಳೀಯ ಗ್ರಾಮಸ್ಥರು ಸಾಕಷ್ಟು ಬಾರಿ ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಅಧಿಕಾರಿ ವರ್ಗದವರೆ ಇಂತಹಾ ಅಕ್ರಮವಾಗಿ ಮರಳು ಎತ್ತಲು ಹೆಗಲು ಕೊಟ್ಟಿದ್ದಾರೆ. ಬೆಲಿಯೆ ಎದ್ದು ಹೊಲ ಮೆಯುತ್ತಿರುವುದರಿಂದ ಇಂತವರನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಮಳಲೂರಿನ ಗ್ರಾಮಸ್ಥರು ಕೋರೆ ನಡೆಸಬಾರದು ಎಂದು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳು ಮತ್ತು ಪೋಲಿಸ್ ಇಲಾಖೆಗೂ ಹಾಗೂ ತಹಶಿಲ್ದಾರರಿಗೂ ಮನವಿ ನೀಡಿದರು ಪ್ರಯೋಜನ ವಾಗಿಲ್ಲ. ಇನ್ನೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅದಿಕಾರಿಗಳಿಗೆ ಹೇಳಿದರು ಅಷ್ಟೇ ಬಿಟ್ಟರು ಅಷ್ಟೇ ಕೋಣನಮುಂದೆ ಕಿಂದರಿ ಬಾರಿಸಿದಂತೆ. ದಿನ ನಿತ್ಯ ಪೀಕಪ್ ವಾಹನದಲ್ಲಿ ಅಕ್ರಮ ಮರಳು ಲೂಟಿ ನಡೆಸುತ್ತಿದ್ದು ಕೇಳುವವರೆ ಇಲ್ಲದಂತಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ

ಇಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಲ್ಲಿ ಹಿರಿಯ ಅಧಿಕಾರಿ ನವಿನ್ ಅವರು ಸ್ವಲ್ಪಮಟ್ಟಿಗಿನ ಜವಬ್ದಾರಿ ತೆಗೆದುಕೊಂಡರೆ ಉಳಿದಂತೆ ತೀರ್ಥಹಳ್ಳಿಯ ಗಣಿ ಮತ್ತು ಭೂವಿಜ್ಞಾನಗಳ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಗಳು ಸರತಿಸಾಲಿನಲ್ಲಿ ಭರ್ಜರಿ ಊಟಕ್ಕೆ ಕುಳಿತಿದ್ದಾರೆ. ಅದರಲ್ಲೂ ಜೋತಿ‌ ಮೇಡಂ ಅವರಿಗೆ ಯಾಕೋ ಅತಿಯಾದ ಹಸಿವಿದ್ದಂತೆ ಕಾಣುತ್ತದೆ. ಈ ಕಾರಣದಿಂದಲೇ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಬಂಡೆ ಮತ್ತು ಮರಳುಲೂಟಿಯಿಂದ ಅಕ್ರಮದ ಜಾತ್ರೆಯೆ ನೆಡೆಯುತ್ತಿದೆ. ನಾವು ಕೂಡ ಈ ಹಾದಿಯಲ್ಲಿ ಸಾಕಷ್ಟು ಸುದ್ದಿ ಮಾಡಿದ್ದೇವೆ. ಅದರು ಪ್ರಯೋಜನ ವಾಗಿಲ್ಲ ಈ ಕಾರಣಕ್ಕೆ ತೀರ್ಥಹಳ್ಳಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯ ಹಸಿವಿನ ಆಗಾದತೆಯನ್ನು ನಿಮ್ಮ ಮುಂದಿಡಲಿದ್ದೇನೆ ನಿರೀಕ್ಷಿಸಿ

Leave a Reply

Your email address will not be published. Required fields are marked *

Optimized by Optimole
error: Content is protected !!