ಶಿವಮೊಗ್ಗ ವೇಶ್ಯಾವಾಟಿಕೆ (Prostitution ) ಅಡ್ಡೆಯಮೇಲೆ ಪೋಲಿಸರ ದಾಳಿ : ಹುಬ್ಬಳ್ಳಿ, ಮೈಸೂರು, ಬೆಂಗಳೂರಿನಿಂದ ಕರೆದು ತರುತ್ತಿದ್ದರಂತೆ ಮಹಿಳೆಯರನ್ನು.!!

ಸ್ಥಳೀಯ ನಿವಾಸಿಗಳ ಕಣ್ಣಿಗೆ ಕಚೇರಿ ಮತ್ತು ಗೋಡೌನ್‌ಗಾಗಿ ಬಾಡಿಗೆ ಪಡೆದುಕೊಂಡವರಂತೆ ಬಿಂಬಿಸಿಕೊಂಡು ರಾತ್ರಿ ಹಗಲು ಮಾಂಸದ ದಂಧೆಯಲ್ಲಿ ನಿರತನನಾಗಿದ್ದ ತಲೆಹಿಡುಕ ಗಂಗಾಧರ, ಇದು ಕಟ್ಟಡವೊಂದರ ನೆಲ ಮಳಿಗೆಯಲ್ಲಿತ್ತು. ಯಾರಿಗೂ ಕಿಂಚಿತ್ತು ಆನುಮಾನ ಬಾರದರೀತಿಯಲ್ಲಿ ದಂಧೆ ಮಾಡುತ್ತಿದ್ದರು.ಇನ್ನೂ ಈ ನೆಲ ಮಳಿಗೆಯ ಮನೆಯನ್ನು ಯುವಕನೊಬ್ಬ ಬಾಡಿಗೆಗೆ ಪಡೆದಿದ್ದ. ಅದರಲ್ಲಿಯೇ ವೇಶ್ಯಾವಾಟಿಕೆ ದಂಧೆ ಜೋರಾಗಿ ನೆಡೆಯುತ್ತಿತ್ತು,ರಾತ್ರಿ ಹಗಲು ವಾಹನಗಳ ಓಡಾಟ ಅಡ್ಡಕ್ಕೆ ಬರುವ ಗಿರಾಕಿಗಳಿಂದ ಅನುಮಾನಗೊಂಡ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ ಕಾರಣಕ್ಕೆ ಈ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿಮಾಡಲು ಸಾಧ್ಯವಾಯಿತು…..

ವ್ಯೇಶ್ಯಾವಾಟಿಕೆ ದಂಧೆ ನೆಡೆಯುತ್ತಿದ್ದ ಮನೆ

ಶಿವಮೊಗ್ಗ ವೇಶ್ಯಾವಾಟಿಕೆ (Prostitution )
ಅಡ್ಡೆಯಮೇಲೆ ಪೋಲಿಸರ ದಾಳಿ : ಹುಬ್ಬಳ್ಳಿ, ಮೈಸೂರು, ಬೆಂಗಳೂರಿನಿಂದ ಕರೆದು ತರುತ್ತಿದ್ದರಂತೆ ಮಹಿಳೆಯರನ್ನು.!!

ಅತಿದೊಡ್ಡ ಕೆಂಪು ಬೆಳಕಿನ ( ರೆಡ್ ಲೈಟ್ ಏರಿಯಾ ) ಪ್ರದೇಶವಾಗಲಿದೆಯಾ ಮಲೆನಾಡು!?

in.ashwasurya.com

ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿಯ ಬೆನ್ನಿಗೆ ಕೆಲವು ಸ್ಫಾ ಸೆಂಟರ್ ಗಳು ಹೈಟೆಕ್ ಆಗುವುದರ ವ್ಯೇಶ್ಯಾವಾಟಿಕೆ ದಂಧೆಯನ್ನು ನೆಡಸುತ್ತಿರುವುದರ ಜೋತೆಗೆ ಬೆಳೆಯುತ್ತಿರುವ ನಗರದಲ್ಲಿ ಅಕ್ರಮ ಹೈಟೆಕ್ ವ್ಯೇಶ್ಯಾವಾಟಿಕೆ ಕೂಡ ಎಲ್ಲೆಂದರಲ್ಲಿ ತಲೆ ಎತ್ತಿ ನಿಂತಿವೆ. ಮಹಿಳೆಯರನ್ನು ಮೂರು ತಿಂಗಳು, ಆರು ತಿಂಗಳ ಕಮೀಟಿ ಮೆಂಟ್ ಆಧಾರದ ಮೇಲೆ ಕರೆದುತಂದು ಯಾರ ಭಯವಿಲ್ಲದೆ ದಂಧೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಶಿವಮೊಗ್ಗ ಮಾಂಸ ದಂಧೆಯ ಕೂಪವಾಗುತ್ತಿದೆ ಎಂದರೆ ತಪ್ಪಾಗಲಾರದು ಆ ಮಟ್ಟದ ಬೆಳವಣಿಗೆ ಶಿವಮೊಗ್ಗ ನಗರದಲ್ಲಾಗಿದೆ. ಶಿವಮೊಗ್ಗದ ಇಂತಹುದೇ ಒಂದು ಅಡ್ಡೆಯ ಮೇಲೆ ಜಯನಗರ ಪೊಲೀಸರು ದಾಳಿ ಮಾಡಿದ್ದಾರೆ ಈ ದಾಳಿಯ ಸಂಧರ್ಭದಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಮಲೆನಾಡಿನ ತವರು ನಗರಿ ಸುಸಂಸ್ಕೃತರ ನೆಲೆಯಾಗಿದ್ದ ಜಿಲ್ಲೆ ಇಂದು‌ ಕಲಗೆಟ್ಟು ಹೋಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗಿರುವ ತುಂಗೆಯ ತಟದಲ್ಲಿ ಕ್ರೈಮ್ ರೇಟ್ ಗಗನಕ್ಕೆರಿದೆ ಇಲ್ಲಿ ಪೋಲಿಸರು ಎಷ್ಟೇ ದಕ್ಷತೆ ತೋರಿದರು ಕ್ರಿಮಿನಲ್ ಗಳು ಇನ್ನಷ್ಟು ಚಿಗುತು ಕೊಂಡಿದ್ದಾರೆ.
ಪಕ್ಕಾ ಮಾಹಿತಿ ಆಧಾರದ ಮೇಲೆ ವೈಶ್ಯವಾಟಿಕೆಯ ಅಡ್ಡೆಯ ಮೇಲೆ ದಾಳಿ ಮಾಡಿದ ಶಿವಮೊಗ್ಗ ಜಯನಗರ ಠಾಣೆಯ ಪೊಲೀಸರ ತಂಡ ನಗರದ ಪ್ರತಿಷ್ಠಿತ ಬಡಾವಣೆಗಲ್ಲಿ ಒಂದಾದ ಗಾಂಧಿನಗರದ 1ನೇ ಅಡ್ಡ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಸಂಧರ್ಭದಲ್ಲಿ ಮನೆಯಲ್ಲಿದ್ದಂತಹ ಮೂವರು ಮಹಿಳೆಯರು ಮತ್ತು ಇಬ್ಬರು ಗಂಡಸರನ್ನು ಸೇರಿ ಒಟ್ಟು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಚರಣೆಯಲ್ಲಿ
ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ ಅವರ ನೇತೃತ್ವದಲ್ಲಿ ಪೋಲಿಸರ ತಂಡ ದಾಳಿ ಮಾಡಿದ್ದು, ದಂಧೆಯಲ್ಲಿ ನಿರತರಾಗಿದ್ದ ಸಿಕ್ಕಿಬಿದ್ದವರನ್ನು ವಿಚಾರಣೆ ಮಾಡಿದಾಗ ಮತ್ತಷ್ಟು ಸ್ಪೋಟಕ ಮಾಹಿತಿಗಳು ಬೆಳಕಿಗೆ ಬಂದಿದೆ. ಈ ಹಿನಾ ಸೂಳಿಯ ದಂಧೆಯ ತಲೆಹಿಡುಕ ( ಏಜೆಂಟ್ ) ಗಂಗಾಧರ್ ಎಂಬಾತ ಹುಬ್ಬಳ್ಳಿ, ಮೈಸೂರು, ಬೆಂಗಳೂರು ಅಲ್ಲದೆ ಇನ್ನಿತರ ಊರುಗಳ ಜೋತೆಗೆ ಹೊರ ರಾಜ್ಯದ ಹೆಂಗಸರನ್ನು ಕರೆದು ತರುತ್ತಿದ್ದನಂತೆ ಈ ರೀತಿ ಕರೆದುತಂದ ಮಹಿಳೆಯರನ್ನು ಇಟ್ಟುಕೊಂಡು ವ್ಯೇಶ್ಯಾವಾಟಿಕೆ ( Prostitution )
ದಂಧೆ ನಡೆಸುತ್ತಿದ್ದನಂತೆ. ಇನ್ನೂ ಪೊಲೀಸರ ದಾಳಿಯ ವೇಳೆ ಸ್ಥಳೀಯ ಓರ್ವ ಮಹಿಳೆ, ಬೆಂಗಳೂರು ಮತ್ತು ಮೈಸೂರಿನಿಂದ ಬಂದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ ಅಮಾಕ ಮಹಿಳೆಯರ ಮೈಮಾರಿ ಬದುಕುತ್ತಿದ್ದ ದಂಧೆಕೋರರ ವಿರುದ್ಧ ದೂರು ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನೆಡೆಯುತ್ತಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!