ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತು ನಾಯಕರಿಗೆ ಮತ್ತೆ ನಿರಾಸೆ

ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತು ನಾಯಕರಿಗೆ ಮತ್ತೆ ನಿರಾಸೆ

news.ashwasurya.in

ಬೆಂಗಳೂರು,ಡಿ.22- ದೆಹಲಿಗೆ ಹೋಗಿ ನಿಗಮ ಮಂಡಳಿಗಳ ನೇಮಕಾತಿಯ ಪಟ್ಟಿಯನ್ನು ಫೈನಲ್ ಮಾಡಿಕೊಂಡು ಬರುವುದಾಗಿ ಹೋಗಿದ್ದ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ! ಇದರಿಂದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು, ಕಾರ್ಯಕರ್ತರಿಗೆ ಮತ್ತೊಮ್ಮೆ ನಿರಾಶೆ ಆಗಿದೆ. ಕಳೆದ ಒಂದೆರಡು ತಿಂಗಳುಗಳಿಂದಲು ನಿಗಮ ಮಂಡಳಿಗಳ ನೇಮಕಾತಿ ಗುಮ್ಮ ಕಾಂಗ್ರೆಸ್ ವಲಯದಲ್ಲಿ ಕೂತುಹಲ ಮೂಡಿಸಿತ್ತು ಈ ಕುರಿತಂತೆ ಸಾಕಷ್ಟು ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ. ಮೊದಲ ಹಂತ ನೇಮಕಾತಿಯಲ್ಲಿ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುವುದು. ಎರಡನೇ ಹಂತದಲ್ಲಿ ಕಾರ್ಯಕರ್ತರನ್ನು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೊತಂತವರಿಗೆ
ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು. ನಿಗಮ ಮಂಡಳಿಯ ನೇಮಕಾತಿ ವಿಚಾರವಾಗಿಯೆ ಪಟ್ಟಿಯನ್ನು ಫೈನಲ್ ಮಾಡಿಕೊಂಡು ಅನುಮತಿ ಪಡೆದುಕೊಂಡೇ ಬರುವುದಾಗಿ ಪ್ರತಿಜ್ಞೆ ತೊಟ್ಟಿ
ದೆಹಲಿಗೆ ಜಂಟಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರಿ ಕೈಯಲ್ಲಿ ವಾಪಸ್ಸಾಗಿದ್ದಾರೆ. ದೆಹಲಿಯಲ್ಲೂ ಮಾಧ್ಯಮದವರ ಮುಂದೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಶೀಘ್ರದಲ್ಲೇ ಫೈನಲ್ ಆಗಲಿದೆ ನೇಮಕಾತಿ ಪಟ್ಟಿಯನ್ನು ರಿಲೀಸ್ ಮಾಡುತ್ತೇವೆ. ಲೋಕಸಭೆ ಚುನಾವಣೆಗೂ ಮೊದಲೇ ಇದು ಆಗಬೇಕಾಗಿದೆ ಎಂದು ಪುನರುಚ್ಛರಿಸಿದ್ದರು.ಅದರೆ ಇದೂ ಮತ್ತೊಮ್ಮೆ ಟುಸ್ ಪಟಾಕಿ ಯಾಗಿದೆ. ಯಾವುದಾದರೊಂದು ನಿಗಮ ಮಂಡಳಿಗೆ ಅಧ್ಯಕ್ಷರಾಗುತ್ತೇವೆ ಎಂದು ಮೂಗಿಗೆ ತುಪ್ಪ ಸವರಿಸಿಕೊಂಡವರ ಪಾಡು ಅ ದೇವರಿಗೆ ಪ್ರೀತಿಯಾಗಿದೆ. ಆದರೆ ದೆಹಲಿಯಿಂದ ಮರಳಿದ ಇಬ್ಬರೂ ನಾಯಕರು ಬರಿಗೈನಲ್ಲಿ ವಾಪಸ್ ಬಂದಂತೆ ಕಾಣುತ್ತಿದೆ. ಆಪ್ತ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ನಡುವೆ ಮತ್ತೆ ಹೊಂದಾಣಿಕೆಯಾಗದ ಕಾರಣಕ್ಕೆ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಗೆ ಮುಕ್ತಿ ಸಿಕ್ಕಿಲ್ಲ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ರಾಹುಲ್ ಗಾಂಧಿ ಕಾರ್ಯಕರ್ತರ ಹೆಸರನ್ನು ಸೇರಿಸಿಕೊಂಡು ಬನ್ನಿ. ಬರಲಿರುವ ಸಂಸತ್ ಚುನಾವಣೆಯಲ್ಲಿ ಅವರುಗಳು ಹುರಿದುಂಬಿ ಕೇಲಸ ಮಾಡಬೇಕಿದೆ ಅವರನ್ನು ಕಡೆಗಣಿಸಬಾರದು ಎಂದು ಹೇಳಿದ ಕಾರಣಕ್ಕೆ.
40ಕ್ಕೂ ಹೆಚ್ಚು ಶಾಸಕರನ್ನು ಮೊದಲ ಹಂತದಲ್ಲಿ ನಿಗಮ ಮಂಡಳಿಗಳಿಗೆ ನೇಮಿಸಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಇರಾದೆಯಾಗಿತ್ತೊ ಅದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂಬುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಾಸೆಯು ಆಗಿದೆ ಈ ಇಬ್ಬರ ನಡುವಿನ ಹಗ್ಗ ಜಗ್ಗಾಟದಲ್ಲಿ ಶಾಸಕರು ಅತಂತ್ರರಾಗಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಿ ಸಮಾಧಾನಪಡಿಸುವ ಕಾರ್ಯಕ್ಕೂ ಕಲ್ಲು ಬಿದ್ದಿದೆ

ಹೊಸ ವರ್ಷದ ಆರಂಭದಲ್ಲಿ ಒಲಿದ ನಿಗಮ ಮಂಡಳಿಯ ಸ್ಥಾನಕ್ಕೆ ಪದಗ್ರಹಣ ಮಾಡಿ ಸರ್ಕಾರಿ ಕಾರಿನಲ್ಲಿ ಓಡಾಡುವ ಕನಸು ಕಂಡಿದ್ದವರಿಗಂತೂ ಸಂಪೂರ್ಣ ನಿರಾಶರಾಗಿದ್ದಾರೆ.

ಅದರೂ ಮತ್ತೆದೆ‌‌ ನಿಗಮ ಮಂಡಳಿಯ ಗುಮ್ಮ.!

ಡಿಸೆಂಬರ್ 29 ರಂದು ಮತ್ತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಾಗುತ್ತಿದ್ದು, ಆ ವೇಳೆ ನಿಗಮ ಮಂಡಳಿ ಚರ್ಚೆ ನಡೆಸುವುದಾಗಿ ರಾಜ್ಯ ನಾಯಕರು ಮತ್ತೊಮ್ಮೆ ಭರವಸೆ ನೀಡಿದ್ದಾರೆ ಎನ್ನುವುದೆ ಸಮಾಧಾನದ ವಿಷಯ

Leave a Reply

Your email address will not be published. Required fields are marked *

Optimized by Optimole
error: Content is protected !!