ಕಳ್ಳನಿಂದ ವಶಪಡಿಸಿಕೊಂಡ ಮಾಲು ಮತ್ತು ಪೋಲಿಸರ ತಂಡ
ಖದೀಮ ಕಳ್ಳನನ್ನು ಬಂಧಿಸಿದ ಸಾಗರ ಪೋಲಿಸರು : ಬಂಧಿತನಿಂದ ಸುಮಾರು
6,32,400 ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ವಶ!
ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ಸಾಗರ ನಗರ ಪೊಲೀಸ್ ಠಾಣೆ ಮತ್ತು ಆನಂದಪುರ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಇತ್ತೀಚೆಗೆ ಕೆಲವು ಮನೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದು ಸದರಿ ಪ್ರಕರಣಗಳಲ್ಲಿ ಕಳ್ಳತನವಾದ ಮಾಲುಗಳು ಮತ್ತು ಆರೋಪಿಗಳ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐ.ಪಿ.ಎಸ್ ಹಾಗೂ
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ
ಶ್ರೀ ಅನಿಲ್ ಕುಮಾರ್ ಭೂಮಾರಡ್ಡಿ ಇವರುಗಳ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ಟಿ ನಾಯಕ್ ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ ಶ್ರೀ ಮಹಾಬಲೇಶ್ವರ ಪಿಐ ಸಾಗರ ಗ್ರಾಮಾಂತರ ಠಾಣೆ, ಶ್ರೀಮತಿ ಸುಜಾತ ಪಿಎಸ್ಐ ಸಾಗರ ಟೌನ್ ಠಾಣೆ ಮತ್ತು ಶ್ರೀ ಯುವರಾಜ್ ಪಿಎಸ್ಐ ಆನಂದಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ಹೆಚ್‌ಸಿ ಸನಾವುಲ್ಲಾ, ಷೇಖ್ ಫೈರೋಜ್ ಅಹಮದ್ ಮತ್ತು ಪಿಸಿ ರವಿಕುಮಾರ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು
ಸದರಿ ತನಿಖಾ ತಂಡವು ಆರೋಪಿಯ ಬೆನ್ನಿಗೆ ಬಿದ್ದು ತೌಸಿಪ್ ಅಲಿಯಾಸ್ ಬಾಯಿಜಾನ್ ( 25 ) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಈತ ಶಿವಮೊಗ್ಗ ನಗರದ ಟಿಪ್ಪುನಗರ ವಾಸಿಯಾಗಿದ್ದು ಹಲವು ಪ್ರಕರಣಗಳಲ್ಲಿ ಇತನಿದ್ದು ಆರೋಪಿತನಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ 1) ಗುನ್ನೆ ಸಂಖ್ಯೆ 217/2023 ರ ಪಿರ್ಯಾದಿ ಶ್ರೀ ಗಗನ್ ವಾಸ ಕರ್ಕಿಕೊಪ್ಪ , 2) ಗುನ್ನೆ ಸಂಖ್ಯೆ 231/2023 ರ ಪಿರ್ಯಾದಿ ಶ್ರೀಮತಿ ವಾಸ ಗೀಜಗಾರು , 3) ಗುನ್ನೆ ಸಂಖ್ಯೆ 235/2023 ರ ಪಿರ್ಯಾದಿ ಶ್ರೀ ರಾಮಚಂದ್ರ ವಾಸ ತೊರಗೋಡು ಶಿರುವಾಳ, 4) ಗುನ್ನೆ ಸಂಖ್ಯೆ 236/2023 ರ ಪಿರ್ಯಾದಿ ಶ್ರೀಮತಿ ರೇಣುಕಮ್ಮ ವಾಸ ಬಳಸಗೋಡು ಹಾಗೂ ಸಾಗರ ಪೇಟೆ ಪೊಲೀಸ್ ಠಾಣೆಯ, 5) ಗುನ್ನೆ ಸಂಖ್ಯೆ 221/2022 ರ ಪಿರ್ಯಾದಿ ಶ್ರೀ ಸಂತೋಷ್ ವಾಸ ಧರ್ಮಶ್ರೀ ಲೇ ಔಟ್ ಗೋಪಾಲಗೌಡ ನಗರ,
6) ಗುನ್ನೆ ಸಂಖ್ಯೆ 222/2022 ರ ಪಿರ್ಯಾದಿ ಶ್ರೀ ರಂಗನಾಥ ವಾಸ ಧರ್ಮಶ್ರೀ ಲೇ ಔಟ್ ಗೋಪಾಲಗೌಡ ನಗರ, 7) ಗುನ್ನೆ ಸಂಖ್ಯೆ 223/2022 ರ ಪಿರ್ಯಾದಿ ಮಧು ವಾಸ ಕಂಬಳಿಕೊಪ್ಪ ಮತ್ತು ಆನಂದಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, 8) ಗುನ್ನೆ ಸಂಖ್ಯೆ 143/2023 ರ ಪಿರ್ಯಾದಿ ತೀರ್ಥ ವಾಸ ಬೋಳನಕಟ್ಟೆ ರವರುಗಳು ನೀಡಿದ ದೂರಿನ ಮೇರೆಗೆ ದಾಖಲಾದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ 4, ಸಾಗರ ಟೌನ್ ಪೊಲೀಸ್ ಠಾಣೆಯ 3 ಮತ್ತು ಆನಂದಪುರ ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 8 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಅಂದಾಜು ಮೌಲ್ಯ 5,70,000/- ರೂ ಗಳ 100 ಗ್ರಾಂ ತೂಕದ ಬಂಗಾರದ ಆಭರಣ ಮತ್ತು ಅಂದಾಜು ಮೌಲ್ಯ 62,400/- ರೂಗಳ 1 ಕೆ.ಜಿ ಬೆಳ್ಳಿ ಆಭರಣಗಳು ಸೇರಿ ಒಟ್ಟು 6,32,400/- ರೂ ಮೌಲ್ಯದ ಮಾಲನ್ನು ಆರೋಪಿತನಿಂದ ವಶಪಡಿಸಿಕೊಳ್ಳಲಾಗಿದೆ.
ಸದರಿ ತನಿಖಾ ತಂಡದ ಉತ್ತಮವಾದ ಈ ಕಾರ್ಯಚರಣೆಯನ್ನು ಮೆಚ್ಚಿ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.