ಸಮಾಜ ಸೇವಕ ಲೀಲಾಧರ ಶೆಟ್ಟಿ ಪತ್ನಿ ವಸುಂಧರಾ ಶೆಟ್ಟಿ ಆತ್ಮಹತ್ಯೆಗೆ ಶರಣು
ಲೀಲಾಧರ ಶೆಟ್ಟಿ (68) ಹಾಗೂ ವಸುಂಧರಾ ಶೆಟ್ಟಿ (58) ದಂಪತಿ ಮಂಗಳವಾರ ತಡರಾತ್ರಿ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಮಗಳನ್ನು ಅಪಹರಿಸಿದ ಹಿನ್ನಲೆಯಲ್ಲಿ ಅವಳು ಕಾಣೆಯಾಗಿದ್ದು. ಅವಳು ಪುನಹ ಬಂದರು ಗೌರವವಾಗಿ ಬದುಕಿದ ದಂಪತಿಗಳಿಗೆ ಸಮಾಜದ ಎದುರು ತಲೆತಗ್ಗಿಸ ಬೇಕಾದಿತು ಎನ್ನುವ ಕಾರಣಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದರು . ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದರು. ಪೊಲೀಸರು ಅಪಹರಣವಾದ ಇವರ ಮಗಳ ಹುಡುಕಾಟಕ್ಕೆ ಮುಂದಾದರೆ. ಊರಿನ ಜನ ಸಮಾಜ ಸೇವಕ, ಹಿರಿಯ ಕಲಾವಿದ ಮತ್ತು ಜನಸ್ನೇಹಿಯಾಗಿದ್ದ ಲೀಲಾಧರ ಶೆಟ್ಟಿ ಮತ್ತು ಅವರ ಮಡದಿ ವಸುಂಧರಾ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಸಾವಿರಾರು ಜನರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದರು. ಲೀಲಾಧರ ಶೆಟ್ಟಿ ಕಲೆ, ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರಾವಳಿ ಭಾಗದಲ್ಲಿ ಚಿರಪರಿಚಿತರಾಗಿದ್ದರು.
ಕಾಪು ಸಮಾಜ ಸೇವಕ ಲೀಲಾಧರ ಶೆಟ್ಟಿ ಪುತ್ರಿಯ ಅಪಹರಣ : ನಾಲ್ವರು ಆರೋಪಿಗಳ ಬಂಧನ : ಬಂಧಿತರ ವಿರುದ್ಧ ಫೋಕ್ಸೊ ಪ್ರಕರಣ ದಾಖಲು
ಬಂಧಿತರಾದ ನಾಲ್ವರು ಆರೋಪಿಗಳು
news.ashwasurya.in
ಕಾಪು ಪೊಲೀಸರ ದಕ್ಷ ಕಾರ್ಯಾಚರಣೆಯಿಂದ ಅಪಹರಣಕ್ಕೊಳಗಾದ ಅಪ್ರಾಪ್ತ ಬಾಲಕಿಯ ಬಿಡುಗಡೆ ನಾಲ್ಕು ಮಂದಿ ಕಿರಾತಕರ ಬಂಧನ ಪೋಕ್ಸೊ ಪ್ರಕರಣ ದಾಖಲು
ಕಾಪು: ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿಯ ಅಪ್ರಾಪ್ತ ವಯಸ್ಸಿನ ಪುತ್ರಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಾಪು ಪೊಲೀಸರು ಕಾಸರಗೋಡಿನ ಕುಂಬ್ಳೆ ಎಂಬಲ್ಲಿ ಕಳೆದ ಭಾನುವಾರ ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಬಂಧಿತರಲ್ಲಿ ಅಪ್ರಾಪ್ತ ಬಾಲಕಿಯ ಸ್ನೇಹಿತ ಶಿರ್ವ ನಿವಾಸಿ ಗೀರಿಶ್ (20), ಮತ್ತು ಈತನಿಗೆ ಅಪಹರಿಸಲು ಹೆಗಲು ಕೊಟ್ಟ ಶಿರ್ವ ನಿವಾಸಿಗಳಾದ ಜಯಂತ್ (23) ರೂಪೇಶ್ (22) ಮತ್ತೊಬ್ಬ ಮಜೂರು ನಿವಾಸಿ ಮೊಹ್ಮದ್ ಅಝೀಜ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ
ಲೀಲಾಧರ ಶೆಟ್ಟಿ ದಂಪತಿಗಳು ಕಳೆದ ಹದಿನಾರು ವರ್ಷದ ಹಿಂದೆ ತಮಗೆ ಮಕ್ಕಳಿಲ್ಲದ ಕಾರಣಕ್ಕೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಆಕೆ ಡಿಸೆಂಬರ್ 11 ರಂದು ಮನೆಯಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಗಿರೀಶ್ ವಿರುದ್ಧ ದೂರು ದಾಖಲಾಗಿತ್ತು. ತಮ್ಮ ಅಪ್ರಾಪ್ತ
ಮಗಳು ನಾಪತ್ತೆಯಾಗಿರುವ ಚಿಂತೆಯಲ್ಲಿ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಎಲ್ ಶೆಟ್ಟಿ ಕುಸಿದು ಹೋಗಿದ್ದರು. ಗೌರವದಿಂದ ಬದುಕುತ್ತಿದ್ದ ದಂಪತಿಗಳಿಗೆ ಮಗಳು ಕಾಣೆಯಾದ ಹಿನ್ನಲೆಯಲ್ಲಿ ಸಮಾಜಕ್ಕೆ ಹೆದರಿಕೊಂಡು ಮರ್ಯಾದೆಗೆ ಅಂಜಿ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಕೊಂಡು ದಂಪತಿಗಳಿಬ್ಬರು ಆತ್ಮಹತ್ಯೆ ಶರಣಾಗಿದ್ದರು.
ಒಂದು ಕಡೆ ಲೀಲಾಧರ ಶೆಟ್ಟಿ ಅವರ ಮಗಳು ಕಾಣೆಯಾಗಿದ್ದು ಆರೋಪಿಗಳಿಗಾಗಿ ಭಲೇ ಬಿಸಿದ್ದ ಪೋಲಿಸರಿಗೆ. ಮಗಳು ಮನೆಗೆ ಬರುವ ಮೊದಲೆ ಲೀಲಾಧರ ಶೆಟ್ಟಿ
ಪತ್ನಿ ವಸುಂಧರಾ ಎಲ್ ಶೆಟ್ಟಿ ಅವರ ಆತ್ಮಹತ್ಯೆಯಿಂದ ಆರೋಪಿಗಳ ಬಂಧನಕ್ಕೆ ಖಡಕ್ ಕಾರ್ಯಚರಣೆಗೆ ಇಳಿದ ಪೋಲಿಸರ ತಂಡ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ಈ ಪ್ರಕರಣಕ್ಕೆ ಸಂಭಂದಿಸಿದಂತೆ ದೂರು ದಾಖಲಿಸಿಕೊಂಡಿದ್ದ ಪೋಲಿಸರು
ಆರೋಪಿ ಗಿರೀಶ್ ವಿರುದ್ದ ಪೋಕ್ಸೊ, ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳನ್ನು ಹಾಗೂ ಇತರ ಮೂವರ ವಿರುದ್ದ ಪೋಕ್ಸೊ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಕಾಪು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಟಿ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಇವರ ಮಾರ್ಗದರ್ಶನದಲ್ಲಿ ಕಾಪು ಸಿಪಿಐ ಜಯಶ್ರೀ ಮಾನೆ ನೇತೃತ್ವದಲ್ಲಿ ಕಾಪು ಪಿಎಸ್ಐ ಅಬ್ದುಲ್ ಖಾದರ್ ಮತ್ತವರ ತಂಡ ಈ ಕಾರ್ಯಚರಣೆ ನಡೆಸಿ ಆರೋಪಿತರನ್ನು ಬಂಧಿಸಿದ್ದರು