ಗೆಳೆಯ ಅಶ್ವಜಿತ್ ಗೆಳತಿ ಪ್ರಿಯಾ ಸಿಂಗ್
In her complaint, Priya Singh alleged that around 4.30am on Monday, she reached the Courtyard Hotel to meet Gaikwad, but he refused to do so. When he came out of the hotel, they both had an argument after which Gaikwad assaulted her and bit her on her hand.
ತನ್ನ ಗೆಳತಿ ಮೇಲೆ ಕಾರು ಹರಿಸಿ ಕೈ, ಕಾಲು ಮುರಿದ IAS ಅಧಿಕಾರಿಯ ಮಗ!
ಮಹಾರಾಷ್ಟ್ರದ ಥಾಣೆ ನಗರದಲ್ಲಿ ಕಳೆದ ಎರಡುದಿನದ ಹಿಂದೆ ಮುಂಜಾನೆ 4.30ರ ಸುಮಾರಿಗೆ ಗೆಳೆಯ ಅಶ್ವಜಿತ್ ನನ್ನು ಬೇಟಿಯಾಗಲು ಪ್ರೀಯಾ ಸಿಂಗ್ ಕೋರ್ಟ್‌ಯಾರ್ಡ್ ಹೋಟೆಲ್‌ಗೆ ಹೋಗಿದ್ದರು ಹೋಟೆಲ್ ನಲ್ಲಿ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಕಿರಿಕ್ ಆಗಿದೆ ಹೋಟೆಲ್‌ನಿಂದ ಹೊರಗೆ ಬಂದಿದ್ದಾರೆ ಅ ಸಮಯದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಗಾಯಕ್ವಾಡ್ ಆಕೆಯ ಮೇಲೆ ಹಲ್ಲೆ ನಡೆಸಿ ಕೈಗೆ ಕಚ್ಚಿದ್ದಾನೆ.
ಹಲ್ಲೆಗೊಳಗಾದ ಯುವತಿಯನ್ನು ಪ್ರಿಯಾ ಸಿಂಗ್ ಎಂದು ಗುರುತಿಸಲಾಗಿದೆ, ವೃತ್ತಿಯಲ್ಲಿ ಬ್ಯೂಟಿಷಿಯನ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವಂತಹ ಯುವತಿ
ಥಾಣೆ: ನಗರದ ಐಎಎಸ್ ಅಧಿಕಾರಿಯೊಬ್ಬರ ಮಗ ತನ್ನ ಎಸ್‌ಯುವಿಯನ್ನು ಚಲಾಯಿಸಿ ತನ್ನನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು 26 ವರ್ಷದ ಯುವತಿಯೊಬ್ಬರು ಆರೋಪಿಸಿದ್ದಾರೆ. ವೃತ್ತಿಯಲ್ಲಿ ಬ್ಯೂಟಿಷಿಯನ್ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿರುವ ಇವಳನ್ನು ಪ್ರಿಯಾ ಸಿಂಗ್ ಎಂದು ಗುರುತಿಸಲಾಗಿದೆ. ಆಕೆಯ ದೇಹದ ಹಿಂಭಾಗ, ಕೈಗಳು ಮತ್ತು ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು ಮತ್ತು ಕಾಲು ಮುರಿದಿರುವ ಕಾರಣಕ್ಕೆ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ ಆದರೆ ಇಲ್ಲಿಯವರೆಗೆ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲವೆಂದು ತಿಳಿದುಬಂದಿದೆ!
ಕಾಸರವಾಡವಲಿ ಪೊಲೀಸರು ಪ್ರಮುಖ ಆರೋಪಿ ಅಶ್ವಜಿತ್ ಗಾಯಕ್ವಾಡ್ ಮತ್ತು ಆತನ ಇಬ್ಬರು ಸ್ನೇಹಿತರಾದ ರೋಮಿಲ್ ಪಾಟೀಲ್ ಮತ್ತು ಸಾಗರ್ ಶೆಲ್ಕೆ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಹೊರತು ಈ ಪ್ರಕರಣದ ಆರೋಪಿಗಳನ್ನು ಮಾತ್ರ ಇದುವರೆಗೂ ಬಂಧಿಸಿಲ್ಲ!
ಕಳೆದ ಒಂದೆರಡು ದಿನದ ಹಿಂದೆ ಮುಂಜಾನೆ ಈ ಘಟನೆ ನಡೆದಿದ್ದು, ಮಹಿಳೆ ತನಗಾದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳು ಪ್ರಭಾವಿ ಕುಟುಂಬಕ್ಕೆ ಸೇರಿದವರಾಗಿದ್ದು, ಕೆಲ ರಾಜಕಾರಣಿಗಳ ಜತೆ ಸಂಪರ್ಕ ಹೊಂದಿರುವುದರಿಂದ ಪೊಲೀಸರು ಪ್ರಕರಣದ ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ ಗಾಯಗೊಂಡ ಯುವತಿ
ಹೋಟೆಲ್ ನಲ್ಲಿ ನನ್ನೊಂದಿಗೆ ಜಗಳವಾಡಿದ್ದ ಇಬ್ಬರೂ ಹೊರಗೆ ಬಂದಿದ್ದೇವು ಸಮಯ ಸುಮಾರು 4:30 ಮುಂಜಾನೆ. ಅಶ್ವಜಿತ್ ತನ್ನ ಎಸ್‌ಯುವಿ ಕಾರನ್ನು ನನ್ನ ಮೇಲೆ ಚಲಾಯಿಸಲು ಪ್ರಯತ್ನಿಸಿದನು. ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ಸಂಬಂಧ ಹೊಂದಿದ್ದೇವೆ. ಇತ್ತೀಚೆಗಷ್ಟೇ ಆತನಿಗೆ ಮದುವೆಯಾಗಿರುವುದು ಗೊತ್ತಾಯಿತು. ನಾವಿಬ್ಬರು ಭೇಟಿಯಾದಾಗ ಅವನು ತನ್ನ ಹೆಂಡತಿಯಿಂದ ಬೇರ್ಪಟ್ಟಿದ್ದೇನೆ ಮತ್ತು ಶೀಘ್ರದಲ್ಲೇ ವಿಚ್ಛೇದನ ತೆಗೆದುಕೊಂಡು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದ. ಆದಾಗ್ಯೂ ನನ್ನೊಂದಿಗೆ ಜಗಳವಾಡಿ ಹೋಟೆಲ್ ನಿಂದ ಹೊರಬರುತ್ತಿದ್ದಂತೆ ಕಾರನ್ನು ನನ್ನ ಮೇಲೆ ಚಲಾಯಿಸಿ ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ!? ಎಂದು ಆಸ್ಪತ್ರೆಯಲ್ಲಿರುವ ಪ್ರಿಯಾ ಸಿಂಗ್ ಹೇಳಿದ್ದಾರೆ. ಗೆಳೆಯನ ಈ ಕೃತ್ಯದಿಂದ ಪ್ರಿಯಾಗೆ ಹೊಟ್ಟೆ, ಬೆನ್ನು ಮತ್ತು ತೋಳು, ಕಾಲುಗಳಿಗೆ ಬಲವಾದ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ ಮತ್ತು ಬಲಗಾಲು ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ
ಪ್ರಿಯಾ ಸಿಂಗ್ ಅವರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 279 (ಅಪವೇಗದ ಚಾಲನೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 338 (ಘೋರವಾದ ಗಾಯವನ್ನುಂಟುಮಾಡುವುದು), 504 (ಉದ್ದೇಶಪೂರ್ವಕವಾಗಿ ಯಾರನ್ನಾದರೂ ಪ್ರಚೋದಿಸಲು ಅವಮಾನಿಸುವುದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. .
ಆದರೆ ಆಕೆಯ ಆರೋಪಗಳನ್ನು ತಳ್ಳಿಹಾಕಿದ ಅಶ್ವಜಿತ್ ಗಾಯಕ್‌ವಾಡ್, ಆಕೆ ಯಾವುದನ್ನು ಬಿಂಬಿಸಿ ದೂರು ದಾಖಲಿಸಿರುವುದು ಅದು ಸುಳ್ಳು. ಅವಳು ಕೇವಲ ಸ್ನೇಹಿತೆ. ವಾಸ್ತವವಾಗಿ, ಅವಳು ನಾವು ಕುಟುಂಬ ಸಮೇತರಾಗಿ ಸಮಾರಂಭವನ್ನು ಹಮ್ಮಿಕೊಂಡಿದ್ದ ಹೋಟೆಲ್‌ಗೆ ಕುಡಿದು ಬಂದಿದ್ದಳು ಮತ್ತು ಅವಳೊಂದಿಗೆ ಮಾತನಾಡಲು ನನ್ನನ್ನು ಒತ್ತಾಯಿಸಲು ಪ್ರಯತ್ನಿಸಿದಳು. ನಾನು ನಿರಾಕರಿಸಿದಾಗ, ಅವಳು ನನ್ನನ್ನು ನಿಂದಿಸಲು ಪ್ರಾರಂಭಿಸಿದಳು. ನನ್ನ ಸ್ನೇಹಿತರು ಮಧ್ಯಪ್ರವೇಶಿಸಿ ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಳು. ನನ್ನ ಸ್ನೇಹಿತ ಕಾರನ್ನು ಚಲಾಯಿಸಿಕೊಂಡು ಬರುವಾಗ ದುರದೃಷ್ಟವಶಾತ್ ಅವಳು ರಸ್ತೆಯ ಮೇಲೆ ಬಿದ್ದಳು. ಅಪಘಾತ ಉದ್ದೇಶಪೂರ್ವಕವಾಗಿಲ್ಲ ಎಂದು ಹೇಳಿದ್ದಾನೆ.
ಇನ್ನೂ ಪ್ರಿಯಾ ಸಿಂಗ್ ದಾಖಲಿಸಿರುವ ದೂರನ್ನು ಆಧರಿಸಿ ತನಿಖೆ ನಡೆಯುತ್ತಿದ್ದು, ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಥಾಣೆ ಡಿಸಿಪಿ ಅಮರಸಿಂಗ್ ಜಾಧವ್ ಹೇಳಿದ್ದಾರೆ.
ಪ್ರಮುಖ ಆರೋಪಿ ಅಶ್ವಜಿತ್ ಗಾಯಕ್ವಾಡ್, ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (MSRDC) ವ್ಯವಸ್ಥಾಪಕ ನಿರ್ದೇಶಕರ ಪುತ್ರನೆಂದು ಹೇಳಲಾಗಿದೆ.!?