ಸಂಸತ್ ಭವನದ ಭದ್ರತಾ ವೈಫಲ್ಯ: ರಾಷ್ಟ್ರವೇ ತಲೆತಗ್ಗಿಸುವಂತಹ ಈ ಕೃತ್ಯದ ಬಗ್ಗೆ ಬಾಯಿ ಬಿಡದ ಪ್ರಧಾನಿ ಮತ್ತು ಬಿಜೆಪಿಯ ಸಂಸದರು ಶಾಸಕರು!? :
ಹೆಚ್.ಎಸ್. ಸುಂದರೇಶ್ ವಾಗ್ದಾಳಿ
ಶಿವಮೊಗ್ಗ : ಸಂಸತ್ತಿನ ಕಲಾಪದ ನಡುವೆ ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿ ಬಂದ ಆರೋಪಿಗಳು ಸ್ಮೋಕ್ ಕ್ಯಾನಿಸ್ಟರ್‌ಗಳಿಂದ ಹಳದಿ ಹೋಗೆ ಸಿಡಿಸಿದ ಘಟನೆಯ ಬಗ್ಗೆ ಪ್ರಧಾನಿಯಾಗಲಿ, ಬಿಜೆಪಿಯ ಸಂಸದರು, ಶಾಸಕರಾಗಲಿ ಬಾಯಿ ಬಿಡುತ್ತಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಸುದ್ದಿ ಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ಮಾಡಿದರು.
ಅವರು ಇಂದು ಕಾಂಗ್ರೆಸ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಈ ಘಟನೆ ನಡೆದು ನಾಲ್ಕೈದು ದಿನಗಳಾಗಿದ್ದು ಇದೊಂದು ದೇಶವೆ ತಲೆತಗ್ಗಿಸುವಂತಹ ಭದ್ರತಾ ವೈಪಲ್ಯದ ಗಂಭೀರ ವಿಷಯವಾಗಿದೆ. ಸಂಸತ್ ಮೇಲಿನ ದಾಳಿ ಎನ್ನುವುದು ಸುಲಭದ ವಿಷಯವೇ ಅಲ್ಲ ಕೇಂದ್ರ ಸರ್ಕಾರ ಈ ದಾಳಿಯನ್ನು ಗಂಭೀರವಾಗಿ ಏಕೆ ತೆಗೆದುಕೊಂಡಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿದೆ? ಯಾವುದೇ ಒಬ್ಬ ಬಿಜೆಪಿಯ ಸಂಸದರಾಗಲಿ ಶಾಸಕರಾಗಲಿ ಈ ಬಗ್ಗೆ ಚಕಾರಕೂಡ ಎತ್ತುತ್ತಿಲ್ಲ ಮೋದಿ, ಅಮಿತ್‍ಷಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಎಲ್ಲರೂ ಮೌನಕ್ಕೆ ಜಾರಿದ್ದಾರೆ.
ಸಂಸತ್ತಿನ ಕಲಾಪದ ನಡುವೆಯೇ ಆರೋಪಿಗಳು ಸ್ಮೋಕ್ ಕ್ಯಾನಿಸ್ಟರ್‌ಗಳಿಂದ ಹಳದಿ ಹೊಗೆಯನ್ನು ಸಂಸತ್ತಿನಲ್ಲಿ ಸಿಡಿಸಿದ
ಘಟನೆಯನ್ನು ನೋಡಿದರೆ ಸಂಶಯ ಬರುತ್ತದೆ. ದೇಶದ ಹೃದಯದಂತಿರುವ ಸಂಸತ್ತಿಗೆ ಭದ್ರತೆಯೇ ಇಲ್ಲಾ ಎಂದ ಮೇಲೆ ದೇಶದ ಪ್ರಜೆಗಳ ಗತಿ ಏನು.!?
ಈ ಘಟನೆಯನ್ನು ಯಾವುದೇ ತನಿಖಾ ಸಂಸ್ಥೆಗಳಿಗೆ ನೀಡಬಾರದು ಏಕೆಂದರೆ ತನಿಖಾ ಸಂಸ್ಥೆಗಳೆಲ್ಲ ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಆದ್ದರಿಂದ ಸುಪ್ರೀಂ ಕೋರ್ಟ್ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಇಡೀ ರಾಷ್ಟ್ರಕ್ಕೆ ಗೊತ್ತಾಗುವಂತೆ ನಡೆಸಬೇಕು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಒತ್ತಾಯಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ
ಮೈಸೂರಿನ ಮನೋರಂಜನ್ ಸೇರಿದಂತೆ ಸುಮಾರು ಆರು ಜನರ ತಂಡ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು ಆರೋಪಿಗಳು ಮೈಸುರನ್ನೇ ಕೇಂದ್ರವಾಗಿ ಇಟ್ಟುಕೊಂಡಿದ್ದಾರೆ.ಮೈಸೂರು ಸಂಸದ ಪ್ರತಾಪ್ ಸಿಂಹ ಮನೋರಂಜನಿಗೆ ಪಾಸ್ ನೀಡಿದ್ದಾರೆ. ಹಾಗೆಯೇ ಇನ್ನೊಬ್ಬನಿಗೂ ಇವರ ಕಚೇರಿಯಿಂದಲೇ ಪಾಸ್ ನೀಡಲಾಗಿರುವುದು ತಿಳಿದುಬಂದಿದೆ!. ಹಾಗಾದರೆ ಇದರ ಉದ್ದೇಶ ಏನು ? ಎಂದು ಪ್ರಶ್ನೆ ಮಾಡಿದರು.
ಅಂದು ರಾಹುಲ್ ಗಾಂಧಿಯವರನ್ನು ಅಮಾನತ್ತು ಮಾಡುವಾಗ ಒಂದು ಕ್ಷಣವು ಯೋಚಿಸಲಿಲ್ಲ. ನ್ಯಾಯಾಲಯದ ತೀರ್ಪು ಕೈ ಸೇರುವ ಮುನ್ನವೇ ಸಂಸತ್ತಿನಿಂದ ಅವರನ್ನು ಹೊರ ಹಾಕಲಾಗಿತ್ತು. ಈಗ ಇಂತಹ ಘಟನೆ ದೇಶದ ಪ್ರಜೆಗಳ ಕಣ್ಣೆದುರು ನೆಡೆದಿದ್ದರು ಆರೋಪಿಗೆ ಪಾಸ್ ನೀಡಲು ಕಾರಣರಾದ ಪ್ರತಾಪ್ ಸಿಂಹನಿಗೂ ಹಾಗೂ ಇತರರನ್ನು ಏಕೆ ವಜಾ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.
ಅಕಸ್ಮಾತ್ತಾಗಿ ಈ ಪಾಸ್‍ನ್ನು ಕಾಂಗ್ರೆಸ್ ಸಂಸದರೇನಾದರು ಕೊಟ್ಟಿದ್ದರೆ ಅಥವಾ ದಾಳಿಯಲ್ಲಿ ಅನ್ಯಕೋಮಿನ ವ್ಯಕ್ತಿ ಭಾಗಿಯಾಗಿದಿದ್ದರೆ ಇಷ್ಟೋತ್ತಿಗಾಗಲೆ ಇಡೀ ದೇಶಕ್ಕೆ ಬೆಂಕಿ ಹಚ್ಚುವಂತಹ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ ಈಗ ಘಟನೆ ನೆಡೆದು ಐದು ದಿನಕಳೆದಿದ್ದರು ಬಿಜೆಪಿಗರು ಬಾಯಿಮುಚ್ಚಿ ಕುಳಿತಿದ್ದಾರೆ. ಇನ್ನೂ ಇಲ್ಲಸಲ್ಲದ ವಿಷಯಕ್ಕೂ ಕಾಂಗ್ರೆಸ್ ವಿರುದ್ಧ ಉದ್ದುದ್ದ ಬಾಯಿಬಿಡುವ ಸಿ.ಟಿ.ರವಿ, ಶೋಭಾ ಕರದ್ಲಾಂಜೆ, ಅಶ್ವಥ್ ನಾರಾಯಣ್, ಕೆ ಎಸ್ ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿಯ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್,ಶಿ ಜು ಪಾಶ, ಎಸ್.ಟಿ.ಚಂದ್ರಶೇಖರ್, ದೀರಜ್ ಹೊನ್ನವಿಲೆ, ಕಲೀಂ ಪಾಷ, ಚಂದನ್, ಕೃಷ್ಣಪ್ಪ, ಮೊದಲಾದವರು ಇದ್ದರು.