BE ALERT – ಕರ್ನಾಟಕದ ಮಂದಿ ಎಚ್ಚರವಹಿಸಬೇಕಿದೆ : ಕರ್ನಾಟಕದ ಉದ್ದಗಲಕ್ಕೂ ಇದ್ದಾರೆ ಸರಿಸುಮಾರು 1,436 ಮಂದಿ ನಕಲಿ ವೈದ್ಯರುಗಳು.

ಕ್ಲಿನಿಕ್ ಗೆ ಹೋಗುವ ಮುನ್ನ ಇರಲಿ ಎಚ್ಚರ!? ನಕಲಿ ವೈದ್ಯರಿದ್ದಾರೆ ಏಚ್ಚರಿಕೆ..

BE ALERT : ಕರ್ನಾಟಕದ ಮಂದಿ ಎಚ್ಚರವಹಿಸಬೇಕಿದೆ : ಕರ್ನಾಟಕದ ಉದ್ದಗಲಕ್ಕೂ ಇದ್ದಾರೆ ಸರಿಸುಮಾರು 1,436 ಮಂದಿ ನಕಲಿ ವೈದ್ಯರುಗಳು.

news.ashwasurya.in

ವೈದ್ಯಕೀಯ ಪದವಿ ಪಡೆಯದ ಖದೀಮರ ದಂಡು ವೈದ್ಯರೆಂದು ಬಿಂಬಿಸಿಕೊಂಡು ಅನಾರೋಗ್ಯ ಪೀಡಿತ ಅಮಾಯಕ ಮಂದಿಯನ್ನು ಯಾಮಾರಿಸಿ ಮನಬಂದಂತೆ ತಪಾಸಣೆಮಾಡಿ ಖಾಯಿಲೆ ಇಲ್ಲದಿದ್ದರು ಇಲ್ಲಸಲ್ಲದ ಖಾಯಿಲೆಯ ಹೇಸರು ಹೇಳಿ. ಔಷಧಿ ಮಾತ್ರೆಗಳನ್ನು ಭರ್ಜರಿಯಾಗಿ ಬರೆದು ಹಣ ಮಾಡುವ ದಂಧೆಯಲ್ಲಿ ನಕಲಿ ವೈದ್ಯರುಗಳು ದಂಡು ರಾಜ್ಯದ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಬಿಡು ಬಿಟ್ಟಿದ್ದಾರೆ
ರಾಜ್ಯದಲ್ಲಿ ನಕಲಿ ವೈದ್ಯರ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ಮಾಹಿತಿ ಕಲೆ ಹಾಕಿದ್ದು ಕರ್ನಾಟಕ ರಾಜ್ಯದಲ್ಲಿನ 31 ಜಿಲ್ಲೆಗಳಲ್ಲಿಯ ಉದ್ದಗಲಕ್ಕೂ ಬರೋಬ್ಬರಿ 1,436 ಮಂದಿ ನಕಲಿ ವೈದ್ಯರು ಜಾಂಡ ಹೂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜಾಹೀರಾತು –


ಬೀದರ್ ಜಿಲ್ಲೆಯೊಂದರಲ್ಲೆ 423 ಮಂದಿ ನಕಲಿ ವೈದ್ಯರಿದ್ದರೆ ಇನ್ನೂ ಕೋಲಾರ – 179, ಬೆಳಗಾವಿ – 170 ,ಶಿವಮೊಗ್ಗ – 74, ಬೆಂಗಳೂರು ನಗರ – 67, ಧಾರವಾಡ – 70, ಕಲಬುರಗಿ – 81, ಮಂಡ್ಯ – 33, ಮೈಸೂರು – 2, ಕೊಪ್ಪಳ – 33, ಚಾಮರಾಜನಗರ – 51, ಚಿಕ್ಕಬಳ್ಳಾಪುರ – 45 ಸೇರಿ ಒಟ್ಟು 1,436 ಮಂದಿ ನಕಲಿ ವೈದ್ಯರು ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಕಲಿ ವೈದ್ಯರುಗಳ ಬೇಟೆಗೆ ನಿಂತ ಅಧಿಕಾರಿಗಳ ದಂಡು ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದ ನಕಲಿ ವೈದ್ಯರುಗಳನ್ನು ಬಲೆಗೆ ಕೆಡವಿ ಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ


ರಾಜ್ಯ ಸರ್ಕಾರವು ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಮಹತ್ವದ ಕ್ರಮಕೈಗೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ನಕಲಿ ವೈದ್ಯರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆತಂಕ ಸೃಷ್ಟಿಯಾಗಿದೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಮುಲಾಜಿಲ್ಲದೆ ಮುಂದಾಗಿದೆ. ನಕಲಿ ವೈದ್ಯರಿರುವ ಕಡೆಗಳಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಕಠಿಣ ಕ್ರಮಕೈಗೊಳ್ಳುವಂತೆ ಅಯಾ ಜಿಲ್ಲೆಯ ಡಿಎಚ್ಒ(ಆರೋಗ್ಯ ಅಧಿಕಾರಿಗಳು)ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ .
ರಾಜ್ಯ ಸರ್ಕಾರವು ನಕಲಿ ವೈದ್ಯರ ಹಾವಳಿ ತಡೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆಪಿಎಂಇ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯಕ್ಕೆ ಸುತ್ತೋಲೆ ಹೊರಡಿಸಿದೆ.ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಆದೇಶವನ್ನು ಹೊರಡಿಸಿದ್ದು, ನೋಂದಣಿಯನ್ನು ಕಡ್ಡಾಯಗೊಳಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲೂ ನಕಲಿ ವೈದ್ಯರ ದಂಡು ಬೀಡುಬಿಟ್ಟಿದೆ. ಈ ನಕಲಿ ವೈದ್ಯರು ಸಾಮಾನ್ಯವಾಗಿ ಸ್ಲಮ್ ಏರಿಯಾ ಗಳಲ್ಲಿ ತಮ್ಮ ಕ್ಲಿನಿಕ್ ತೆರೆದು ಕುಳಿತು ಅಮಾಯಕ ಮಂದಿಯ ಪ್ರಾಣದ ಜೋತೆಗೆ ಚಲ್ಲಾಟ ಆಡುತ್ತಿದ್ದಾರೆ. ಇವರುಗಳಲ್ಲಿ ಸಾಕಷ್ಟು ಮಂದಿ ನಗರ ಪ್ರದೇಶವನ್ನು ಬಿಟ್ಟು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ನಕಲಿ ಕ್ಲಿನಿಕ್ ಗಳನ್ನು ತೆರೆದು ಹಳ್ಳಿಯ ಮುಗ್ದಜನರ ಬದುಕಿನ ಜೋತೆಗೆ ಮನಬಂದಂತೆ ಆಟವಾಡುತ್ತ ತಮಗೆ ಇಷ್ಟ ಬಂದಂತೆ ಔಷಧಿ ಮಾತ್ರೆಗಳನ್ನು ಕೊಟ್ಟು ಅನಾರೋಗ್ಯ ಪೀಡಿತರನ್ನು ಸುಲಿಯುತ್ತಿದ್ದಾರೆ. ಶಿವಮೊಗ್ಗ, ಸಾಗರ, ಭದ್ರಾವತಿ, ತೀರ್ಥಹಳ್ಳಿ ಮತ್ತು ಸೊರಬದಲ್ಲಿ ಈ ನಕಲಿ ವೈದ್ಯರುಗಳು ಸಾಕಷ್ಟು ಮಂದಿ ಇದ್ದಾರೆ. ಇವರುಗಳನ್ನು ಗುರುತಿಸಿ ಜೈಲಿಗಟ್ಟು ಕೆಲಸ ವಾಗಬೇಕಿದೆ. ಇವರನ್ನು ಮಟ್ಟಹಾಕಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಒಂದು ತಂಡವನ್ನು ರಚಿಸಬೇಕಿದೆ. ಇಂತಹ ನಕಲಿ ವೈದ್ಯರನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಪದವಿ ಪಡೆದು ವೈದ್ಯರಾದವರನ್ನು ಬ್ಯಾಟಿರಿಬಿಟ್ಟು ಹುಡುಕಬೇಕಾದಿತು ಜೋಕೆ?

ಸಾರ್ವಜನಿಕರಲ್ಲಿ ವಿನಂತಿ

ನಾವು ಕೂಡ ಇಂತಹ ನಕಲಿ ವೈದರನ್ನು ಹುಡುಕಿ ಆರೋಗ್ಯ ಇಲಾಖೆಗೆ ಮಾಹಿತಿ ಕೊಡುವುದರ ಜೋತೆಗೆ ವರದಿಮಾಡಿ ಮಟ್ಟಹಾಕುವ ಕೆಲಸವನ್ನು ಮಾಡಲಿದ್ದೇವೆ. ನಮಗೆ ಇಂತಹ ನಕಲಿ ವೈದ್ಯರುಗಳ ಮಾಹಿತಿ ಇರುವವರು ತಿಳಿಸಿದಲ್ಲಿ ನಾವು ಅಂತವರ ಇನ್ನಷ್ಟು ಮಾಹಿತಿಯನ್ನು ಕಲೆಹಾಕಿ ವರದಿಮಾಡಲಿದ್ದೇವೆ.ಜೋತೆಗೆ ಇಂತಹ ನಕಲಿ ವೈದ್ಯರುಗಳ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿ ಜೈಲಿಗಟ್ಟುವ ಕಾರ್ಯ ಮಾಡೋಣ

ಸಮಾಜದ ಆಗುಹೋಗುಗಳು ಮತ್ತು ತನಿಖಾ ವರದಿಗಳ ಜೋತೆಗೆ ನೈಜ ಸುದ್ದಿಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ನೀವುಗಳು ನಮ್ಮನ್ನು ಪ್ರೋತ್ಸಾಹಿಸಿ,ಸಹಕರಿಸಿ ಬೆನ್ನಿಗೆ ನಿಂತು ಬೆಳೆಸುತ್ತಿದ್ದೀರಾ.ಮಾದ್ಯಮ ರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕೆನ್ನುವ ನನ್ನ ಹಂಬಲಕ್ಕೆ ನಿಮ್ಮೆಲ್ಲರ ಸಹಕಾರವಿರಲಿ……

Leave a Reply

Your email address will not be published. Required fields are marked *

Optimized by Optimole
error: Content is protected !!