ಕೋರ್ಟ್ ಆವರಣದಲ್ಲೇ ಗುಂಡಿನ ಸದ್ದು! ವಿಚಾರಣಾಧೀನ ಕೈದಿಯ ಹತ್ಯೆ, ಇಬ್ಬರು ಆರೋಪಿಗಳು ಪೋಲಿಸರ ವಶಕ್ಕೆ.
news.ashwasurya.in
ಪಾಟ್ನಾ: ವಿಚಾರಣಾಧೀನ ಕೈದಿಯೊಬ್ಬನನ್ನು ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಕೊಲೆ ಗೈದಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಪಾಟ್ನಾದ ದಾನಪುರ ಕೋರ್ಟ್ ಕ್ಯಾಂಪಸ್ಸಿಗೆ ಬೇರ್ ಜೈಲಿನಿಂದ ವಿಚಾರಣೆಗೆಂದು ಕರೆತಂದಿದ್ದ ಕೈದಿಯನ್ನು ಹೊಂಚುಹಾಕಿ ಕುಳಿತಿದ್ದ ಹಂತಕರು ಪೊಲೀಸರ ಎದುರಲ್ಲೇ ಗುಂಡಿನ ದಾಳಿಮಾಡಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯನ್ನು ಅಭಿಷೇಕ್ ಕುಮಾರ್ ಅಲಿಯಾಸ್ ಛೋಟೆ ಸರ್ಕಾರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿರುವುದಾಗಿ ತಿಳಿದುಬಂದಿದೆ.
ಅಭಿಷೇಕ್ ಕುಮಾರ್ ಅಲಿಯಾಸ್
ಛೋಟೆ ಸರ್ಕಾರ್ ಸಿಕಂದರ್‌ಪುರದ ನಿವಾಸಿಯಾಗಿದ್ದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿ ಆರೋಪ ಎದುರಿಸುತ್ತಿದ್ದ. ಆತನನ್ನು ನಗರದ ಬೇರ್ ಜೈಲಿನಲ್ಲಿ ಇರಿಸಲಾಗಿದ್ದು ಶುಕ್ರವಾರ ವಿಚಾರಣೆಗೆಂದು ಕೋರ್ಟ್‌ಗೆ ಹಾಜರುಪರಿಸಲು ಕರೆತರಲಾಗುತ್ತಿತ್ತು. ವಿಚಾರಣಾಧೀನ ಕೈದಿಯಾಗಿದ್ದ ಛೋಟೆ ಸರ್ಕಾರ್‌ನನ್ನು ದಾನಪುರ ನ್ಯಾಯಾಲಯದ ಕರೆದೊಯ್ಯಲಾಗಿತ್ತು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಆತನ ಮೇಲೆ ಪೋಲಿಸರ ಎದುರಲ್ಲೆ ಗುಂಡಿನ ದಾಳಿ ನಡೆಸಿ ಕೊಲೆಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ವಿಚಾರಣಾಧೀನ ಕೈದಿಯನ್ನು ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಂತಕರನ್ನು ಯಾರು ಕಳುಹಿಸಿದ್ದಾರೆ, ಈ ಹತ್ಯೆಯ ಹಿಂದಿನ ಉದ್ದೇಶವೇನು ಅನ್ನೋ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಹಂತಕರು ಯಾರು?
ದಾಳಿಕೋರರು ಮುಜಾಫರ್‌ಪುರ ನಗರದವರು ಎಂದು ತನಿಖೆ ಇಂದ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಆರೋಪಿಗಳ ಬಳಿಯಿದ್ದ ರೀವಲ್ವಾರ್ ಜೋತೆಗೆ 4 ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆಯಂತೆ!? ಹಾಗಾದರೆ ಹಂತಕರು ಹತ್ಯೆಗೆ ಬಳಸಿದ ಗುಂಡುಗಳು ಎಷ್ಟು? ಎಂದು ಇನ್ನಷ್ಟೆ ತಿಳಿಯಬೇಕಿದೆ. ಹಾಡು ಹಗಲೆ ಗುಂಡಿನದಾಳಿ ಮಾಡಿ ಹತ್ಯೆಗೈದ
ಈ ಘಟನೆಯಿಂದ ಕೋರ್ಟ್ ಆವರಣದಲ್ಲಿ ಕೇಲವು ಸಮಯ ಭಯದ ವಾತಾವರಣ ನಿರ್ಮಾಣವಾಗಿತ್ತು. ಪೋಲಿಸರು ತಕ್ಷಣವೇ ಕಾರ್ಯಚರಣೆಗೆ ಇಳಿದು ಇಬ್ಬರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹತ್ಯೆಗೆ ಕಾರಣವೇನೆಂದು ಇನ್ನಷ್ಟೆ ತಿಳಿಯಬೇಕಿದೆ