ಪ್ರೀತಿಯ ತಾಯಿ ಲೀಲಾವತಿಯವರನ್ನು ಕಳೆದುಕೊಂಡ ವಿನೋದ್ ರಾಜ್ ಅನಾಥರಲ್ಲ ಅವರಿಗೆ ನಾವಿದ್ದೇವೆ: ನಟಿ ಉಮಾಶ್ರೀ
news.ashwasurya.in
ಬೆಳಗಾವಿ : ವಯಸ್ಸಾದ ತಂದೆ ತಾಯಿಯರನ್ನು ಬಿದಿಗೆ ಬಿಡುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವ ಈ ಕಾಲದಲ್ಲಿ ತನ್ನ ತಾಯಿಯನ್ನು ( ನಟಿ ಲೀಲಾವತಿ ) ಮಗುವಿನಂತೆ ನೋಡಿಕೊಂಡ ನಟ ವಿನೋದ್ ರಾಜ್ ಕುಮಾರ್ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಕನ್ನಡದ ಹಿರಿಯ ನಟಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯೆ ಪ್ರತಿಯೊಬ್ಬರ ಮನಸ್ಸನ್ನು ಗೆದ್ದ ” ಪುಟ್ಟಕ್ಕನ ಮಕ್ಕಳು ” ಧಾರವಾಹಿಯ ನಟಿ ಉಮಾಶ್ರೀ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದ ಸಂಧರ್ಭದಲ್ಲಿ ಲೀಲಾವತಿ ಅವರಿಗೆ ಸಂತಾಪ ಸೂಚಿಸಿವ ಸಮಯದಲ್ಲಿ ಪ್ರಸ್ತಾಪಿಸಿದ ಅವರು, ತಾಯಿ ಲೀಲಾವತಿ ಅವರನ್ನು ಕಳೆದುಕೊಂಡ ವಿನೋದ್ ರಾಜ್ ಕುಮಾರ್ ಅವರು ಅನಾಥರಲ್ಲ ಅವರೊಂದಿಗೆ ನಾವೆಲ್ಲರೂ ಇದ್ದೇವೆ ಜೋತೆಗೆ ಈ ಸಮಾಜವೇ ಅವರ ಬೆನ್ನಿಗೆ ನಿಂತಿದೆ ಎಂದರು. ಅವರು ತನ್ನ ತಾಯಿಯನ್ನು ಸಾಕಷ್ಟು ವರ್ಷಗಳಿಂದ ನೋಡಿಕೊಂಡ ಪರಿಯೂ ಈ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ತನ್ನ ಬಣ್ಣದ ಬದುಕಿನಲ್ಲಿ ಲೀಲಾವತಿ ಅವರು ಎಲ್ಲಾ ಪಾತ್ರಗಳನ್ನು ಮಾಡುವ ಮೂಲಕ ಹೊಸ ಕಲಾವಿದರಿಗೆ ದೊಡ್ಡ ಗ್ರಂಥವೇ ಆಗಿದ್ದಾರೆ. ಜೋತೆಗೆ ತಮ್ಮ ಜೀವನದ ಕೊನೆಯವರೆಗೂ ಭೂ ತಾಯಿಯ ಸೇವೆ ಮಾಡಿದ ಮಣ್ಣಿನ ಮಗಳಾಗಿದ್ದರೆ ಎಂದು ಹೇಳಿದರು.
ಅವರು ಮನೋಜ್ಞವಾಗಿ ಅಭಿನಯಿಸಿದ
ಮದುವೆ ಮಾಡಿ ನೋಡು, ಸಂತ ತುಕರಾಂ ಚಿತ್ರಗಳಲ್ಲಿನ ನಟನೆಗೆ ಲೀಲಾವತಿ ಅವರಿಗೆ ರಾಷ್ಟ್ರ ಪ್ರಶಸ್ತಿಕೂಡ ಲಭಿಸಿತ್ತು. ಇನ್ನೂ ಭಕ್ತಕುಂಬಾರ, ಸಿಪಾಯಿ ರಾಮು, ಗೆಜ್ಜೆಪೂಜೆ ತುಂಬಿದಕೊಡ, ಮಹಾತ್ಯಾಗ, ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರೂ. ಚಿತ್ರರಂಗದಲ್ಲಿನ ಸುಧೀರ್ಘ ಆಭಿನಯಕ್ಕೆ ಡಾ:ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಪೋಷಕ ನಟನೆಗಾಗಿ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, 2008 ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ತಮ್ಮ ಮೂಡಿಗೆರಿಸಿ ಕೊಂಡಿದ್ದರು ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ಲೀಲಾವತಿ ಕನ್ನಡ ಚಿತ್ರರಂಗದ ಮಹಾನ್ ನಟಿ. ಹಿರಿಯ ನಟಿ ಲೀಲಾವತಿ ಅವರು ತಮ್ಮ ನಿಜ ಜೀವನದಲ್ಲೂ ಎಲ್ಲರಿಗೂ ಮಾದರಿಯಾಗಿದ್ದರು.ಬಡವರಿಗಾಗಿ ಮಿಡಿಯುತ್ತಿದ್ದರು. ತಮ್ಮ ಕೊನೆಯ ಉಸಿರಿರುವ ತನಕ ಸಮಾಜಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡಿ ಹೋಗಿದ್ದಾರೆ.ಅವರಿಲ್ಲ ಎನ್ನುವುದನ್ನು ಬಿಟ್ಟರೆ ಅವರು ಮಾಡಿದ ಸಾರ್ವಜನಿಕವಾದ ಕೆಲಸಗಳು ಮಾಡಿದ ಸಹಾಯ ಅವರನ್ನು ಇನ್ನೂ ಜೀವಂತವಾಗಿ ಉಳಿಸಿದೆ ಎಂದು ಹಿರಿಯ ನಟಿ ಉಮಾಶ್ರೀ ನುಡಿದಿದ್ದಾರೆ.