ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಲೀಲಾವತಿಯರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸೂಚಿಸಿದೆ ಒಂದೆರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ನಂತರದಲ್ಲಿ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರವಾಗಿ ಶುಭಾಶಯಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಶುಭ ಕೋರಿದರು.
ಇವಿಎಂ ವಿರುದ್ಧ ಕಾಂಗ್ರೆಸ್ ಆರೋಪ : ಸಂಸದರ ವಿರುದ್ಧವು ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಗಂಭೀರ ಆರೋಪ
News.Ashwasurya.in
ಅಶ್ವ ಸೂರ್ಯ/ಶಿವಮೊಗ್ಗ
ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿಯ ವೈಫಲ್ಯದ ವಿರುದ್ಧ ಹಾಗೂ ಮೂರು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಇವಿಎಂ ಮೂಲಕ ಎಂದು ಗಂಭೀರ ಆರೋಪ ಮಾಡಿದರು.
ಬೆಳಗಾವಿ ನೆಡೆಯುತ್ತಿರುವ ಅಧಿವೇಶನವನ್ನದಲ್ಲಿ ಬಿಜೆಪಿ ವಿಪಕ್ಷನಾಯಕರು
ಸಂಪೂರ್ಣವಾಗಿ ವಿಫಲರಾಗಿದ್ದಾರೆ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಭಾಗಿಯಾಗುತ್ತಿಲ್ಲ. ಮೌಲ್ವಿ ತನ್ವೀರ್ ಪೀರಾ ಅವರ ಬಗ್ಗೆ ಹೇಳಲು ಹೋಗಿ ಶಾಸಕ ಯತ್ನಾಳ್ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿದ್ದಾರೆ. ರಾಜಕೀಯ ಮಾಡೊ ಪುಣ್ಯಾತ್ಮ ಎಂದರೆ ಬಂಬಡಾ ವಜಾ ಹಿಡಿ ಕೊಂಡು ಜನರಿಗೆ ಬೇಡವಾದ ವಿಷಯಗಳನ್ನು ತಾನೆ ಸೃಷ್ಟಿ ಮಾಡಿಕೊಂಡು ಹೇಳಿ ದೊಂಬರಾಟ ಮಾಡಿತ್ತಿದ್ದಾರೆ. ವಿಪಕ್ಷ ನಾಯಕನಾಗಿ ಅಶೋಕ್ ಅವರಿಗೆ ಕೆಲಸ ಮಾಡಿರುವ ಅನುಭವದ ಕೊರತೆ ಎದ್ದುಕಾಣುತ್ತಿದೆ.ಇನ್ನೂ ವಿಜೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂದು ದೂರಿದರು.
ಸಂಸತ್ ನಡೆಯುತ್ತಿದ್ದರೂ ಕರ್ನಾಟಕ ಸಂಸದರು ಒಬ್ಬರು ರಾಜ್ಯದ ಬರದ ಬಗ್ಗೆ ಮಾತನಾಡಿರುವುದು ಕಾಣುತ್ತಿಲ್ಲ.ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಇಲ್ಲದೆ ಬರಗಾಲವಾಗಿದೆ ಅದರೆ ಶಿವಮೊಗ್ಗ ಲೋಕಸಭಾ ಸಂಸದರಿಗೆ ಮಾತ್ರ ಬರಲಿರುವ ಲೋಕಸಭಾ ಚುನಾವಣೆಯದೆ ಚಿಂತೆಯಾಗಿದೆ. ಏರ್ ಪೋರ್ಟ್ ನಿರ್ಮಾಣ ಮತ್ತು ರೈಲ್ವೆ ಫ್ರೈಓವರ್ ಯೋಜನೆ ಸಹ ಕಾಂಗ್ರೆಸ್ ಸರ್ಕಾರದ ಕಲ್ಪನೆಯಾಗಿದೆ. ಅದಕ್ಕೆ ಬಿಎಸ್ ವೈ ಸಿಎಂ ಆದ ನಂತರ ಹಣ ಬಿಡುಗಡೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಯಾವುದೇ ಕಾರ್ಖಾನೆ ಅಥವಾ ಉದ್ಯೋಗ ಸೃಷ್ಠಿಸುವ ಯೋಜನೆಯನ್ನ ಸಂಸದರು ತಮ್ಮ ಕ್ಷೇತ್ರಕ್ಕೆ ತಾರದೆ ಐದು ವರ್ಷ ಕಾಲಕಳೆದಿದ್ದಾರೆ. ಬರಲಿರುವ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿ 5 ಸೀಟು ಗೆಲ್ಲೊದಿಲ್ಲ. ಮೂರು ರಾಜ್ಯಗಳಲ್ಲಿ ಇವಿಎಂನಿಂದ ಬಿಜೆಪಿ ಗೆದ್ದಿದೆ. ವಕೀಲರು ಮತ್ತು ಸುಬ್ರಹ್ಮಣ್ಯ ಸ್ವಾಮಿಯವರು ಈಗಾಗಲೇ ಇವಿಎಂ ಲೋಪದೋಷ ಕುರಿತು ಸುಪ್ರೀಂಕೋರ್ಟ್ ನ ಕದತಟ್ಟಿದ್ದಾರೆ ಎಂದರು.
ಇವಿಎಂನಲ್ಲಿ ಗೋಲ್ ಮಾಲ್ ನಡೆದಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ಮುಂಬರುವ ಚುನಾವಣೆಗಳು ಬ್ಯಾಲೆಟ್ ಪೇಪರ್ ನಲ್ಲಿ ನಡೆಯಬೇಕಿದೆ ಎಂದು ಸುಂದರೇಶ್ ಒತ್ತಾಯಿಸಿದ್ದಾರೆ ಸುಂದರೇಶ್ ಮುಂದಿನ ವಾರದಿಂದ ಕಾಂಗ್ರೆಸ್ ಮುಖಂಡರೊಂದಿಗೆ ಗ್ರಾಮ ಪಂಚಾಯತಿ ಮತ್ತು ಬೂತ್ ಮಟ್ಟದ ವ್ಯಾಪ್ತಿಯಲ್ಲಿ ಪ್ರವಾಸ ಮತ್ತು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ 10 ವರ್ಷದಿಂದ ಅಧಿಕಾರಕ್ಕೆ ಬಂದಿದ್ದು, ಸುಳ್ಳು ಭರವಸೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಇವಿಎಂ ಬಿಜೆಪಿಗೆ ಯಾಕೆ ಬೇಕು, ಅಮೇರಿಕಾ ಜಪಾನ್ ಮೊದಲಾದ ಅಭಿವೃದ್ಧಿ ದೇಶದಲ್ಲಿ ಇವಿಎಂ ಇಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಕದತಟದಟಲಾಗುತ್ತಿದೆ ಎಂದು ತಿಳಿಸಿದರು.
ಇವಿಎಂ ಲೋಪದೋಷಗಳಿದ್ದರೆ ಅಥವಾ ಹ್ಯಾಕ್ ಮಾಡಬಹುದಾಗಿದ್ದರೆ ಬಂದು ಸಾಕ್ಷಿ ತೋರಿಸಿ ಎಂದು ಈ ಹಿಂದೆ ಚುನಾವಣೆ ಆಯೋಗ ಹೇಳಿತ್ತು. ಆಗ ಒಬ್ಬರು ಹೋಗದೆ ಈಗ ಇವಿಎಂ ಲೋಪವಿದೆ ಹ್ಯಾಕ್ ಆಗುತ್ತೆ ಎಂಬ ಆರೋಪ ಎಷ್ಟು ಸರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ಗೆ ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಮತ್ತೆ ಸುಪ್ರೀಂ ಮೆಟ್ಟಿಲೇರಿರುವುದಾಗಿ ತಿಳಿಸಿದರು.
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರರಿಗೆ ಯಾವ ಅನುಭವವು ಇಲ್ಲ. ಕೇವಲ ಯಡಿಯೂರಪ್ಪನ ಮಗ ಎಂಬ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ. ನೀಡಲಾಗಿದೆ
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬರಗಾಲ ಬಂದಿದೆ, ರೈತರು ಸಂಕಷ್ಠದಲ್ಲಿದ್ದಾರೆ, ಮಳೆ ಇಲ್ಲದೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಹೀಗೆ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ಗಂಭೀರ ಚರ್ಚೆ ಮಾಡುವುದು ಬಿಟ್ಟು ಬೇಡವಾದ ವಿಚಾರವನ್ನು ಎತ್ತಿಕೊಂಡು ಸದನದ ಸಮಯವನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ ಎಂದು ಆರೋಪಿಸಿದರು.
ಸದನದಲ್ಲಿ ಏನು ಮಾತಾನಾಡಬೇಕು, ಹೇಗೆ ಮಾತನಾಡಬೇಕು ಎಂಬುವುದನ್ನು ಮೊದಲು ಕಲಿಯಬೇಕಿದೆ.
ಇನ್ನೂ ವಿಪಕ್ಷ ನಾಯಕ ಅಶೋಕ್‌ರವರು ಕೂಡ ಪ್ರಸ್ತುತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದನ್ನೇ ಮರೆತಿದ್ದಾರೆ. ಅವರ ಪಕ್ಷದ ಶಾಸಕರೇ ಅವರಿಗೆ ಸಹಮತ ನೀಡಲಿಲ್ಲ. ಅವರ ಪಕ್ಷದಲ್ಲಿಯೇ ನಾಲ್ಕು ಗುಂಪುಗಳಾಗಿ ಬಿಟ್ಟಿದೆ. ಯತ್ನಾಳ್ ಒಂದು ಕಡೆ, ಈ ಇಬ್ಬರು ಒಂದು ಕಡೆ ಆಗಿದ್ದಾರೆ. ವಿಜಯೇಂದ್ರ ಮತ್ತು ಅಶೋಕ್ ಒಂಟಿಯಾಗಿಯೇ ಎದ್ದು ಕಾಣುತ್ತಿದ್ದರು ಎಂದರು.
ಯತ್ನಾಳ್ ಒಬ್ಬ ಹಿರಿಯ ರಾಜಕಾರಣಿ ಸದನದಲ್ಲಿ ಅಪಪ್ರಚಾರ ಮಾಡಲು ಸಮಯ ತೆಗೆದುಕೊಂಡರು, ತಸ್ವೀರ್ ಫೀರಾ ಅವರೊಂದಿಗೆ ಕಾಂಗ್ರೆಸ್ ಮುಖಂಡರ ಸಂಬಂಧವಿದೆ ಎಂದರು. ಆದರೆ ಅವರ ತಂದೆಯವರೇ ತನ್ವಿರ್ ಜೊತೆ ವ್ಯವಹಾರ ಮಾಡಿದ್ದಾರೆ. ಅವರ ಜೊತೆ ಬಿಜೆಪಿ ರಾಷ್ಟ್ರ
ನಾಯಕರು ಪೋಟೋ ತೆಗೆಸಿಕೊಂಡಿದ್ದಾರೆ.ಯತ್ನಾಳ್ ಅವರ ಮೇಲೆ ಅವರೇ ಚಪ್ಪಡಿ ಎಳೆದುಕೊಂಡಿದ್ದಾರೆ. ಬೇಡವಾದ ವಿಷಯದ ಬಗ್ಗೆ ಅಪಪ್ರಚಾರ ಮಾಡಲು ಹೋದರೆ ಇದೇ ಗತಿ ಎಂದು ಸುಂದರೇಶ್ ಕಟುಕಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಮುಖಂಡರಾದ ಮುಜೀಬ್, ಶಿ ಜು ಪಾಶ, ಚೇತನ್ ರಮೇಶ್ ಇಕ್ಕೇರಿ, ಚಂದ್ರಶೇಖರ್ ಕಲೀಂಪಾಶ, ಹಬೀಬ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.