ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು……
BREAKING NEWS: ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಇನ್ನಿಲ್ಲ.
News.Ashwasurya.in
ಬೆಂಗಳೂರು: ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ(85) ನಿಧನರಾಗಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಮಗ ನಟ ವಿನೋದ್ ರಾಜ್ ಅವರನ್ನು ಅಗಲಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಅವರನ್ನು ನೆಲಮಂಗಲದ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ವೇಳೆ ಅವರು ಮೃತಪಟ್ಟಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮಗ ವಿನೋದ್ ರಾಜ್ ಕುಸಿದು ಬಿದ್ದಿದ್ದಾರೆ.ಅಮ್ಮನ ಮುದ್ದಿನ ಮಗ, ಮಗನ ಮುದ್ದಿನ ಅಮ್ಮನಾಗಿದ್ದ ಲೀಲಾವತಿ ಅವರ ಸಾವಿನಿಂದ ಜರ್ಜರಿತನಾದ ಮಗ ವಿನೋದ್ ರಾಜ್ ಕುಸಿದು ಬಿದ್ದಿದ್ದಾರೆ.
ಲೀಲಾವತಿ ಕನ್ನಡ ಚಿತ್ರರಂಗ ಕಂಡ ಮಹಾನ್ ನಟಿಯರಲ್ಲಿ ಇವರು ಕೂಡ ಒಬ್ಬರಾಗಿದ್ದರು. ಲೀಲಾವತಿ (1938) ದಕ್ಷಿಣ ಭಾರತದ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳು ಸೇರಿದಂತೆ ಸುಮಾರು 6೦೦ ಚಿತ್ರಗಳಲ್ಲಿ ನಟಿಸಿದ ಹಿರಿಮೆ ಇವರದು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999 -2000 ನೇ ಸಾಲಿನಲ್ಲಿ ಲೀಲಾವತಿ ಅವರಿಗೆ ನೀಡಿ ಗೌರವಿಸಿತ್ತು, ಇನ್ನೂ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು 2008ರಲ್ಲಿ ಪಡೆದಿದ್ದರು.
ಲೀಲಾವತಿ ಅವರ ಜನ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ. ನಾಟಕ, ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾವತಿ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ ಅದರಲ್ಲೂ ವೃತ್ತಿ ರಂಗಭೂಮಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಜೀವನಕ್ಕಾಗಿ ಕೆಲವು ಮನೆಗಳಲ್ಲಿ ಮನೆಯ ಕೆಲಸವನ್ನೂ ಅವರು ಮಾಡಿದ್ದರು ಅದು ಅ ಸಂದರ್ಭದಲ್ಲಿ ಅವರಿಗೆ ಅನಿವಾರ್ಯವು ಆಗಿತ್ತು!
ಲೀಲಾವತಿ ಅವರ ಮಗ ವಿನೋದ್ ರಾಜ್ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು.ಇತ್ತೀಚೆಗೆ ಚಿತ್ರರಂಗದಿಂದ ದೂರ ಉಳಿದು ತಾಯಿ-ಮಗ ಇಬ್ಬರೂ ಸೇರಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಕ್ರಿಯರಾಗಿದ್ದರು.
ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕ’ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು.ನಂತರ ದಿನಗಳಲ್ಲಿ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ ಹಿರಿಮೆ ಇವರದು. ಅ ನಂತರದಲ್ಲಿ ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು.
ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ ‘ಮಾಂಗಲ್ಯ ಯೋಗ’. ಡಾ. ರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯಿಸಿದ್ದರು ಮೊದಲ ಚಿತ್ರ ‘ರಣಧೀರ ಕಂಠೀರವ ಅದರೆ ನಂತರದಲ್ಲಿ
ರಾಣಿ ಹೊನ್ನಮ್ಮ’ ಚಿತ್ರದಲ್ಲಿ ನಟಿಸಿ ಯಶಸ್ಸಿನ ಅಲೆಯಲ್ಲಿ ತೆಲಿ ಹೋಗಿದ್ದರು ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು ಕರ್ನಾಟಕದ ಮನೆ ಮಾತಾಯಿತು ‘ಸಂತ ತುಕಾರಾಂ’, ‘ಕಣ್ತೆರೆದು ನೋಡು’, ‘ಕೈವಾರ ಮಹಾತ್ಮೆ’, ‘ಗಾಳಿ ಗೋಪುರ’, ‘ಕನ್ಯಾರತ್ನ’, ‘ಕುಲವಧು’, ‘ವೀರ ಕೇಸರಿ’, ‘ಮನ ಮೆಚ್ಚಿದ ಮಡದಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಹಲವು ಪೋಷಕಪಾತ್ರಗಳಲ್ಲಿ ನಟಿಸಿದ ಕೀರ್ತಿ ಇವರದಾಗಿದೆ. ಇವರು ಅಭಿನಯಿಸಿದ ಚಿತ್ರಗಳಲ್ಲಿ ‘ಗೆಜ್ಜೆ ಪೂಜೆ’, ‘ಸಿಪಾಯಿ ರಾಮು’, ‘ನಾಗರಹಾವು’, ‘ಭಕ್ತ ಕುಂಬಾರ’ ಮುಂತಾದ ಚಿತ್ರಗಳು ಪ್ರಮುಖವಾದವು.
ಒಟ್ಟಿನಲ್ಲಿ ಲೀಲಾವತಿ ಅಮ್ಮನವರು ಕರ್ನಾಟಕದ ಮನೆಮಗಳು. ತನ್ನ ಮಗನ ಜೋತೆಗೆ ಸೇರಿಕೊಂಡು ತನ್ನೂರಿನ ಜನರ ಕಷ್ಟಸಖಕ್ಕೆ ಕೈಜೋಡಿಸಿ ತನ್ನ ಕೈಲಾದ ಸಹಾಯ ಮಾಡುತ್ತ ಸಾಯುವ ಕೊನೆಯ ಕ್ಷಣದ ವರೆಗೂ ಸಾರ್ಥಕತೆ ಮೇರೆದಿದ್ದಾರೆ ಅಮ್ಮ ಲೀಲಾವತಿ.ತಮ್ಮ ಸ್ವಂತ ಹಣದಲ್ಲಿ ಸಾರ್ವಜನಿಕರಿಗಾಗಿ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ.
ಅವರ ಆರೋಗ್ಯದಲ್ಲಿ ಏರುಪೇರು ಕಾಣುತ್ತಿದ್ದಂತೆ ಚಿತ್ರರಂಗದ ಹಿರಿಯ ಕಿರಿಯ ಕಲಾವಿದರು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿದಿಕೊಂಡು ಕೇಲವು ಸಮಯ ಅವರೊಟ್ಟಿಗೆ ಕಳೆದು ಬಂದಿದ್ದು ಕೇಲವು ದಿನಗಳ ಹಿಂದೆ ನಟರಾದ ಶಿವರಾಜ್ ಕುಮಾರ್, ದರ್ಶನ್,ಅರ್ಜುನ್ ಸರ್ಜಾ,ಹಿರಿಯ ನಟ ಶ್ರೀನಾಥ್ ಮತ್ತು ಹಿರಿಯ ನಟಿಯರ ದಂಡೆ ಒಟ್ಟಿಗೆ ತೆರಳಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿಕೊಂಡು ಜೋತೆಗೆ ಒಂದಷ್ಟು ಸಮಯ ಹಳೆಯ ನೆನಪುಗಳನ್ನು ಮೇಲುಕು ಹಾಕಿ ಅವರ ಜೋತೆಗೆ ಕಾಲಕಳೆದು ಬಂದಿದ್ದರು.
ಈಗ ಸಾಕಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮ ಲೀಲಾವತಿ ಕೊನೆ ಉಸಿರೆಳೆದಿದ್ದಾರೆ. ದಶಕಗಳ ಕಾಲ ಚಿತ್ರರಸಿಕರ ಮನಸ್ಸು ಗೆದ್ದಿದ್ದ ಕನ್ನಡ ಹೆಸರಾಂತ ನಟಿ ಲೀಲಾವತಿ ಇನ್ನಿಲ್ಲ ಎನ್ನುವುದು ಬಿಟ್ಟರೆ ಅವರು ನಟಿಸಿದ ಚಿತ್ರಗಳು ಇನ್ನೂ ಜೀವಂತವಾಗಿದೆ….