ಮಳೆ ಹುಡುಗಿ ಪೂಜಾ ಗಾಂಧಿ ಮಲೆನಾಡಿನಲ್ಲಿ: ಕುವೆಂಪು ಜನ್ಮಸ್ಥಳ ಕವಿಶೈಲಾದಲ್ಲಿ ಪತಿಯ ಜೊತೆ ಪೂಜಾ ಗಾಂಧಿ!!

ಕವಿಶೈಲಾದಲ್ಲಿ ಪತಿ ವಿಜಯ್ ಜೊತೆಯಲ್ಲಿ ಪೂಜಾ ಗಾಂಧಿ

ಮಳೆ ಹುಡುಗಿ ಪೂಜಾ ಗಾಂಧಿ ಮಲೆನಾಡಿನಲ್ಲಿ: ಕುವೆಂಪು ಜನ್ಮಸ್ಥಳದಲ್ಲಿ ಪತಿಯ ಜೊತೆ ಪೂಜಾ ಗಾಂಧಿ!!

News.Ashwasurya.in

ಬೆಂಗಳೂರು: ಎಲ್ಲಾ ಸಿನಿ ಕಲಾವಿದರು ಮದುವೆಯಾದ ಬಳಿಕ ವಿದೇಶದ ಸ್ವದೇಶದ ಸುಂದರ ಸ್ಥಳಗಳಿಗೆ ಹನಿಮೂನ್ ಗೆಂದು ಹೋಗುತ್ತಾರೆ ಆದರೆ‌ ನಮ್ಮ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮಾತ್ರ ಎಲ್ಲರಿಗಿಂತ ಭಿನ್ನ ಎಂದು ತೋರಿಸಿದ್ದಾರೆ.

ಇತ್ತೀಚೆಗಷ್ಟೇ ಉದ್ಯಮಿ ವಿಜಯ್ ಜೊತೆ ಮಂತ್ರ ಮಾಂಗಲ್ಯದ ಪದ್ಧತಿಯಲ್ಲಿ ಮದುವೆಯಾಗಿದ್ದ ಪೂಜಾ ಗಾಂಧಿ ಈಗ ರಾಷ್ಟ್ರಕವಿ ಕುವೆಂಪು ಜನ್ಮಸ್ಥಳವಾದ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಪದ್ಧತಿಯಂತೆ ಮದುವೆಯಾಗಿದ್ದಲ್ಲದೆ ಕುವೆಂಪು ಅವರ ಜನ್ಮ ಸ್ಥಳಕ್ಕೇ ಪತಿ ಜೊತೆ ಭೇಟಿ ನೀಡಿದ್ದಾರೆ ಅಲ್ಲಿಯ ಪರಿಸರದಲ್ಲಿ ಸುತ್ತಾಡಿ ಸಂತಸಪಟ್ಟಿದ್ದಾರೆ

ಶಿವಮೊಗ್ಗ ನಗರದಲ್ಲಿ ಅದ್ದೂರಿ ಸ್ವದೇಶಿ ಮೇಳ, ಸ್ಥಳ ಫ್ರೀಡಮ್ ಪಾರ್ಕ ( ಹಳೆ ಜೈಲ್ ಅವರಣ )

ನವಂಬರ್ 29 ರಂದು ಮಳೆ ಹುಡುಗಿ ಪೂಜಾ ಯಲಹಂಕದಲ್ಲಿ ಸರಳ ವಿವಾಹವಾಗಿದ್ದರು. ಮದುವೆಗೆ ತಮ್ಮ ಆಪ್ತೇಷ್ಟರಿಗೆ ಮಾತ್ರ ಕರೆ ನೀಡಿದ್ದರು. ಅದರಂತೆ ಸ್ಯಾಂಡಲ್ ವುಡ್ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದರು.
ಇದೀಗ ಮದುವೆ ನಂತರ ಕೂಡ ಪತಿ ಜೊತೆ ಕುವೆಂಪು ಹುಟ್ಟಿ ಬೆಳೆದ ಜಾಗಕ್ಕೆ ಭೇಟಿ ಕೊಡುವ ಮೂಲಕ ತಮ್ಮ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಸಾಭಿತುಪಡಿಸಿದ್ದಾರೆ. ಅವರ ಈ ನಡೆಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಅದಕ್ಕೆ ಹೇಳೊದೊ ಇವರನ್ನ ಸಿಂಪಲ್ ಹುಡುಗಿ ಮಳೆ‌ ಹುಡುಗಿ ಅಂತ….

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!