ಜೈಪುರ ರಾಜಸ್ಥಾನದ ಪ್ರಮುಖ ರಜಪೂತ ನಾಯಕ ಹಾಗೂ ರಾಷ್ಟ್ರೀಯ ರಜಪೂತ ಕರ್ನಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೆಡಿ ಅವರನ್ನು ಕಳೆದ ಮಂಗಳವಾರ ಅವರ ಜೈಪುರದ ನಿವಾಸದಲ್ಲಿ ದುಷ್ಕರ್ಮಿಗಳು ಅವರ ಜೊತೆಯಲ್ಲೆ ಕುಳಿತು ಕೇಲವು ಸಮಯ ಮಾತನಾಡಿ ಮಾತಿನ ನಡುವೆ ಏಕಾಏಕಿ ಇಬ್ಬರು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.
ಸುಖದೇವ್ ಅವರು ತಮ್ಮ ಮನೆಯಲ್ಲಿ ಕುಳಿತಿದ್ದಾಗ ಈ ಘಟನೆ ನೆಡೆದಿದೆ. ಗುಂಡಿನ ದಾಳಿಯಲ್ಲಿ ಅಲ್ಲಿದ್ದ ಸುಖದೇವ್ ಪ್ರಾಣ ತೆತ್ತರೆ ಅವರ ಇಬ್ಬರು ಸಹವರ್ತಿಗಳಿಗೆ ಗುಂಡೇಟು ತಗಲಿದೆ. ಮೂವರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸುಖದೇವ್ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು…
ರಜಪೂತ ನಾಯಕ ಗೊಗಮೆಡಿ
ಹತ್ಯೆ: ಹೊತ್ತಿ ಉರಿಯುತ್ತಿದೆ ರಾಜಸ್ಥಾನ!!
News.Ashwasurya.in
ಜೈಪುರ:ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ ಮತ ಏಣಿಕೆಯ ನಂತರದ ದಿನವೆ ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಜೈಪುರದ ಅವರ ಮನೆಯಲ್ಲಿ ಮೂವರು ದುಷ್ಕರ್ಮಿಗಳು ಮಂಗಳವಾರ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆಯ ನಂತರದಲ್ಲಿ ರಾಜಸ್ಥಾನದಲ್ಲಿ ಅಶಾಂತಿ ತಲೆದೋರಿದ್ದು, ಅವರ ಬೆಂಬಲಿಗರು ಇಂದು ರಾಜಸ್ಥಾನ ಬಂದ್‌ಗೆ ಕರೆ ನೀಡಿದ್ದಾರೆ.
ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ನಾಯಕತ್ವ ವಹಿಸಿದ್ದ ಸುಖದೇವ್ ಸಿಂಗ್ ಗೊಗಮೇಡಿ ಅವರನ್ನು ಅವರ ಲಿವಿಂಗ್ ರೂಮಿನಲ್ಲಿ ಅವರೊಂದಿಗೆ ಚಹಾ ಸೇವಿಸಿದ ಮೂವರು ವ್ಯಕ್ತಿಗಳೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿಯಾಗಿನಿಂತಿವೆ
ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಗ್ಯಾಂಗ್‌ಸ್ಟರ್‌ಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ದಾಳಿಯಲ್ಲಿ ಗೊಗಮೆಡಿ ಮತ್ತು ಅವರ ಇಬ್ಬರು ಸಹಚರರಿಗೆ ಗುಂಡಿನ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಗೊಗಮೆಡಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗೊಗಮೆಡಿ ಅವರ ಸಹಾಯಕರು ಗುಂಡಿನ ದಾಳಿ ಮಾಡಿದ ಒಬ್ಬನನ್ನು ( ಕೊಲೆಗಾರನನ್ನು ) ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಸೋಲಿಸಿದ ನಂತರ ಆಡಳಿತ ಬದಲಾವಣೆಯ ಪ್ರಕ್ರಿಯೆಯಲ್ಲಿರುವ ರಾಜಸ್ಥಾನದಲ್ಲಿ ರಜಪೂತ ನಾಯಕನ ಹತ್ಯೆಯು ಭಾರೀ ಪ್ರತಿಭಟನೆಯನ್ನು ಹುಟ್ಟುಹಾಕಿದೆ.
ಈ ಹತ್ಯೆಯ ಬೆನ್ನಿಗೆ ರಾಜಸ್ಥಾನದಲ್ಲಿ ಅಶಾಂತಿಯ ವಾತವರಣ ಸೃಷ್ಟಿಯಾಗಿದೆ.ಗೊಗಮೆಡಿಅವರ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ,ಪ್ರತಿಭಟನ ಕಾರರನ್ನು ನಿಯಂತ್ರಿಸಲು ಪೋಲಿಸರು ಹರ ಸಹಾಸ ಪಡುತ್ತಿದ್ದಾರೆಂದೆ ತಿಳಿದುಬಂದಿದೆ
ಸುಧೀರ್ ವಿಧಾತ , ಶಿವಮೊಗ್ಗ