BREAKING NEWS : ಕಾಡಾನೆ ಹತ್ಯೆ ರಹಸ್ಯವಾಗಿ ಹೂತು ಹಾಕಿದ ರೈತ!!
news.ashwasurya.in
ರಾಮನಗರ: ಹಾಸನದಲ್ಲಿ ಮದವೇರಿದ್ದ ಒಂಟಿ ಸಲಗವೊಂದನ್ನು ಪಳಗಿಸಲುಹೋಗಿ ಬಲವಾದ ಪೆಟ್ಟು ತಿಂದು ಎಂಟು ಬಾರಿ ದಸರಾ ಅಂಬಾರಿ ಹೊತ್ತ ಆನೆ ಅರ್ಜುನ ಮೃತಪಟ್ಟ ಘಟನೆ ವರದಿಯ ಬೆನ್ನಿಗೆ ಇದೀಗ ರಾಮನಗರದಲ್ಲಿ ರೈತರೊಬ್ಬರು ತಮ್ಮ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಹಾಕಿದ್ದ ಕಾರಣಕ್ಕೆ ತಂತಿ ಸ್ಪರ್ಶಿಸಿ ಕಾಡು ಆನೆಯೊಂದು ಮೃತಪಟ್ಟಿದೆ. ನಂತರ ಸತ್ತ ಆನೆಯ ಕಳೇಬರವನ್ನು ರಹಸ್ಯವಾಗಿ ಹೂತು ಹಾಕಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಪಕ್ಕಾ ಮಾಹಿತಿ ಅಧಾರದ ಮೇಲೆ ಮೂರು ದಿನಗಳ ಬಳಿಕ ಆನೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೂತು ಹಾಕಿದ್ದ ಜಾಗದಿಂದ ಹೊರ ತೆಗೆದಿದ್ದಾರೆ. ಆದರೆ ವಿಷಯ ತಿಳಿಯಿತ್ತಿದ್ದಂತೆ ಆರೋಪಿ ರೈತ ನಾಪತ್ತೆಯಾಗಿದ್ದಾನೆ. ಈ ಪ್ರಕರಣದ ಆರೋಪಿ
ರೈತ ನಂಜೇಗೌಡ ತನ್ನ ತೋಟವನ್ನು ಕಾಡಾನೆ ಹಾವಳಿಯಿಂದ ರಕ್ಷಿಸಿಕೊಳ್ಳಲು ಅಕ್ರಮವಾಗಿ ತೋಟದ ಸುತ್ತ ವಿದ್ಯುತ್ ತಂತಿಯನ್ನು ಹಾಕಿದ್ದಾನೆ. ವಿದ್ಯುತ್ ಚಾಲಿತ ಅಕ್ರಮ ತಂತಿಯನ್ನು ದಾಟುವಾಗ ವಿದ್ಯುತ್ ಸ್ಪರ್ಶಿಸಿ 16 ವರ್ಷದ ಗಂಡಾನೆ ಮೃತಪಟ್ಟಿದೆ. ನಂತರ ಆನೆಯ ಕಳೇಬರವನ್ನು ಯಾರಿಗೂ ಗೊತ್ತಾಗದಹಾಗೆ ನಂಜೇಗೌಡ ಹೂತುಹಾಕಿದ್ದ!!. ಈ ಘಟನೆಯ ಸುಳಿವು ದೊರೆತ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಹಿತ ಸ್ಥಳಕ್ಕೆ ತೆರಳಿ ಹೂತುಹಾಕಿದ್ದ ಕಾಡಾನೆ ಕಳೇಬರ ಹೊರ ತೆಗೆದಿದ್ದಾರೆ. ಇದು ಮೇಲ್ನೋಟಕ್ಕೆ ರೈತ ನಂಜೇಗೌಡ ದಂತಕ್ಕಾಗಿ ಆನೆಯನ್ನು ಸಾಯಿಸಿಲ್ಲ ಎನ್ನುವುದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಸಂಬಂದ ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿ ರೈತನ ಬಂಧನಕ್ಕಾಗಿ ಭಲೇ ಬಿಸಿದ್ದಾರೆ.
ಸುಧೀರ್ ಕುಮಾರ್ ,ಶಿವಮೊಗ್ಗ