ಕರ್ನಾಟಕದ ವಿಧಾನಸಭಾ ಚುನಾವಣೆ ವೇಳೆ, ’40 ಪರ್ಸೆಂಟ್ ಸರ್ಕಾರ’ ಮತ್ತು ‘ಪೇ ಸಿಎಂ’ ಕ್ಯಾಂಪೇನ್‌ಗಳ ಮೂಲಕ ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸಿ, ಅದು ಕಾಂಗ್ರೆಸ್ ಪರವಾದ ಹವಾ ಸೃಷ್ಟಿಸುವಲ್ಲಿ ಕಾರಣವಾಗಿದ್ದ ಸುನೀಲ್. ತೆಲಂಗಾಣದಲ್ಲೂ ಸುನಿಲ್ ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಹೆಣೆದು, ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಕೆಸಿಆರ್ ಅವರ ಭಾರತ ರಾಷ್ಟ್ರ ಸಮಿತಿ (BRS) ಯನ್ನು ಸೋಲಿಸಿ ಕಾಂಗ್ರೆಸ್ ಜಯಭೇರಿ ಬಾರಿಸುವಲ್ಲಿ ಸುನೀಲ್ ಕನಗೋಲು ತಂತ್ರಗಾರಿಕೆ ಕೆಲಸ ಮಾಡಿದೆ
ಶಿವಮೊಗ್ಗ ನಗರದಲ್ಲಿ ಅದ್ದೂರಿ ಸ್ವದೇಶಿ ಮೇಳ , ಸ್ಥಳ ಫ್ರೀಡಮ್ ಪಾರ್ಕ ಅವರಣ,( ಹಳೆಯ ಜೈಲು ).
ತೆಲಂಗಾಣ ಚುನಾವಣೆಯಲ್ಲಿ ಕೆಸಿಆರ್ ಪಕ್ಷ ಸೋಲಿಸಿದ್ದು ಓರ್ವ ಕನ್ನಡಿಗ!
ಹೈದರಾಬಾದ್: ತೆಲಂಗಾಣ ವಿಧಾನಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಆರ್ ಎಸ್ ಪಕ್ಷದ 10 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿ ಅಧಿಕಾರದ ಗದ್ದುಗೆ ಏರಿದೆ!
ತೆಲಂಗಾಣದಲ್ಲಿ ಈ ಬಾರಿ ಕೆಸಿಆರ್ ಆಡಳಿತ ಕೊನೆಗಾಣುವುದಕ್ಕೆ ಓರ್ವ ಕನ್ನಡಿಗನೂ ಕಾರಣನಾಗಿದ್ದಾನೆ ಎಂದರೆ ನಿಮಗೆ ಅಚ್ಚರಿಯಾಗಬಹುದು! ಅದರೂ ಸತ್ಯ.
ತೆಲಂಗಾಣ ಚುನಾವಣೆಗೆ ಮುನ್ನ ಚುನಾವಣಾ ತಂತ್ರಗಾರಿಕೆ ನಿಪುಣ ಕನ್ನಡಿಗ ಸುನಿಲ್ ಮುಖ್ಯಮಂತ್ರಿ ಕೆಸಿಆರ್ ಅರನ್ನು ಭೇಟಿಯಾಗಿ ತೆಲಂಗಾಣ ಚುನಾವಣೆಯಲ್ಲಿ ಕೆಸಿಆರ್ ಪಕ್ಷಕ್ಕೆ ಕಾರ್ಯತಂತ್ರ ರೂಪಿಸುವ ಬಗ್ಗೆ ಕೆಲವು ಸಮಯ ಮಾತುಕತೆ ನಡೆಸಿದ್ದರು.
ಆದರೆ ಕೆಸಿಆರ್ ಗೆ ಸುನಿಲ್ ಸಲಹೆ ಯೊಕೊ ಇಷ್ಟವಾಗದ ಕಾರಣಕ್ಕೆ ಮಾತುಕತೆ ವಿಫಲವಾಗಿತ್ತು. ಬಳಿಕ ಸುನಿಲ್ ಸುಮ್ಮನೆ ಕೂರಲಿಲ್ಲ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರದ ರೂವಾರಿಯಾದರು. ಇದೀಗ ಕಾಂಗ್ರೆಸ್ ಪಾರ್ಟಿ ತೆಲಂಗಾಣದಲ್ಲಿ ಸುನಿಲ್ ಸಲಹೆಯ ಪ್ರಕಾರ ಕಾರ್ಯತಂತ್ರ ರೂಪಿಸಿ ಜಯಭೇರಿ ಬಾರಿಸಿದೆ. ಆದರೆ ಸುನಿಲ್ ಅವರನ್ನು ತಿರಸ್ಕರಿಸಿದ ಕೆಸಿಆರ್ ಪಕ್ಷ ಮಖಾಡೆಮಲಗಿದೆ
ಸುಧೀರ್ ವಿಧಾತ , ಶಿವಮೊಗ್ಗ