ಹಳೆಯ ದ್ವೇಷದ ಹಿನ್ನಲೆಯಲ್ಲಿ ಚಂದ್ರಶೇಖರ ಎಂಬ ಯುವಕನನ್ನು ಹತ್ಯೆಮಾಡಿದ ಆರೋಪಿ ಪರಶುರಾಮನಿಗೆ ಜೀವಾವಧಿ ಶಿಕ್ಷೆ.

ಹಳೆಯ ದ್ವೇಷದ ಹಿನ್ನಲೆಯಲ್ಲಿ ಚಂದ್ರಶೇಖರ ಎಂಬ ಯುವಕನನ್ನು ಹತ್ಯೆಮಾಡಿದ ಆರೋಪಿ ಪರಶುರಾಮನಿಗೆ ಜೀವಾವಧಿ ಶಿಕ್ಷೆ.

      ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯ ವಾಸಿ ಪರಶುರಾಮನು ಚಂದ್ರಶೇಖರ್ ಎಂಬ 30 ವರ್ಷ ವಯಸ್ಸಿನ ಯುಕನ ಮೇಲೆ  ಹಳೆಯ ದ್ವೇಶದ ಹಿನ್ನೆಲೆಯಲ್ಲಿ  ದಿನಾಂಕಃ 02-03-2022 ರಂದು ಮಧ್ಯ ರಾತ್ರಿ ಶಿವಮೊಗ್ಗ ನಗರದ ಪಿಂಗಾರ ಬಾರ್ ಅಂಡ್ ರೆಸ್ಟೋರೆಂಟಿನ ಹತ್ತಿರದ ಎದುರು ರಸ್ತೆಯಲ್ಲಿ ಸಿಮೆಂಟ್ ಇಟ್ಟಿಗೆಯನ್ನು ಚಂದ್ರಶೇಖರನ ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುತ್ತಾನೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 159/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದರು.

    ಈ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀ ಹರೀಶ್ ಕೆ ಪಟೇಲ್, ಪಿಐ, ದೊಡ್ಡಪೇಟೆ ಪೊಲೀಸ್ ಠಾಣೆ  ರವರು ತನಿಖೆ ಪೂರೈಸಿ ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಅಲ್ಲಿ ಸಿ ದೂರ

     ಶ್ರೀಮತಿ ಪುಷ್ಪಾ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದು ಶಿವಮೊಗ್ಗದ ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ದಿನಾಂಕಃ 05-12-2023  ರಂದು ಆರೋಪಿ ಪರಶುರಾಮ @ ಪರ್ಸಾ @ ಚಿಂಗಾರಿ 29 ವರ್ಷ, ರಾಜೀವ್ ಗಾಂಧಿ ಬಡಾವಣೆ ಶಿವಮೊಗ್ಗ ನಗರ ಈತನ ವಿರುದ್ಧ ಕೊಲೆ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ  ಜೀವಾವದಿ ಶಿಕ್ಷೆ ಮತ್ತು ರೂ 10,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!