ಎಂಟು ಬಾರಿ ಮೈಸೂರು ದಸರಾದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತಿದ್ದ ಅರ್ಜುನ (ಆನೆ)ಇನ್ನೂ ನೆನಪು ಮಾತ್ರ!!

ಎಂಟು ಬಾರಿ ಮೈಸೂರು ದಸರಾದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತಿದ್ದ ಅರ್ಜುನ (ಆನೆ)ಇನ್ನೂ ನೆನಪು ಮಾತ್ರ!! ಒಂಟಿ ಸಲಗವೊಂದನ್ನು ಸೆರೆಹಿಡಿಯಲು ವಯಸ್ಸಾದ ಅರ್ಜುನನನ್ನು ಕರೆದುಕೊಂಡು ಹೋಗಿದ್ದು ಯಾಕೆ? 64 ವರ್ಷ ವಯಸ್ಸಾಗಿ ನಿವೃತ್ತಿಯಾಗಿದ್ದ ಅರ್ಜುನನನ್ನು ಬಲಿಷ್ಠ ಒಂಟಿ ಸಲಗವೊಂದನ್ನು ಸೆರೆಹಿಡಿಯಲು ಕರೆದುಕೊಂಡು ಹೋಗಲು ಕಾರಣ? ಇಲ್ಲಿ ಅರಣ್ಯ ಇಲಾಖೆಯವರ ತಪ್ಪು ಎದ್ದುಕಾಣುತ್ತಿದೆ. ಅರ್ಜುನನಿಗೆ ಒಂಟಿ ಸಲಗವೊಂದರ ಜೋತೆಗೆ ಕಾದಾಡಿ ಅದನ್ನು ಪಳಗಿಸುವ ವಯಸ್ಸು ಅರ್ಜುನನದಲ್ಲ ಎನ್ನುವುದನ್ನು ಇಲಾಖೆಯವರು ಅರಿಯಬೇಕಿತ್ತು. ಈಗ ಇಲಾಖೆಯವರೆ ವಯಸ್ಸಾದ (64 ವರ್ಷ) ಅರ್ಜುನನನ್ನು ಕಾಡಾನೆಯೊಂದನ್ನು ಸೆರೆಹಿಡಿಯಲು ಕರೆದುಕೊಂಡು ಹೋಗಿ ತಮ್ಮ ಕೈಯಾರೆ ಬಲಿಕೊಟ್ಟಂತಾಗಿದೆ

ಎಂಟು ಬಾರಿ ಮೈಸೂರು ದಸರಾದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತಿದ್ದ ಅರ್ಜುನ (ಆನೆ)ಇನ್ನೂ ನೆನಪು ಮಾತ್ರ!!

News. Ashwasurya.in: ಮೈಸೂರು ದಸರಾ ಮೆರವಣಿಗೆಯಲ್ಲಿ ಕಳೆದ 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಕರ್ನಾಟಕದ ಮನೆ ಮಾತಾಗಿದ್ದ ಆನೆ ಅರ್ಜುನ ಇನ್ನೂ ನೆನಪುಮಾತ್ರ! ಕಾಡಿನಲ್ಲಿ ಆರ್ಭಟಿಸುತ್ತಿದ್ದ ಒಂಟಿ ಸಲಗವನ್ನು (ಕಾಡಾನೆ) ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅದರ ದಾಳಿಗೆ ಅರ್ಜುನ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ!
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಯಸ್ಲೂರು ಭಾಗದಲ್ಲಿ ಕಾಡಾನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯಲು ಹೋದ ಅರ್ಜುನನ ಮೇಲೆ ಅದು ಬಲವಾಗಿ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಹೊಟ್ಟೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದ ಅರ್ಜುನ ಕೋನೆ ಹುಸಿರು ಏಳೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
2019ರವರೆಗೆ ಅಂದರೆ ತನ್ನ 60ನೇ ವಯಸ್ಸಿನವರೆಗೆ ಎಂಟು ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ ಹೊತ್ತಿದ್ದ. ಈಗ ಅರ್ಜುನನಿಗೆ 64 ವರ್ಷ ವಯಸ್ಸಾಗಿತ್ತು ಇತನನ್ನು ಕಾಡಾನೆಯನ್ನು ಸೆರೆಹಿಡಿಯಲು ಕರೆದುಕೊಂಡು ಹೋಗಿದ್ದೆ ದೊಡ್ಡ ಅಪರಾದವಾಗಿದೆ. ಕರ್ನಾಟಕದ ಹೆಮ್ಮೆಯ ಪ್ರೀತಿಯ
ಅರ್ಜುನ ಆನೆ ಜನಿಸಿದ್ದು 1960ರಲ್ಲಿ. ಇದು ಏಷ್ಯಾಖಂಡದ ಆನೆಯಾಗಿದ್ದು 2012 ರಿಂದ 2019 ರವರೆಗೆ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಹಿರಿಮೆ ಅರ್ಜುನನದಾಗಿತ್ತು. ಹಿಂದೂ ಮಹಾಕಾವ್ಯ ಮಹಾಭಾರತದ ಪಾಂಡವ ಸಹೋದರರಲ್ಲಿ ಮೂರನೆಯವನಾದ ಅರ್ಜುನನ ಹೆಸರನ್ನು ಈ ಬಲಿಷ್ಠ ಆನೆಗೆ ಇಡಲಾಗಿತ್ತು.

ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಕಾನನದಿಂದ 1968ರಲ್ಲಿ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಗಿತ್ತು. ಆ ನಂತರ ಪಳಗಿಸಿ 1990ರ ದಶಕದಲ್ಲಿ ಮೈಸೂರು ದಸರಾ ಉತ್ಸವಕ್ಕೆ ಇತನನ್ನು ಕರೆತರಲಾಗಿತ್ತು. ಅ ನಂತರದಲ್ಲಿ ಅಂದು ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ದ್ರೋಣಗೆ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಅರ್ಜುನನಿಗೆ ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿದಂತಹ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅರ್ಜುನನಿಗೆ ನೀಡಲಾಯಿತು.
ಇದಾದ ಬಳಿಕ ಕೆಲ ಘಟನೆಗಳಿಂದ ಅರ್ಜುನನ್ನು ಅಂಬಾರಿ ಹೊರುವ ಅವಕಾಶದಿಂದ ದೂರವಿಡಲಾಯಿತು. ಆದರೆ 2012 ರಿಂದ 2019 ರವರೆಗೆ ಸತತ ಏಳುವರ್ಷಗಳ ಕಾಲ ಮತ್ತೆ ಅಂಬಾರಿಯನ್ನು ಹೊರುವ ಸೌಭಾಗ್ಯ ಅರ್ಜುನನ ಪಾಲಾಯಿತು. ಈಗ 60 ವರ್ಷ ಮೇಲ್ಪಟ್ಟ ಆನೆಗಳನ್ನು ನಿವೃತ್ತಿಗೊಳಿಸುವ ಸರ್ಕಾರದ ಆದೇಶದ ಮೇರೆಗೆ ಅರ್ಜುನನ ಹೆಸರನ್ನು ಕೈಬಿಡಲಾಗಿತ್ತು. ಅರ್ಜುನ ಬಳಿಕ ಈಗ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊರುತ್ತಿದ್ದಾನೆ.
ಅದೇನೆ ಇರಲಿ, ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು 8 ಬಾರಿ ಮೈಸೂರಿನ ರಾಜ ಬೀದಿಯಲ್ಲಿ ಗರ್ವದಿಂದ ಹೆಜ್ಜೆ ಹಾಕಿದ ಕರ್ನಾಟಕದ ಹೆಮ್ಮೆಯ ಆನೆ ಅರ್ಜುನ ಇನ್ನೂ ನೆನಪು ಮಾತ್ರ.
ಆದರೆ ನಿವೃತ್ತಿಯಾಗಿ 64 ವರ್ಷ ವಯಸ್ಸಾಗಿದ್ದ ಅರ್ಜುನನನ್ನು ಬಲಿಷ್ಠ ಒಂಟಿ ಸಲಗವನ್ನು ಸೆರೆಹಿಡಿಯಲು ಕರೆದುಕೊಂಡು ಹೋಗಿದ್ದು ಮಾತ್ರ ದುರಂತವೆ ಹೌದು!!

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!