20 ಲಕ್ಷ ಹಣ ಲಂಚ ಪಡೆಯುತ್ತಿದ್ದ ವೇಳೆ ಇಡಿ ಅಧಿಕಾರಿಗಳಿಂದ ಇಡಿ ಅಧಿಕಾರಿಯ ಬಂಧನ!!
News.Ashwasurya.in
ತಮಿಳುನಾಡು, ಡಿಸೆಂಬರ್ 02: ಸರ್ಕಾರಿ ನೌಕರನಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಯನ್ನು ಇದೀಗ ಮಧುರೈ ಇಡಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ,ಈ ಘಟನೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ವರದಿಯಾಗಿದೆ.
ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ (DVSC) ಡಿಸೆಂಬರ್ 1 ರಂದು ಜಾರಿ ನಿರ್ದೇಶನಾಲಯದ (ED) ಮಧುರೈ ಕಚೇರಿ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ಈ ಪ್ರಕರಣದಲ್ಲಿ ದಿಂಡಿಗಲ್ಲಿನ ಇಡಿ ಅಧಿಕಾರಿ ಅಂಕಿತ್ ತಿವಾರಿ ಬಂಧಿಸಲಾಗಿದೆ, ಇದರ ಬೆನ್ನಲ್ಲೇ ಡಿವಿಎಸಿ ದಿಂಡುಗಲ್‌ನಲ್ಲಿರುವ ಅಂಕಿತ್ ನಿವಾಸದಲ್ಲೂ ಕೂಡ ತೀವ್ರ ಶೋಧ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
20 ಲಕ್ಷ ಹಣವನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಅಂಕಿತ್ ಇದೀಗ ಇಡಿ ಅಧಿಕಾರಿಗಳ ವಶದಲ್ಲಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಶುಕ್ರವಾರ ದಿಂಡಿಗಲ್‌ನಲ್ಲಿ ಪ್ರಕರಣವೊಂದಕ್ಕೆ ಸಂಭಂದಿಸಿದಂತೆ ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಅಂಕಿತ್‌ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಜಾರಿ ನಿರ್ದೇಶನಾಲಯವು ಅಧಿಕಾರಿಯಾಗಿರುವ ಅಂಕಿತ್ ತಿವಾರಿ ಅವರ ಸ್ಥಾನಮಾನದ ಸತ್ಯಾಸತ್ಯತೆಯನ್ನು ತನಿಖೆ ನಡೆಸಲು ಮುಂದಾಗಿದೆ ಮತ್ತು ಆರೋಪಿಯ ರುಜುವಾತುಗಳನ್ನು ದೃಢೀಕರಿಸುವ ಅಧಿಕೃತ ಹೇಳಿಕೆಯನ್ನು ಸದ್ಯ ನಿರೀಕ್ಷಿಸಲಾಗಿದೆ.
ಪೊಲೀಸರ ಪ್ರಕಾರ, ಅಂಕಿತ್ ಮತ್ತು ಆತನ ಸಹಚರರು ಬೆದರಿಕೆ ಮತ್ತು ಸುಲಿಗೆಯಲ್ಲಿ ತೊಡಗಿದ್ದರು, ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಮುಕ್ತಾಯಗೊಳಿಸುವ ಆಮಿಷವೊಡ್ಡಿ ಅವರಿಂದ ಲಂಚವನ್ನು ಕೇಳುತ್ತಿದ್ದರು. ಸುಳಿವಿನ ನಂತರ ಈಗ ಅಂಕಿತ್‌ನನ್ನು ಮಧುರೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಸುಧೀರ್ ವಿಧಾತ, ಶಿವಮೊಗ್ಗ