ಅದ್ದೂರಿಯಾಗಿ ಮುಕ್ತಾಯಗೊಂಡ ಶಿವಮೊಗ್ಗ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟ – 2023

ಅದ್ದೂರಿಯಾಗಿ ಮುಕ್ತಾಯಗೊಂಡ ಶಿವಮೊಗ್ಗ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟ – 2023

      ದಿನಾಂಕಃ 29-11-2023  ರಿಂದ ಸತತ ಮೂರು ದಿನಗಳ ಕಾಲ ನಗರದ ಡಿಎಆರ್ ಕವಾಯತು ಮೈದಾನದಲ್ಲಿ  ಜರುಗಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2023 ಜಿಲ್ಲೆಯ ದಕ್ಷ ಅಧಿಕಾರಿ ಪೋಲಿಸ್ ಅಧೀಕ್ಷಕ‌ರಾದ  ಮಿಥುನ್ ಕುಮಾರ್ ಜಿ ಕೆ , ಐಪಿಎಸ್ ಅವರ ಸಾರಥ್ಯದಲ್ಲಿ ನೆಡೆದಂತಹ ಈ ಕ್ರೀಡಾಕೂಟ ಕಳೆದ ಅಷ್ಟೂ ಕ್ರೀಡಾಕೂಟಕ್ಕಿಂತ ಅದ್ದೂರಿಯಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

  ವಿಜೇತ ಕ್ರೀಡಾಪಟುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳಿಂದ ಪ್ರಶಸ್ತಿ ವಿತರಣೆ

ಈ ಸಮಾರೋಪ ಸಮಾರಂಭವನ್ನು ದಿನಾಂಕ: 01-12-2023 ರಂದು ಸಂಜೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಿಥುನ್ ಕುಮಾರ್, ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ರೀಡಾಕೂಟದಲ್ಲಿ ಭಾಗವಹಿಸಿ ಶುಭಕೋರಿದ ಅಥಿತಿಗಳು . ಕ್ರೀಡಾಕೂಟದಲ್ಲಿ ಮೂರುದಿನಗಳ ಕಾಲ ಆಗಮಿಸಿ ಕ್ರೀಡಾ ಪಟುಗಳನ್ನು ಪ್ರೋತ್ಸಹಿಸಿ ಕ್ರೀಡಾಂಗಣದಲ್ಲಿ ಮೆರಗನ್ನು ತಂದ ಸಾರ್ವಜನಿಕರಿಗೂ ಹಾಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ತಮ್ಮದೆ ಇಲಾಖೆಯ ಕ್ರೀಡಾ ಪಟುಗಳಿಗೂ ತುಂಬುಹೃದಯದ ಧನ್ಯವಾದಗಳು ಅರ್ಪಿಸುವುದರೊಂದಿಗೆ ಅಂತಿಮ ಹಂತದ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತವನ್ನು ಕೋರಿದರು, ಡಾ|| ಸೆಲ್ವಮಣಿ ಆರ್, ಐಎಎಸ್, ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು ಸದರಿ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿವಿಧ ಪಂದ್ಯಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗೂ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಎಲ್ಲರಿಗೂ ವಂದನಾರ್ಪಣೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣಮೂರ್ತಿ, ಡಿವೈಎಸ್ಪಿ ಡಿಎಆರ್ ಶಿವಮೊಗ್ಗ, ಶ್ರೀ ನಾಗರಾಜ್, ಡಿವೈಎಸ್ಪಿ ಭದ್ರಾವತಿ ಉಪ ವಿಭಾಗ, ಶ್ರೀ ಗೋಪಾಲ ಕೃಷ್ಣ ಟಿ ನಾಯಕ್, ಡಿವೈಎಸ್ಪಿ, ಸಾಗರ ಉಪ ವಿಭಾಗ, ಶ್ರೀ ಬಾಲರಾಜ್, ಡಿವೈಎಸ್ಪಿ, ಶಿವಮೊಗ್ಗ ಎ ಉಪ ವಿಭಾಗ, ಶ್ರೀ ಸುರೇಶ್ ಕುಮಾರ್, ಡಿವೈಎಸ್ಪಿ, ಶಿವಮೊಗ್ಗ ಬಿ ಉಪ ವಿಭಾಗ, ಶ್ರೀ ಶಿವಾನಂದ ಮದರಕಂಡಿ, ಡಿವೈಎಸ್ಪಿ, ಶಿಕಾರಿಪುರ ಉಪ ವಿಭಾಗ ಮತ್ತು ಶ್ರೀ ಗಜಾನನ ವಾಮನ ಸುತರ, ಡಿವೈಎಸ್ಪಿ, ತೀರ್ಥಹಳ್ಳಿ ಉಪ ವಿಭಾಗ, ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವರ್ಷವಿಡೀ ಹಗಲಿರುಳು ಹಬ್ಬ ಹರಿದಿನಗಳನ್ನು ಮರೆತು ಕರ್ತವ್ಯದಲ್ಲಿ ನಿರತರಾಗಿದ್ದ ಜಿಲ್ಲೆಯ ಪೋಲಿಸ್ ಸಿಬ್ಬಂದಿಗಳು ಕಳೆದ ಮೂರುದಿನಗಳ ಕಾಲ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಕಷ್ಟು ಮಂದಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡು ಖುಷಿ ಪಟ್ಟರು. ಪ್ರಶಸ್ತಿ ಸಿಗದವರು ಕೂಡ ಕ್ರೀಡೆಯಲ್ಲಿ ಭಾಗವಹಿಸಿದ ಹೆಮ್ಮೆಯಲ್ಲಿ ಸಂತೋಷ ಪಟ್ಟರು,ಒಟ್ಟಿನಲ್ಲಿ ಕಳೆದ ಮೂರುದಿನಗಳ ಕಾಲ ನಗರದ ಡಿಎಆರ್ ಮೈದಾನದಲ್ಲಿ ಹಬ್ಬದ ವಾತಾವರಣವೆ ಸೃಷ್ಟಿಯಾಗಿತ್ತು .ಅಂತಿಮವಾಗಿ ಅದ್ದೂರಿಯಾಗಿ ನೆಡೆದ ಶಿವಮೊಗ್ಗ ಜಿಲ್ಲಾ ಪೋಲಿಸ್ ಕ್ರೀಡಾಕೂಟಕ್ಕೆ ತೆರೆಬಿದ್ದಿತ್ತು

ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತರ ವಿವರ :

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!