ಪಂಚರಾಜ್ಯಗಳ ಚುನಾವಣಾ ಸಮೀಕ್ಷೆ ; ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಅಧಿಕಾರ? ಇಲ್ಲಿದೆ ಎಕ್ಸಿಟ್ ಪೋಲ್ ರಿಸಲ್ಟ್!?
News. Ashwasurya.in
ನವದೆಹಲಿ: ಈಗಾಗಲೇ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು. ಮತ ಏಣಿಕೆ ಬಾಕಿ ಇದೆ ಈಗಾಗಲೇ ಮತಚಲಾಯಿಸಿದ ಮತದಾನ ಪ್ರಭುಗಳು ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಯೋಚಿಸಿದರೆ ಚುನಾವಣಾ ಅಖಾಡದಲ್ಲಿದ್ದ ಪಕ್ಷಗಳುಮಾತ್ರ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ. ಯಾರು ಏನೆ ಲೆಕ್ಕಚಾರ ಹಾಕಿದರೂ ಮತ ಪೆಟ್ಟಿಗೆಯಲ್ಲಿ ಮತದಾರ ಯಾವ ವ್ಯಕ್ತಿ ಗೆಲ್ಲ ಬೇಕೆಂಬುದನ್ನು ಅಳದಿ ತೂಗಿಯೆ ಮತಚಲಾಯಿಸಿದ್ದಾನೆ. ಈ ನಡುವೆ ಚುನಾವಣೋತ್ತರ ಮತಗಟ್ಟೆಗಳ ಸಮೀಕ್ಷೆ ಹೊರಬಿದ್ದಿದೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮಿಜೋರಾಮ್ ಹಾಗೂ ತೆಲಂಗಾಣ ಪಂಚರಾಜ್ಯಗಳ ಮತದಾನ ಮುಗಿದಿದ್ದು, ಡಿಸೆಂಬರ್ 3ರಂದು ಫಲಿತಾಂಶ ಹೊರಬಿಳಲಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ರಚನೆಯಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಈ ನಡುವೆ ವಿವಿಧ ಸುದ್ದಿ ಸಂಸ್ಥೆಗಳು ಹಾಗೂ ಏಜೆನ್ಸಿಗಳು ನಡೆಸಿರುವ ಚುನಾವಣೋತ್ತರ ಮತಗಟ್ಟೆಗಳ ಸಮೀಕ್ಷೆ ಕೂಡ ಹೊರಬಿದ್ದಿದ್ದು ಅವು ಈ ಕೆಳಗಿನಂತಿವೆ.
ಮಧ್ಯಪ್ರದೇಶ ರಾಜ್ಯ:
ಮಧ್ಯಪ್ರದೇಶದಲ್ಲಿ ಎಕ್ಸಿಟ್ ಪೋಲ್ ಮೊದಲ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಗೆ ಬಹುಮತ. ಒಟ್ಟು 230 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 111 ರಿಂದ 121 ಸ್ಥಾನಗಳನ್ನು ಪಡೆಯಬಹುದು.
ಬಿಜೆಪಿ-106-116 ಸ್ಥಾನ ಪಡೆಯಬಹುದು ಎಂದು ಪೋಲ್ ಸ್ಟ್ರಾಟ್ ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿದೆ.
ಛತ್ತೀಸ್ ಗಢ ರಾಜ್ಯ:
ಇನ್ನೂ ಛತ್ತೀಸ್ ಗಢದಲ್ಲಿ
ಇಂಡಿಯಾ ಟುಡೇ-ಆಕ್ಸಿಸ್ ಇಂಡಿಯಾ ಮತದಾನೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಾಧ್ಯತೆ ಇದೆ.
ಕಾಂಗ್ರೆಸ್ 40-50 ಸ್ಥಾನ
ಬಿಜೆಪಿ 36-46 ಸ್ಥಾನ
ಇತರೆ 1-5 ಸ್ಥಾನಗಳಿಸುವ ಸಾಧ್ಯತೆ ಇದೆ?
ಸಿಎನ್ ಎನ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 48 ಸ್ಥಾನ ಪಡೆದು ಸಂಪೂರ್ಣ ಬಹುಮತ ಪಡೆಯಲಿದೆಯಂತೆ!
ಕಾಂಗ್ರೆಸ್ 48
ಬಿಜೆಪಿ 39
ಇತರೆ 3 ಸ್ಥಾನ
ತೆಲಂಗಾಣ ರಾಜ್ಯ:
ತೆಲಂಗಾಣದಲ್ಲಿ ಜನ್ ಕೀ ಬಾತ್ ಸಮೀಕ್ಷೆಯ ಅಂದಾಜಿನ ಪ್ರಕಾರ ಕಾಂಗ್ರೆಸ್ಸಿಗೆ ಬಹುಮತ ಲಭಿಸಲಿದ್ದು
ಕಾಂಗ್ರೆಸ್ 56 ಸ್ಥಾನಗಳನ್ನು ಮತ್ತು ಆಡಳಿತಾರೂಢ
ಬಿಆರ್ ಎಸ್ ಪಕ್ಷ 48 ಸ್ಥಾನಗಳನ್ನು ಪಡೆಯಲಿದೆಯಂತೆ? ಇನ್ನುಳಿದಂತೆ
ಎಂಐಎಂ 5
ಬಿಜೆಪಿ 10
ಇತರೆ-0
ಎಎನ್ಎಸ್ ಸರ್ವೆ ಪ್ರಕಾರ ಕಾಂಗ್ರೆಸ್ ಪಕ್ಷ
62 ರಿಂದ 66
ಬಿಆರ್ ಎಸ್ 43 ರಿಂದ 47
ಎಂಐಎಂ 5 ರಿಂದ 7
ಬಿಜೆಪಿ 2 ರಿಂದ 5 ಸ್ಥಾನ
ರಾಜಸ್ಥಾನ ರಾಜ್ಯ:
ರಾಜಸ್ಥಾನ ರಾಜ್ಯದಲ್ಲಿ ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿಗೆ ಬಹುಮತ ಸಿಗಲಿದ್ದು
ಬಿಜೆಪಿ 100 ರಿಂದ 122 ಸ್ಥಾನಗಳನ್ನು ಪಡೆದರೆ
ಕಾಂಗ್ರೆಸ್ 62 ರಿಂದ 85 ಸ್ಥಾನಗಳು ಸೀಗಬಹುದಂತೆ?
ಇತರೆ 14 ರಿಂದ 15 ಸ್ಥಾನಗಳನ್ನು ಪಡೆಯುವ ಸಾಧ್ಯತೆ
ಮಿಜೋರಾಂ ರಾಜ್ಯ :
ಮಿಜೋರಾಂ ನಲ್ಲಿ ಸಿ ವೋಟರ್ ಸಮೀಕ್ಷೆ ಪ್ರಕಾರ ಎಂಎನ್ಎಫ್ ಗೆ ಬಹುಮತ
ಎಂಎನ್ಎಫ್ 14 ರಿಂದ 18 ಸ್ಥಾನ
ಝಡ್ ಪಿಎಂ 10 ರಿಂದ 14 ಸ್ಥಾನ
ಇತರೆ 9 ರಿಂದ 15 ಸ್ಥಾನ
ಯಾರು ಏನೆ ಲೆಕ್ಷಚಾರ ಹಾಕಿದರು ಡಿಸೆಂಬರ್ 3 ರಂದು ಅಸಲಿ ಲೆಕ್ಕ ಹೊರಬಿಳಲಿದೆ…..
ಸುಧೀರ್ ವಿಧಾತ , ಶಿವಮೊಗ್ಗ