ಮೃತ ವಿಧ್ಯಾರ್ಥಿನಿ ಮೇಘಾಶ್ರೀ
ಶಿವಮೊಗ್ಗ ನಗರದ ಪ್ರತಿಷ್ಠಿತ ಆದಿಚುಂಚನಗಿರಿ ಕಾಲೇಜು ಕಟ್ಟಡದ ಮೇಲಿನಿಂದ ಬಿದ್ದು ವಿದ್ಯಾರ್ಥಿನಿ ಸಾವು!! ಈ ಸಾವಿನ ಸತ್ಯಾ ಸತ್ಯತೆ ಪೋಲಿಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ…..
ಶಿವಮೊಗ್ಗ: ಶಿವಮೊಗ್ಗದ ಶರಾವತಿ ನಗರದಲ್ಲಿರುವ ಪ್ರತಿಷ್ಠಿತ ಆದಿಚುಂಚನಗಿರಿ ಕಾಲೇಜು ಕಟ್ಟಡದ ಮೇಲಿನಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ? ಎಂದು ತಿಳಿದುಬಂದಿದೆ ಸಾವಿಗೆ ಶರಣಾದ ಹುಡುಗಿ
ಮೇಘಾಶ್ರೀ(18), ಮೃತ ವಿದ್ಯಾರ್ಥಿನಿ ಮೇಘಾಶ್ರೀ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮೇಘಾಶ್ರೀ ಹೋಮ್ ಸಿಕ್ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಇದನ್ನು ಆಕೆಯ ಪೋಷಕರು ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಮನೆಯ ಹುಡುಗಿಯ ಸಾವಿಗೆ ವಸತಿ ನಿಲಯದ ವಾರ್ಡನ್ ಮತ್ತು ಕೆಲವರಿಂದ ನೊಂದು ಸಾವಿಗೆ ಶರಣಾಗಿದ್ದಾಳೆ! ಅಥವಾ ಆಕೆಯನ್ನು ಮೇಲಿನಿಂದ ದೂಡಿರಲು ಬಹುದು ಎಂದು ದೂರಿದ್ದಾರೆ? ಕಾಲೇಜಿನ ಸಮೀಪ ಮೃತ ವಿಧ್ಯಾರ್ಥಿನಿಯ ಪೋಷಕರು, ಬಂಧು ಬಳಗದವರು, ಸ್ನೇಹಿತರ ವರ್ಗದವರು ಅವಳ ಸಾವಿನ ಅಸಲಿ ಸತ್ಯವೇನು ಎಂದು ತನಿಖೆಮಾಡಿ ಎಂದು ಪ್ರತಿಭಟಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಮೇಘಾಶ್ರೀ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.