CRPF ಯೋಧ ಮತ್ತು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆ ತೆರೆದು ಆನ್‌ಲೈನ್ ದೊಖಾ!!

‍‍‍CRPF ಯೋಧ ಮತ್ತು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹೆಸರಿನಲ್ಲಿ ನಕಲಿ‌ ಖಾತೆ ತೆರೆದು ಆನ್‍ಲೈನ್ ದೊಖಾ!!

news.ashwasurya.in

ಗದಗದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಮತ್ತು CRPF ಯೋಧ ಸಂತೋಷಕುಮಾರ್ ಹೆಸರಿನಲ್ಲಿ ಆನ್‌ಲೈನ್ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ! ಗದಗದ ರಮೇಶ್ ಹತ್ತಿಕಾಳ‌ ಅನ್ನೋರಿಗೆ 55 ಸಾವಿರ ರೂಪಾಯಿ ವಂಚಿಸಿ ಉಂಡೆನಾಮ‌ ತಿಕ್ಕಿದ್ದಾರೆ ವಂಚಕರು. ರವಿ ಡಿ ಚೆನ್ನಣ್ಣವರ್ ಹೆಸರಿನ ಫೇಸ್‌ಬುಕ್‌ ಫೇಕ್ ಖಾತೆ ತೆರೆದು ರಮೇಶ್ ಅವರಿಗೆ ಮೆಸೇಜ್‌ ಬಂದಿದೆ.
ನನ್ನ ಸ್ನೇಹಿತ CRPF ಯೋಧನಿಗೆ ಟ್ರಾನ್ಸ್ ವರ್ ಆಗಿದೆ. ಆತನ‌ ಬಳಿ ಇರೋ ಬೆಲೆಬಾಳುವ ಫರ್ನಿಚರ್‌ ಗಳನ್ನು ಕಡಿಮೆ ಬೆಲೆಗೆ ಮಾರಾಟ‌ ಮಾಡುತಿದ್ದು ಅದನ್ನು ನೀವು ತೆಗೆದುಕೊಂಡು ವ್ಯವಹಾರ ಮುಗಿಸಿಕೊಳ್ಳಿ‌ ಅಂತ ಮೆಸೇಜ್‌ ಬಂದಿದೆ. ಮೊದ ಮೊದಲು ರವಿ ಹಾಗೂ ಸಂತೋಷಕುಮಾರ್ ಅವರ ಜೊತೆಗಿ‌ನ ಫೇಸ್‌ಬುಕ್‌ ನಲ್ಲಿನ ಮಾತುಕತೆಯ ನಂತರ ವಾಟ್ಸ್ಆಪ್ ಚಾಟಿಂಗ್ ಮೂಲಕ ಮುಂದುವರೆದಿದೆ. ಹಿರಿಯ ಅಧಿಕಾರಿ ಒಬ್ಬರು ಹೇಳಿದ್ದಾರೆ ಅಂದ ಮೇಲೆ ನನಗೆ ಬೇಡವಾದ್ರು ಯಾರಿಗಾದ್ರೂ ಸ್ನೇಹಿತರಿಗೆ ಫರ್ನಿಚರ್‌ ಕೊಡಿಸೋಣ ಅಂತ 80 ಸಾವಿರ ರೂಪಾಯಿಗೆ ಫರ್ನಿಚರ್ ರೇಟ್ ಫಿಕ್ಸ್ ಮಾಡಿಕೊಂಡು ಮೊದಲಿಗೆ 55 ಸಾವಿರ ಹಣವನ್ನು ಫೇಕ್ CRPF ಯೋಧನ ಅಕೌಂಟ್ ಗೆ ಹಾಕಿದ್ದಾರೆ.‌ ಟಿವಿ, ಕಾಟ್, ವಾಷಿಂಗ್ ಮಷಿನ್, ಅಲ್ಮೇರಾ, ಎಸಿ, ಸೈಕಲ್, ಸೋಫಾ ಸೆಟ್ ಇವೆಲ್ಲವುಗಳ ಫೋಟೋ ಕಳಿಸಿ, ರಮೇಶ್ ಅವರಿಗೆ ನಂಬಿಕೆ ಬರುವಂತೆ‌ ಮಾಡದ್ದಾನೆ ವಂಚಕ! ಇನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧವೂ ರಮೇಶ ಗಂಭೀರ ಆರೋಪ ಮಾಡುತಿದ್ದಾರೆ.‌ ನನಗೆ ಮೋಸವಾದ ಬಗ್ಗೆ ದೂರು ಕೊಡಲು ಹೋದರೆ, ಬೇಗನೆ ತೆಗೆದುಕೊಳ್ಳಲಿಲ್ಲ. ಠಾಣೆಗೆ ಹೋದರೆ ಇಂಟರ್ನೆಟ್‌ ಇಲ್ಲ ಎಂದು ‌ಬಹಳ ದಿನ ಸತಾಯಿಸಿದ್ದಾರಂತೆ! ಜೊತೆಗೆ ಈ ರೀತಿ ಘಟನೆಗಳು ಬಹಳ ಆಗಿವೆ. ಹೀಗಾಗಿ ದುಡ್ಡು, ಮರಳಿ‌‌ ಸಿಗೋದು ಗ್ಯಾರಂಟಿ ಇಲ್ಲ ಅಂತ ಸ್ವತಃ, ತನಿಖೆಗೆ ಮೊದಲೇ ಪೊಲೀಸರೆ ಕಾರಣ ಹೇಳಿ ಬಿಟ್ಟಿದ್ದಾರೆ.ಪೋಲಿಸರೆ ಈ ರೀತಿ ಹೇಳಿದರೆ ಹಣ ಕಳೆದುಕೊಂಡ ವ್ಯಕ್ತಿಗೆ ಹೇಗಾಗಬಾರದು. ಹಾಗಾದರೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಇರೋದಾದ್ರೂ ಯಾಕೆ ಅಂತ ಹಣ‌ ಕಳೆದುಕೊಂಡ ವ್ಯಕ್ತಿ ಪ್ರಶ್ನಿಸ್ತಿದ್ದಾರೆ.‌ ಇನ್ನು‌ ಈ‌ ರೀತಿ ಆನ್‍ಲೈನ್ ವಂಚನೆ ಪ್ರಕರಣಗಳು ಜಿಲ್ಲೆಯಲ್ಲಿ ಮಿತಿ‌ ಮೀರಿ ಹೋಗಿದ್ದು ಕಡಿವಾಣ ಹಾಕುವ ತಾಕತ್ತು ಯಾರಿಗೂ ಇಲ್ಲದಂತಾಗಿದೆ.‌ಇಂತಹ ಪ್ರಕರಣಗಳಲ್ಲಿ ಕೇಸು ದಾಖಲಾಗಿ ಆರೋಪಿ ಸೇರೆಸಿಕ್ಕಿ ಪ್ರಕರಣ ಇತ್ಯರ್ಥ‌ವಾಗಿ ಪರಿಹಾರ ಸಿಕ್ಕಿದ್ದು‌ ಬೆರಳಣಿಕೆಯಷ್ಟು ಮಾತ್ರ. ಪೊಲೀಸ್ ಇಲಾಖೆ ಈ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಆದರೆ, ಇನ್ನೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಹೀಗಾಗಿ, ಮೋಸ ಹೋಗೋರು ಇರೋವರೆಗೂ,‌ ಮೋಸ ಮಾಡೋರು ತಮ್ಮ ಚಾಲಾಕಿತನ ನಿಲ್ಲಿಸೊಲ್ಲ ಅನ್ನೋದು ಮಾತ್ರ ನಿಕ್ಕಿಯಾಗಿದೆ. ಆದರೆ ಪೋಲಿಸರು ಮಾತ್ರ ಈ‌ ಖತರ್ನಾಕ್ ವಂಚಕರ ಜಾಲಕ್ಕೆ ಕಡಿವಾಣ ಹಾಕಬೇಕಾಗಿದೆ.

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!