ಮಲ್ಲೇಶ್ ಹತ್ಯೆ ಆರೋಪಿಗಳ ಬಂಧನ
Crime News: ಶಿವಮೊಗ್ಗದಲ್ಲಿ ನೆಡೆದ ರೌಡಿಶೀಟರ್ ಮಲ್ಲೇಶ್ ಹತ್ಯೆಗೆ ಸಂಭಂದಿಸಿದಂತೆ ಏಳು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಕೋಟೆ ಪೋಲಿಸರು. ಹತ್ಯೆಮಾಡಿದ ಹಂತಕರು ಮಲ್ಲನ ಶಿಷ್ಯರು!!
ಕಳೆದ ಎರಡು ವರ್ಷದ ಹಿಂದೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ವ್ಯವಹಾರಿಕವಾಗಿಯು ಮಲ್ಲೇಶ್ ಉತ್ತಮ ಸ್ಥಿತಿಯಲ್ಲಿದ್ದಂತಹ ಯುವಕ. ಇನ್ನೇನು ಬದುಕಿನಲ್ಲಿ ಬಯಸಿದಂತೆ ಎಲ್ಲವೂ ನಡೆದುಕೊಂಡು ಹೋಗುವ ಸಮಯಕ್ಕೆ ಮಲ್ಲೇಶ್ ಅಲಿಯಾಸ್ ಮಲ್ಲ ಎಡವಿದ್ದು ಒಂದು ಹೆಣ್ಣಿನ ಹಿಂದೆ ಬಿದ್ದು! ಬದುಕಿನಲ್ಲಿ ಎತ್ತರಕ್ಕೆ ಬೆಳೆಯ ಬೇಕೆನ್ನುವ ಹೊತ್ತಿಗೆ ಪ್ರೀತಿಯ ಮೊಡಿಗೆ ಸಿಲುಕಿದ್ದ ಮಲ್ಲ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆರಂಭದಲ್ಲಿ ಎಲ್ಲವು ಸರಿಯಾಗೆ ಇತ್ತು ಎಂದು ಆತನ ಆತ್ಮೀಯ ಬಳಗದವರು ಹೇಳುತ್ತಾರೆ. ಅದೇಕೊ ಮಲ್ಲನ ಪ್ರೀತಿಯ ಮೇಲೆ ಅ ದೇವರಿಗೆ ಮುನಿಸಿರ ಬೇಕು ಯಾವುದೋ ಕಾರಣಕ್ಕೆ ಇತನ ಪ್ರೀತಿ ಬ್ರೇಕ್ ಆಫ್ ಆಗಿದೆ ಹುಡುಗಿ ದೂರಾಗಿದ್ದಾಳೆ ಅದರೆ ಮಲ್ಲನ ಪ್ರೀತಿಯಲ್ಲಿ ದೊಖವಿರದ ಕಾರಣ ಆಕೆಯನ್ನು ಅಷ್ಟು ಸುಲಭವಾಗಿ ಬಿಟ್ಟುಬಿಡಲು ಆತನ ಕೈಯಿಂದ ಸಾಧ್ಯವಾಗಿರಲಿಲ್ಲ. ಇಲ್ಲಿ ಇಬ್ಬರ ನಡುವೆ ಪ್ರೀತಿ ಇತ್ತಾ? ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ? ತಾನು ಪ್ರೀತಿಸಿದ ಹುಡುಗಿ ದೂರಾದ ಮೇಲಂತೂ ಹುಚ್ಚನಂತಾಗಿದ್ದ ಮಲ್ಲ ಆಕೆ ಎದುರಿಗೆ ಸಿಕ್ಕಾಗಲೇಲ್ಲ ಮದುವೆಯಾಗುವಂತೆ ಪಿಡಿಸಲು ಶುರುಮಾಡಿದ್ದನಂತೆ ಕೊನೆ ಕೊನೆಗೆ ಇತನ ಅತಿರೇಕದ ಹುಚ್ಚು ತನಕ್ಕೆ ಬೆಸತ್ತ ಯುವತಿ ಮನನೊಂದು ಕಳೆದ ಎರಡು ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಎಲ್ಲಾ ವಿಷಯ ಅರಿತಿದ್ದ ಯುವತಿಯ ಸಹೋದರರು ಮುದ್ದಾದ ಸಹೋದರಿಯನ್ನು ಕಳೆದುಕೊಂಡು ಮಲ್ಲನ ವಿರುದ್ಧ ರಿವೆಂಜಿಗೆ ಬಿದ್ದಿದ್ದರು ಸಹೋದರಿಯ ಸಾವಿಗೆ ಮಲ್ಲೇಶನೆ ಕಾರಣ ಎನ್ನುವುದು ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು ಇದೆ ಕಾರಣಕ್ಕೆ ಸಹೋದರಿ ಸಾವಿನ ದಿನ ಮಲ್ಲೇಶನನ್ನು ಕೊಲೆಮಾಡುವುದಾಗಿ ಹೇಳಿದ್ದರಂತೆ!! ಅದು ಮಲ್ಲನಿಗೂ ತಿಳಿದಿತ್ತು ಇನ್ನೇನು ನನ್ನನ್ನು ಮುಗಿಸುತ್ತಾರೆಂದು ಅರಿತ ಮಲ್ಲ ತನ್ನ ವ್ಯಾಪಾರ ವ್ಯವಹಾರವನ್ನು ಬಿಟ್ಟು ಶಿವಮೊಗ್ಗ ತೊರೆದಿದ್ದ. ಆದರೆ ಸಹೋದರಿಯ ಸಾವಿನಿಂದ ಮಲ್ಲನ ವಿರುದ್ಧ ದ್ವೇಷಕ್ಕೆ ಬಿದ್ದ ಸಹೋದರರು ಮಲ್ಲನ ತಲೆ ಉರುಳಿಸಲು ಹೊಂಚು ಹಾಕಿ ಕುಳಿತ್ತಿದ್ದರು ನಗರದೆಲ್ಲಡೆ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಜೋರಾಗಿತ್ತು. ದೀಪಾವಳಿ ಹಬ್ಬ ಅದ್ದರಿಂದ ಮಲ್ಲ ಕೂಡ ಮನೆಯವರ ಜೋತೆಗೆ ಹಬ್ಬ ಅಚರಿಸಲು ಒಂದೆರಡು ದಿನದ ಹಿಂದೆ ಬಂದಿದ್ದನಂತೆ.ಅದರೂ ಅವನಲ್ಲಿ ಯಾವುದೋ ಒಂದು ಮೂಲೆಯಲ್ಲಿ ತನ್ನ ಮೇಲೆ ಅಟ್ಯಾಕ್ ಆಗುವ ಸಣ್ಣ ಅನುಮಾನ ಅವನಲ್ಲಿ ಕಾಡುತ್ತಿತ್ತು ತನಗೆ ಸಿಕ್ಕ ಸ್ನೇಹಿತರಿಗೆಲ್ಲ ಹೇಳಿದ್ದಾನೆ ನನ್ನನ್ನು ಮರ್ಡರ್ ಮಾಡಲು ಹೊಸ ಲಾಂಗ್ ಖರೀದಿ ಮಾಡಿದ್ದಾರಂತೆ ಎಂದು! ತಮಾಷೆಗೆ ಹೇಳಿದ್ದನು ಅತವ ಅವನಿಗೆ ಆರೋಪಿಗಳು ಅಟ್ಯಾಕ್ ಮಾಡುವ ಸುಳಿವಿತ್ತ ಎನ್ನುವುದು ಮಾತ್ರ ಅರಿಯದಾಗಿದೆ. ಮಲ್ಲ ಹೇಳಿದಂತೆ ಇವನನ್ನು ಹತ್ಯೆ ಮಾಡಲು ಹೊಸ ಲಾಂಗ್ ಖರೀದಿಸಿದ್ದಾರೊ ಇಲ್ಲವೊ ಆದರೆ ಮಲ್ಲ ಸ್ನೇಹಿತರ ಬಳಿ ಹೇಳಿದಂತೆ ಹಂತಕರ ಲಾಂಗಿನೇಟಿಗೆ ಕೊಲೆಯಾಗಿ ಹೋಗಿದ್ದಾನೆ.
ನಗರದ ಜನತೆ ದೀಪಾವಳಿಯ ಸಂಭ್ರಮದಲ್ಲಿ ಮುಳುಗಿ ಹೋಗಿದ್ದರೆ ಇತ್ತ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದಿದ್ದ ಮಲ್ಲೇಶ್ ಅಲಿಯಾಸ್ ಮಲ್ಲನನ್ನು ಹತ್ಯೆಮಾಡಲು ಎರಡು ವರ್ಷದಿಂದ ಮಚ್ಚು ಮಸಿಯುತ್ತಿದ್ದ ಹಂತಕರು ಮಲ್ಲೇಶ್ ಬೆಂಗಳೂರಿನಿಂದ ಊರಿಗೆ ಬಂದಿರುವುದನ್ನು ತಿಳಿದಿದ್ದರು. ಮಲ್ಲ ಊರಿಗೆ ಬಂದ ಕ್ಷಣದಿಂದಲೂ ನೆತ್ತರು ಹರಿಸಲು ಕಾಯುತ್ತಿದ್ದ ಆರೋಪಿಗಳು ಕೊನೆಗೂ ಮಲ್ಲನನ್ನು ಹತ್ಯೆಗೈದು ಉಸಿರು ನಿಲ್ಲಿಸಿದ್ದಾರೆ.
ಮಲ್ಲೇಶ್ ಊರಿಗೆ ಬಂದಿರುವುದನ್ನು ಮೊದಲೆ ತಿಳಿದಿದ್ದ ಹಂತಕರು ಅಲರ್ಟ್ ಆಗಿದ್ದಾರೆ.ಇದು ರಿವೆಂಜ್ ತಿರಸಿಕೊಳ್ಳಲು ಸರಿಯಾದ ಸಮಯ ಎಂದು ಕಾದು ಕುಳಿತಿದ್ದರು ಮಲ್ಲ ಎಲ್ಲೆಲ್ಲಿಗೆ ಹೋಗುತ್ತಾನೆ ಎನ್ನುವುದು ಹಂತಕರಿಗೆ ತಿಳಿದಿತ್ತು ಕಾರಣ ಆರೋಪಿಗಳೆಲ್ಲ ಒಂದು ಕಾಲದ ಮಲ್ಲನ ಶಿಷ್ಯರೆ ಆಗಿದ್ದಂತವರು! ಮಲ್ಲ ಬೆಳಸಿದ ಹುಡುಗರೆ ನಮಯ ಸಾಧಿಸಿ ಏಕಾಏಕಿ ಅಟ್ಯಾಕ್ ಮಾಡಿದ್ದಾರೆ ಹಬ್ಬದ ದಿನವೆ ಉಸಿರು ಚೆಲ್ಲಿದ್ದಾನೆ ಮಲ್ಲೇಶ್!!
ಸ್ಮಾರ್ಟ್ ಸಿಟಿ ಶಿವಮೊಗ್ಗ ನಗರದಲ್ಲಿ ಮತ್ತೆ ನೆತ್ತರ ಕೊಡಿ ಹರಿದಿದೆ ಸರಿಯಾಗಿ ಮೀಸೆಬಾರದ ಹುಡುಗರ ಗ್ಯಾಂಗ್ ಲಾಂಗು ಮಚ್ಚುಗಳನ್ನು ಝಳಪಿಸಿದ್ದಾರೆ.! ನಗರದ ಹೊಳೆ ಬಸ್ಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಚಿಕ್ಕಲ್ ಫ್ಲೈ ಓವರ್ ಬಳಿ ಮಂಗಳವಾರ ಸುಮಾರು ಏಳು ಗಂಟೆಯ ಅಸುಪಾಸಿಗೆ ಮಲ್ಲ ಬೈಕಿನಲ್ಲಿ ಹೋಗುತ್ತಿರುವಾಗ ಬೆನ್ನಿಗೆ ಬೆನ್ನತ್ತಿ ಬಂದ ಏಳುಜನ ಹಂತಕರ ತಂಡ ಲಾಂಗಿನಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ನಗರದ ಲಷ್ಕರ್ ಮೊಹಲ್ಲಾ ನಿವಾಸಿಯಾದ ಮಲ್ಲೇಶನನ್ನು ಕೊಲೆಮಾಡಿದವರು ಒಂದುಕಾಲದ ಆತನ ಶಿಷ್ಯರೆ ಆಗಿದ್ದಾರೆ.ಶಿಷ್ಯರೆ ಗುರು ಒಬ್ಬನ ಜೀವತೆಗೆದು ಕೇಕೆ ಹಾಕಿದ್ದಾರೆ.ಈ ಪ್ರಕರಣಕ್ಕೆ ಸಂಭಂದಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹತ್ಯೆಯಾದ ಮಲ್ಲೇಶ್ ಮೇಲೆ ಕೋಟೆ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆಯಂತೆ!
ಮಲ್ಲ ಕೂಡ ಒಂದು ಕಾಲದಲ್ಲಿ ಹಲವು ಅಕ್ರಮ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನಂತೆ. ತನ್ನ ಏರಿಯಾದಲ್ಲಿ ಹವ ಕ್ರಿಯೆಟ್ ಮಾಡಿಕೊಂಡಿದ್ದ ಮಲ್ಲ ರಾಜಕೀಯ ವಾಗಿಯು ಸಾಕಷ್ಟು ಹೆಸರು ಮಾಡಿದ್ದ. ಯಾವ ಮಟ್ಟಕ್ಕೆ ಎಂದರೆ ಇತನನ್ನು ಹತ್ಯೆಮಾಡಿದ ಸಹೋದರರ ( ಆತ್ಮಹತ್ಯೆ ಮಾಡಿಕೊಂಡ ಹುಡುಗಿಯ ಸಹೋದರರು ) ಅಮ್ಮನಿಗೆ ಕಳೆದ ಮಹಾನಗರ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದನಂತೆ.ತನಗೆ ಅಟ್ಯಾಕ್ ಆಗುವ ಸುಳಿವಿದ್ದು ಮಲ್ಲ ಹುಂಬುತನ ತೋರಿದ್ದಾನೆ. ಮಲ್ಲ ಮಸಣ ಸೇರಿದರೆ ರಿವೆಂಜ್ ತೀರಿಸಿಕೊಂಡ ಹಂತಕರು ಜೈಲು ಸೇರಿದ್ದಾರೆ.ಮತ್ತೆ ನೆತ್ತರ ಕೊಡಿ ಹರಿದು ತುಂಗೆ ಮೈಲಿಗೆ ಆಗಿದ್ದಾಳೆ. ಮಲೆನಾಡಿನಲ್ಲಿ ಮತ್ತೆ ರೌಡಿಸಂ ಚಿಗುತು ಕೊಂಡಿದೆ ಎನ್ನುವುದು ಮಾತ್ರ ಸತ್ಯ!!?
ಸುಧೀರ್ ವಿಧಾತ ,ಶಿವಮೊಗ್ಗ