ಉಡುಪಿಯ ಹತ್ಯಾಕಾಂಡಕ್ಕೆ ಭಗ್ನಪ್ರೇಮವೇ ಕಾರಣ: ಹತ್ಯೆಯಾದ ಗಗನಸಖಿಗೂ ( ಅಯ್ನಾಜ್ ) ಆರೋಪಿಗೂ ಏನು ಸಂಬಂಧ!?

ಉಡುಪಿಯ ಹತ್ಯಾಕಾಂಡಕ್ಕೆ ಭಗ್ನಪ್ರೇಮವೇ ಕಾರಣ: ಹತ್ಯೆಯಾದ ಗಗನಸಖಿಗೂ ( ಅಯ್ನಾಜ್ ) ಆರೋಪಿಗೂ ಏನು ಸಂಬಂಧ!?

 ಉಡುಪಿಯ ನೇಜಾರುವಿನ ತೃಪ್ತಿ ನಗರದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣ ಕರಾವಳಿಯನ್ನೆ ಕಂಪಿಸುವಂತೆ ಮಾಡಿತ್ತು. ಈ ಸುದ್ದಿ ತಿಳಿಯುತ್ತಿದ್ದಹಾಗೆ ರಾಜ್ಯವೆ ತಲ್ಲಣಗೊಂಡಿತ್ತು,! ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ವಿವಿಧ ಆಯಾಮಗಳನ್ನು ಪಡೆದುಕೊಂಡಿತ್ತು. ಒಬ್ಬಂಟಿಯಾಗಿ ಬಂದು ಹಾಡಹಗಲೇ ಬರ್ಬರವಾಗಿ ನಾಲ್ವರ ನೆತ್ತರಕೋಡಿ ಹರಿಸಿದ್ದ ಆರೋಪಿಯನ್ನು ಬಂಧಿಸಲು ಉಡುಪಿ ಪೊಲೀಸರು ಐದು ವಿಷೇಶ ತಂಡಗಳನ್ನು ರಚಿಸಿ ಹಂತಕನ ಬೇಟೆಗೆ ಹೊರಟಿದ್ದರು. ಮೊದಲು ತನಿಖಾ ಹಾದಿಯಲ್ಲಿ ಆರೋಪಿ ಕೇರಳಕ್ಕೆ ಪರಾರಿಯಾಗಿದ್ದಾನೆ ಎಂಬ ಸುದ್ದಿ ಭರ್ಜರಿಯಾಗಿ ಹರಡಿತ್ತು ಅದನ್ನು ತಳ್ಳಿಹಾಕುವಂತೆಯು ಇರಲಿಲ್ಲ. ಆದರೆ ಪೋಲಿಸರು ಸೂಕ್ಷ್ಮ ಮಾಹಿತಿ ಅಧಾರದ ಮೇಲೆ ಹತ್ಯೆಯಾದ ಗಗನಸಖಿ ಯ ಸ್ನೇಹಿತರ ಮೊಬೈಲ್ ಮೇಲೆ ನಜರು ಹಾಕಿದ್ದರು. ಆಕೆಯ ಜೋತೆಗೆ ಮಂಗಳೂರು ಏರ್ ಫೋರ್ಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲವರ ಮೊಬೈಲ್ ಗೆ ಕಾಲ್ ಮಾಡಿದಾಗ ಆರೋಪಿ ಪ್ರವೀಣ್ ಚೌಗಳೆಯ ಮೊಬೈಲ್ ಸ್ವಿಚ್ ಅಫ್ ಆಗಿತ್ತು.ಅಲ್ಲಿಗೆ ಆರೋಪಿ ಇರಬಹುದು ಇವನು‌ ಎನ್ನುವ ಅನುಮಾನ ಪೋಲಿಸರನ್ನು ಕಾಡಿತ್ತು. ಇತನ ಬಂಧನಕ್ಕಾಗಿ ಪೋಲಿಸರು ಸಿದ್ದರಾಗಿದ್ದರು ಮತ್ತು ಅವನ ಮೊಬೈಲ್ ಅನ್ ಆಗುವುದನ್ನೆ ಕಾದು ಕುಳಿತಿದ್ದರು ಹಂತಕ ಕೊನೆಗೂ ತನ್ನ ಸ್ವಿಚ್ ಅಫ್ ಮಾಡಿದ್ದ ಮೊಬೈಲ್ ಅನ್ನು ಮಂಗಳವಾರ ಅನ್ ಮಾಡಿದ್ದ ತಕ್ಷಣವೇ ಆಲರ್ಟ್ ಅದ ಪೋಲಿಸರು ಇತನ ಇರುವಿಕೆಯ ಲೋಕೆಷನ್ ಕಲೆಹಾಕಿದ್ದಾರೆ. ಬಳಿಕ ಮಂಗಳವಾರ ರಾತ್ರಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡುಚಿಯಲ್ಲಿ ಸಂಭಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ ಶಂಕಿತ ಆರೋಪಿಯನ್ನು ಉಡುಪಿ ಪೋಲಿಸರು ಬೆಳಗಾಮ್ ಪೋಲಿಸರ ಸಹಕಾರದೊಂದಿಗೆ ವಶಕ್ಕೆ ಪಡೆದಿದ್ದರು.

ಇತ ಆಕೆಯನ್ನು ಇಷ್ಟ ಪಟ್ಟಿದ್ದ ಬಿಟ್ಟರೆ ಅ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಆದರೂ ಬೆನ್ನಿಗೆ ಬಿದ್ದದ್ದನಂತೆ!! ಇತನ ಲವ್ ಓನ್ ವೆ ಆಗಿದ್ದರಿಂದ ಇತನಿಗೆ ಆಕೆಯ ಮೇಲೆ ಸಾಕಷ್ಟು ಅನುಮಾನಗಳು ಮೂಡಿರಲು ಸಾಧ್ಯ? ತನ್ನ ಭಗ್ನಗೊಂಡ ಪ್ರೇಮದಿಂದ ಕಿರಾತಕ ನೆತ್ತರ ಕೋಡಿ ಹರಿಸುವವರೆಗೆ ಬಂದು ನಿಂತಿದ್ದಾನೆ! ಈ ಕಾರಣದಿಂದಲೇ ಬರ್ಬರ ಹತ್ಯೆಗೆ ಭಗ್ನ ಪ್ರೇಮವೆ ಕಾರಣ ಎನ್ನಲಾಗುತ್ತಿದೆ.

ಆರೋಪಿ ಪ್ರವೀಣ್​​​​ ಚೌಗಲೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು ಸಿಐಎಸ್‌ಎಫ್‌ ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಸಂದರ್ಭದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಜ್ ( ಈತನಿಂದ ಹತ್ಯೆಯಾದ ಯುವತಿ ) ಪರಿಚಯವಾಗಿ ಇಬ್ಬರು ಸ್ವಲ್ಪ ಸಮಯ ಆತ್ಮೀಯವಾಗಿದ್ದರಂತೆ! ಆದರೆ ನಂತರ ಅಯ್ನಾಜ್ ಆತನಿಂದ ದೂರವಾಗಿದ್ದಳಂತೆ? ಇದರಿಂದ ಕುಪಿತನಾಗಿ ಭಗ್ನಪ್ರೇಮಿ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.? ಭಾನುವಾರ ಅಯ್ನಾಜ್‌ಳನ್ನು ಹುಡುಕಿಕೊಂಡು ಉಡುಪಿಗೆ ಬಂದಿದ್ದ ಹಂತಕ ಕೊಲೆಗೆ ಪೂರ್ವತಯಾರಿ ಮಾಡಿಕೊಂಡು ಆಕೆಯ ಮನೆಗೆ ಹೊಗಿದ್ದ. ಮನೆಯ ಒಳನುಗ್ಗಿದ ಹಂತಕ ಅಯ್ನಾಜ್‌ಳಿಗೆ ಚೂರಿ ಇರಿಯುತ್ತಿದ್ದಂತೆ ಆಕೆಯನ್ನು ರಕ್ಷಿಸಲು ಬಂದ ತಾಯಿ, ಸಹೋದರಿಗೂ ಪ್ರವೀಣ್ ಚೂರಿಯಿಂದ ಇರಿದಿದ್ದಾನೆ. ಮನೆಯಲ್ಲಿ ಕೂಗಟ ಚಿರಾಟವನ್ನು ಕೇಳಿದ ಹೊರಗೆ ಆಟವಾಡುತ್ತಿದ್ದ ಅಸೀಮ್ ಮನೆಯ ಒಳಗೆ ಓಡಿ ಬಂದಿದ್ದಾನೆ. ಈ ವೇಳೆ ಅಸೀಮ್‌ಗೂ ಚೂರಿಯಿಂದ ಇರಿದು ರಾಕ್ಷಸನಂತಾಗಿದ್ದ ಹಂತಕ ಪ್ರವೀಣ್ ಅಲ್ಲಿಂದ ಕಣ್ಮರೆಯಾಗಿದ್ದ! ಅಕ್ಕಪಕ್ಕದಲ್ಲಿದ್ದ ಸಂಭಂದಿಕರು ಸ್ಥಳಿಯರು ಬಂದು ನೋಡುವ ಹೊತ್ತಿಗೆ ನಾಲ್ಕು ಮಂದಿಯ ಉಸಿರು ನಿಂತಿತ್ತು.ಅಷ್ಟು ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಮನೆಯ ತುಂಬೆಲ್ಲ ರಕ್ತದ ಕೊಡಿ ಹರಿದಿತ್ತು.
ಬಯಸಿದ ಪ್ರೀತಿ ಸಿಗಲಿಲ್ಲ ಎನ್ನುವ ಒಂದೆ ಕಾರಣವನ್ನು ಇಟ್ಟುಕೊಂಡ ಹಂತಕ ಆಕೆಯ ಜೋತೆಗೆ ಆಕೆಯ ಮನೆಯವರ ಪ್ರಾಣ ತೆಗೆದಿದ್ದು ದುರಂತವೆ ಹೌದು!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಬಂಧನವಾಗಿದೆ ಅದರೆ ಬಾಳಿ ಬದುಕಬೇಕಾದ ಜೀವಗಳು ಇತನ ಕ್ರೂರತನಕ್ಕೆ ಜೀವಬಿಟ್ಟಿವೆ…

CRIME NEWS: ಒಬ್ಬಳನ್ನು ಹತ್ಯೆ ಮಾಡಲು ಬಂದವನು ನಾಲ್ವರನ್ನು ಹತ್ಯೆ ಮಾಡಿದನಾ ಹಂತಕ!?

CRIME NEWS: ಒಬ್ಬಳನ್ನು ಹತ್ಯೆ ಮಾಡಲು ಬಂದವನು ನಾಲ್ವರನ್ನು ಹತ್ಯೆ ಮಾಡಿದನಾ ಹಂತಕ!?

niws.ashwasurya.in

Udupi Murder case: ಹಂತಕ ಪ್ರವೀಣ್ ತನ್ನ ಮೊಬೈಲ್ ಅನ್ನು ಸ್ವಿಚ್ಛ್ ಆನ್ ಮಾಡುತ್ತಿದ್ದಂತೆಯೇ ಅದಕ್ಕಾಗಿ ಕಾದು ಕುಳಿತಿದ್ದ ಪೋಲಿಸರು ಅ ಸಮಯದಲ್ಲಿ ಅಲರ್ಟ್ ಆಗಿದ್ದಾರೆ.ಆತನ ಇರುವಿಕೆಯನ್ನು ಪಕ್ಕಾ ಮಾಡಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ: ಒಂದೇ ಕುಟುಂಬದ ನಾಲ್ವರು ತಾಯಿ ಮತ್ತು ಮೂರು ಜನ ಮಕ್ಕಳ ಹತ್ಯೆಗೆ ಸಂಬಂಧಿಸಿದಂತೆ ಹಲವು ಕೋನದಲ್ಲಿ ತನಿಖೆ ಮಾಡಿದ ಪೋಲಿಸರು ಸಾಕಷ್ಟು ಮಾಹಿತಿ ಕಲೆಹಾಕಿದ್ದರು. ಪೊಲೀಸರು ಐದು ತಂಡವನ್ನು ರಚಿಸಿ ಹಂತಕ ಬೇಟೆಗೆ ಹೋರಟಿದ್ದರು ಅದರಲ್ಲಿ ಒಂದು ತಂಡ ನೆರವಾಗಿ ತಲುಪಿದ್ದು ಬೆಳಗಾವಿಗೆ.ಪಕ್ಕಾ ಮಾಹಿತಿ ಅಧಾರದ ಮೇಲೆ ಅದರಲ್ಲೂ ಆತನ ಮೊಬೈಲ್ ಸ್ವಿಚ್ ಅನ್ ಆಗುತ್ತಿದ್ದ ಹಾಗೆ ಅವನ ಇರುವಿಕೆಯನ್ನು ಖಾತ್ರಿಮಾಡಿಕೊಂಡ ಪೋಲಿಸರ ತಂಡ ಆರೋಪಿ ಪ್ರವೀಣ್ ಚೌಗಲೆ ಎಂಬಾತನನ್ನು ಬಂಧಿಸಿ ಬೆಳಗಾವಿಯಿಂದ ಉಡುಪಿಗೆ ಕರೆ ತಂದು ವಿಚಾರಣೆಗೆ ಮುಂದಾಗಿದ್ದಾರೆ.

ಆರೋಪಿ ಪ್ರವೀಣ್ ಚೌಗಲೆ ಮತ್ತು ಮೃತ ಯುವತಿ ಆಯ್ನಾಜ್ ಒಂದೆ ಜಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.! ಎಂಬ ವಿಷಯ ಹೊರ ಬಿದ್ದಿದೆ.ಇಬ್ಬರು ಮಂಗಳೂರು ಏರ್ ಪೋರ್ಟ್ ನಲ್ಲಿ ಏರ್ ಇಂಡಿಯಾ ಸಿಬ್ಬಂದಿಯಾಗಿದ್ದ ಪ್ರವೀಣ್ ಮತ್ತು ಅಯ್ನಾಜ್ ಇಬ್ಬರಿಗೂ ಪರಿಚಯವಿತ್ತು. ಭಾನುವಾರ ಬೆಳಿಗ್ಗೆ ಮಂಗಳೂರಿನಿಂದ ಉಡುಪಿಗೆ ಬಂದಿದ್ದ ಅಯ್ನಾಜ್ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಇದೆ ವೇಳೆಗೆ ಮನೆಗೆ ಬಂದಿದ್ದ ಹಂತಕ ಪ್ರವೀಣ್ ಒಬ್ಬಳನ್ನು ಹತ್ಯೆಮಾಡಲು ಬಂದವನು ಮನೆ ನಾಲ್ಕು ಜನರನ್ನು ಕೊಲೆ ಮಾಡಿದ್ದಾನೆ. ಇದಕ್ಕೆ ಆಯ್ನಾಜ್ ಮೇಲಿನ ದ್ವೇಷವೇ ಕಾರಣ ಎನ್ನಲಾಗುತ್ತಿದೆ. ಹತ್ಯೆ ಮಾಡುವ ವೇಳೆಯಲ್ಲಿ ಹಂತಕ ಪ್ರವೀಣ್ ತನ್ನ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದನೆ. ಒಂದು ಭಾಗವಾಗಿ
ಮೊಬೈಲ್ ಸ್ವಿಚ್ಛ್ ಆಫ್ ಅಧಾರದ ಮೇಲೆ ತನಿಖೆಗೆ ಮುಂದಾದ ಉಡುಪಿ ಪೋಲಿಸರು. ಈ ಹತ್ಯೆ ನೆಡೆದ ಸಮಯವನ್ನು ಆಧಾರಿಸಿ ಅಯ್ನಾಜ್ ಸಹೋದ್ಯೋಗಿಗಳ ಪೈಕಿ ಈ ಸಮಯದಲ್ಲಿ ಯಾರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತನಿಖೆಗೆ ಮುಂದಾದಾಗ ಹಂತಕ ಪ್ರವೀಣ್ ಚೌಗಳೆ ಮೊಬೈಲ್ ಮಾತ್ರ ಸ್ವಿಚ್ ಆಫ್ ಆಗಿರೋದು ಗಮನಕ್ಕೆ ಬಂದಿದೆ. ತಕ್ಷಣವೇ ಅನುಮಾನ ಗೊಂಡ ಪೋಲಿಸರ ತಂಡ ಪ್ರವೀಣ್ ಪತ್ತೆಗೆ ಮುಂದಾಗಿದ್ದರು.

ನಾಲ್ವರನ್ನು ಹತ್ಯೆಮಾಡಿ ಕಣ್ಮರೆಯಾಗಿದ್ದ ಹಂತಕ ಪ್ರವೀಣ್ ಹತ್ಯೆ ಮಾಡುವ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿದವನು ಮಾರನೇ ದಿನ
ಮಂಗಳವಾರ ಮಧ್ಯಾಹ್ನ ಮೊಬೈಲ್ ಸ್ವಿಚ್ಛ್ ಆನ್ ಮಾಡುತ್ತಿದ್ದಂತೆಯೇ ಅದಕ್ಕಾಗಿ ಕಾದು ಕುಳಿತಿದ್ದ ಪೋಲಿಸರು ಅಲರ್ಟ್ ಆಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಮತ್ತು ಉಡುಪಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹಂತಕನನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಪೋಲಿಸರು ಈ ಪ್ರಕರಣದ ನಂತರ ಆರೋಪಿಯ ಪತ್ತೆಗಾಗಿ ಸುಮಾರು 15ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದರು! ಹತ್ಯೆಯಾದ‌ ಮನೆಯನ್ನು ಸುಪರ್ದಿಗೆ ತೆಗೆದುಕೊಂಡ ಪೋಲಿಸರು ಮನೆ ಮೂಲೆ ಮೂಲೆಗಳನ್ನು ಶೋಧಿಸಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು
ಪ್ರವೀಣ್ ಬಂಧನಕ್ಕೂ ಮೊದಲು ಹಲವು ಆಯಾಮದಲ್ಲಿ ಉಡುಪಿ ಪೊಲೀಸರ ತಂಡ ಸಾಕಷ್ಟು ತನಿಖೆ ಮಾಡಿದ್ದರು. ಸಿಸಿ ಟಿವಿಯಲ್ಲಿ ಕಂಡಂತೆ ಹಂತಕನ ಮುಖಚಹರೆ ಹೋಲುವ ಹದಿನೈದು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಪ್ರಕರಣದ ತನಿಖೆಗೆ ಐದು ಪೋಲಿಸರ ವಿಷೇಶ ತಂಡಗಳನ್ನು ರಚಿಸಿದ್ದ ಪೊಲೀಸರು ಹಂತಕನ ಬೇಟೆಗೆ ಕೇರಳ, ಉಡುಪಿ, ಶಿವಮೊಗ್ಗ, ದಾವಣಗೆರೆ, ಮಂಗಳೂರಿನಲ್ಲಿ ಕೆಲವರನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿಯು ಲಭ್ಯವಾಗಿದೆ.

ಕುಡಚಿಯಲ್ಲಿ ಸಂಭಂದಿಕರ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ
ಪ್ರವೀಣ್ ಚೌಗಲೆ ಈತ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮೂಲದವನಾಗಿದ್ದಾನೆ. ಕೇವಲ ಹದಿನೈದು ನಿಮಿಷದ ಒಳಗಾಗಿ ನಾಲ್ವರನ್ನು ಹತ್ಯೆಮಾಡಿದ ಹಂತಕ ತಕ್ಷಣವೇ ಅಲ್ಲಿಂದ ಕಣ್ಮರೆಯಾಗಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೋಲಿಸರ ತಂಡ ಈ ಘಟನೆ ನೆಡೆದ ಮೂರು ದಿನಗಳ ಅಂತರದಲ್ಲಿ ಹಂತಕನ ಜಾಡು ಹಿಡಿದು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ಕಾರ್ಯವನ್ನು ಶ್ಲಾಘಿಸಲೆ ಬೇಕು.
ಆರೋಪಿಯ ಓನ್ ವೇ ಪ್ರೀತಿಗೆ ಅಮಾಯಕ ನಾಲ್ವರನ್ನು ಬಲಿ ಪಡದು ವಿಕೃತಿ ಮೇರೆದಿದ್ದಾನೆ. ಇಂತವರಿಗೆ ಕಾನೂನು ಸರಿಯಾದ ಶಿಕ್ಷೆಯನ್ನು ನೀಡಬೇಕಿದೆ…

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!