ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಹಾಗೂ ನಾಗರಿಕ ಸೇವೆಗಳನ್ನು ಚುರುಕಾಗಿಸುವ ಉದ್ದೇಶದಿಂದ ರಾಜ್ಯ ಸರಕಾರ ಅಭಿವೃದ್ಧಿಪಡಿಸಿರುವ ಪಂಚತಂತ್ರ 2.0 ತಂತ್ರಾಂಶಕ್ಕೆ ಆರಂಭದಲ್ಲೇ ತಾಂತ್ರಿಕ ದೋಷ ಎದುರಾಗಿದೆ.
ಪಂಚತಂತ್ರ : ಗ್ರಾಮ ಪಂಚಾಯತಿಗಳು ಹಾಗೂ ಗ್ರಾಮೀಣ ಜನರಬದುಕಿಗೆ ಸಂಕಷ್ಟ ತಂದಿದೆ – ಒಕ್ಕೂಟದ ಅಧ್ಯಕ್ಷ ಅನಿಲ್ ಟಿ.ಜೆ
ತೀರ್ಥಹಳ್ಳಿ : ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಪಂಚತಂತ್ರ ತಂತ್ರಜ್ಞಾನ ಅಳವಡಿಸುವ ಮೂಲಕ ಸುಲಲಿತ ಹಾಗೂ ಪಾರದರ್ಶಕ ಆಡಳಿತ ನೀಡಲು ಮುಂದಾಯಿತಾದರೂ ಅದನ್ನು ಸಮರ್ಪಕವಾಗಿ ಎಲ್ಲಾ ಭಾಗದ ಜನರ ಸಮಸ್ಯೆ ಗಳಿಗನುಗುಣವಾಗಿ ಅಳವಡಿಸದೇ ಇರುವುದರಿಂದ ಗ್ರಾಮ ಪಂಚಾಯತಿ ಗಳ ಆದಾಯ ಹಾಗೂ ಗ್ರಾಮೀಣ ಜನರ ಬದುಕಿಗೆ ಪಂಚತಂತ್ರ ಮಾರಕವಾಗಿ ಪರಿಣಮಿಸಿದೆ ಎಂದು ಗ್ರಾಮಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಅನಿಲ್.ಟಿ.ಜೆ ಆರೋಪಿಸಿದ್ದಾರೆ.
ಪರವಾನಿಗೆ ಹಾಗೂ ಎನ್ಓಸಿಗಾಗಿ ಗ್ರಾಮೀಣ ಜನರ ಅಲೆದಾಟ
ಪಂಚತಂತ್ರ ತಂತ್ರಜ್ಞಾನ ಅಳವಡಿಕೆಯ ನಂತರ ಯಾವುದೇ ಪರವಾನಿಗೆ ಹಾಗೂ ಎನ್ ಓಸಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ.ಒಂದೆಡೆ ನೆಟ್ ವರ್ಕ್ ಸಮಸ್ಯೆ ಇನ್ನೊಂದೆಡೆ ಸರ್ವರ್ ಪ್ರಾಬ್ಲಮ್ ಎಂದು ಸಬೂಬು ಹೇಳುವ ಅಧಿಕಾರಿಗಳು ಹಕ್ಕುಪತ್ರ, ಇ-ಸ್ಚತ್ತಿಲ್ಲದೇ ಪಂಚತಂತ್ರ ಅಳವಡಿಕೆ ನಂತರ ಪರವಾನಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.ಮಲೆನಾಡು ಪ್ರದೇಶದಲ್ಲಿ ನೂರಕ್ಕೆ ಇಪ್ಪತ್ತು ಪರ್ಸೆಂಟ್ ಜನ ಹಕ್ಕು ಪತ್ರ,ಇ-ಸ್ವತ್ತು ಹೊಂದಿಲ್ಲ.ಕೆಲವರು ಡಿಮ್ಯಾಂಡ್ ಹೊಂದಿದ್ದರೆ ಅನೇಕರು ಡಿಮ್ಯಾಂಡ್ ಸಹ ಹೊಂದಿಲ್ಲ.ಇದೀಗ ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಆರಂಭವಾಗಿದ್ದು ಅಡಿಕೆ ಸುಲಿಯುವ ಯಂತ್ರಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಎನ್ ಓಸಿ ಸಹ ಸಾಧ್ಯಾವಾಗುತ್ತಿಲ್ಲ.ಅನೇಕರು ಅಡಿಕೆ ಸಂಸ್ಕರಣ ಘಟಕ,ದನದ ಕೊಟ್ಟಿಗೆ ನಿರ್ಮಾಣ ಮಾಡಲು ಬ್ಯಾಂಕ್ ಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಸಾಲ ಪಡೆಯಲು ಗ್ರಾಮ ಪಂಚಾಯತಿಯ ಪರವಾನಿಗೆ ಅಗತ್ಯವಿರುವುದರಿಂದ ಗ್ರಾಮ ಪಂಚಾಯತಿ ಗೆ ಎಡತಾಕುತ್ತಿದ್ದು ಪಂಚತಂತ್ರದ ಅವಾಂತರದಿಂದ ಪರವಾನಿಗೆ ಹಾಗೂ ಎನ್ ಓಸಿ ದೊರಕದೆ ಗ್ರಾಮ ಪಂಚಾಯತಿಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಾ ವಾಪಾಸ್ಸಾಗುತ್ತಿದ್ದಾರೆ.
ಗ್ರಾಮ ಪಂಚಾಯತಿಗಳು ಆದಾಯವಿಲ್ಲದೆ ಸೊರಗಿವೆ
ಬಹುತೇಕ ಗ್ರಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲವಿಲ್ಲದೆ ಮನೆಕಂದಾಯ ಹಾಗೂ ನೀರಿನ ಕಂದಾಯಕ್ಕೆ ಅವಲಂಬಿತವಾಗಿವೆ.ಪಂಚತಂತ್ರ ಅಳವಡಿಕೆಯ ನಂತರ ಕರವಸೂಲಿಗಾರರು ಆನ್ ಲೈನ್ ನಲ್ಲಿರಶೀದಿ ನೀಡಿ ಕಂದಾಯ ವಸೂಲಿ ಮಾಡುವುದು ಖಡ್ಡಾಯ.ಆದರೆ ಗ್ತಾಮೀಣ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ ಯಿಂದ ಅದು ಸಾಧ್ಯವಾಗದೇ ಕರವಸೂಲಿಯನ್ನೆ ಸ್ಥಗಿತಗೊಳಿಸಲಾಗಿದೆ.ಇದರಿಂದ ವರ್ಗ-1 ರಲ್ಲಿ ಹಣವಿಲ್ಲದೇ ಗ್ರಾಮಪಂಚಾಯತಿ ಸಭೆಗಳನ್ನೂ ನಡೆಸಲು ಸಾಧ್ಯವಾಗದ ಸ್ಥಿತಿಗೆ ಕೆಲವು ಗ್ರಾಮಪಂಚಾಯತಿ ಗಳು ತಲುಪಿವೆ.
ಅಧಿಕಾರಿಗಳ ಅಸಹಕಾರ
ಪಂಚತಂತ್ರ ನೂನ್ಯತೆ,ನರೇಗಾ ಯೋಜನೆಯಡಿ ಕೂಲಿ ಹಣ ಬಾರದಿರುವುದು,ನೌಕರ ರ ಹುದ್ದೆ ಭರ್ತಿ ಬಗ್ಗೆ ಅಧಿಕಾರಿಗಳು ಅಸಹಕಾರ ತೋರುತ್ತಾ ಮೇಲಧಿಕಾರಿಗಳ ಕಡೆ ಬೊಟ್ಟು ಮಾಡುತ್ತಿದ್ದು ಗ್ರಾಮ ಸರ್ಕಾರ ಗಳು ಸಂಪೂರ್ಣ ದಿವಾಳಿಯ ಅಂಚು ತಲುಪುತ್ತಿವೆ.ಪಂಚತಂತ್ರ ದ ಅಸಮರ್ಪಕ ಅಳವಡಿಕೆ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಅನಿಲ್ ತಿಳಿಸಿದ್ದಾರೆ.
ಸುಧೀರ್ ವಿಧಾತ ,ಶಿವಮೊಗ್ಗ