ಅತ್ತೆಯನ್ನೆ ಹತ್ಯೆಮಾಡಿ ಮುಗಿಸಿದ ಸೊಸೆ!! ಮೊಬೈಲ್ ಚಾಟಿಂಗ್‌ನಿಂದ ಸಿಕ್ಕಿಬಿದ್ಲು .

ಅತ್ತೆಯನ್ನೆ ಹತ್ಯೆಮಾಡಿ ಮುಗಿಸಿದ ಸೊಸೆ!! ಮೊಬೈಲ್ ಚಾಟಿಂಗ್‌ನಿಂದ ಸಿಕ್ಕಿಬಿದ್ಲು ..

ಅತ್ಯೆಯ ಕೈಕೆಳಗೆ ಬದುಕಲು ಸಾಧ್ಯವಿಲ್ಲ ಮನೆಯ ಆಡಳಿತ ನನ್ನ ಕೈಗೇ ಸಿಗಬೇಕೆಂಬ ದುರಾಸೆಯಲ್ಲಿ ಖತರ್ನಾಕ್ ಸ್ಕೆಚ್ ಹಾಕಿದ ಸೊಸೆ ಒಬ್ಬಳು ತನ ಅತ್ತೆಯನ್ನು ( ಗಂಡನ ತಾಯಿ ) ಪ್ರೀಯತಮನ ಜೊತೆಗೆ ಸೇರಿಕೊಂಡು ಕೊಂದುಹಾಕಿದ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನೆಡೆದು ಹೋಗಿದೆ. ಅತ್ತೆಯನ್ನೆ ಹತ್ಯೆಮಾಡಿದ ಸೊಸೆ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರದ ಹಿಂದೆ ಸೊಸೆ ಒಬ್ಬಳು ತನ್ನ ಅತ್ತೆ ಲಕ್ಷ್ಮಮ್ಮ(55) ಅವರನ್ನು ಕೊಲೆಗೈದಿದ್ದಾಳೆ!! ಸೊಸೆ ರಶ್ಮಿ, ಆಕೆಯ ಪ್ರಿಯಕರ ಅಕ್ಷಯ್ ಮತ್ತವನ ಸ್ನೇಹಿತ
ಪುರುಷೋತ್ತಮ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲಕ್ಷ್ಮಮ್ಮ ಅವರ ಪುತ್ರ ಮಂಜುನಾಥ್ ರನ್ನು ಮದುವೆಯಾಗಿದ್ದ ರಶ್ಮಿ, ಕದ್ದು ಮುಚ್ಚಿ ತಮ್ಮ ಮನೆಯ ಮೇಲಿನ ಮನೆಯಲ್ಲಿ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳಂತೆ. ಮನೆಯ ಹಣದ ವ್ಯವಹಾರಕ್ಕೆ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ನಿತ್ಯಾ ಜಗಳ ಆಗುತ್ತಿತ್ತು ಎನ್ನುವ ಮಾತು ಕೇಳಿ ಬಂದಿದೆ.
ಜಗಳದಿಂದ ಅತ್ತೆಯ ಜೊತೆಗಿನ ನಿತ್ಯ ಗಲಾಟೆಯಿಂದ ಆಕ್ರೋಶಗೊಂಡಿದ್ದ ರಶ್ಮಿ
ತಾನೇ ಮನೆ ವ್ಯವಹಾರ ನೋಡಿಕೊಳ್ಳುವುದರ ಜೋತೆಗೆ ಮನೆಯ ಯಜಮಾನಿಕೆಯನ್ನು ಅನುಭವಿಸುವ ದುರಾಲೋಚನೆಯಿಂದ ತನ್ನ ಅತ್ತೆ ಕೊಲೆಗೆ ಸಂಚು ರೂಪಿಸಿದ್ದಳೆ.!! ಅದಕ್ಕೆ ಮಹಡಿ ಮನೆಯ ಪ್ರಿಯಕರನನ ಜೊತೆ ಸೇರಿಕೊಂಡು ಅತ್ತೆಯನ್ನೇ ಸುಡುಗಾಡು ಸೇರಿಸುವ ಪ್ಲಾನ್ ಮಾಡಿದ್ದಳು.
ಕಳೆದ ಅಕ್ಟೋಬರ್ 5 ರಂದು ಪತಿ ಮಂಜುನಾಥ್ ಹೊರ ಹೋಗಿದ್ದಾಗ ಅಕ್ಷಯ್ ಹಾಗೂ ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಕೊಲೆ ಮಾಡಿದ್ದಳು. ಮೊದಲು ನಿದ್ರೆ ಮಾತ್ರೆ ಕೊಟ್ಟಿದ್ದ ರಶ್ಮಿ, ನಂತರ ಪ್ರಿಯಕರ ಅಕ್ಷಯ್ ಮತ್ತು ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳೆ

ನಂತರ ಅತ್ತೆಗೆ ಹೃದಯಾಘಾತವಾಗಿದೆ ಎಂದು ಎಲ್ಲರನ್ನೂ ನಂಬಿಸುವಂತೆ ಹೈಡ್ರಾಮ ಮಾಡಿದ್ದಾಳೆ. ಆದರೆ ಈಕೆಯ ದುಷ್ಕೃತ್ಯ ಒಂದು ಮೊಬೈಲ್ ಚಾಟಿಂಗ್‌ನಿಂದ ಬಯಲಾಗಿದೆ. ಅದೇ ಕಟ್ಟಡದ ಒಂದನೆ ಮಹಡಿಯಲ್ಲಿ ವಾಸವಿದ್ದ ರಾಘವೇಂದ್ರ ಎಂಬವರಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಅಕ್ಷಯ್ ಮೊಬೈಲ್ ಪರಿಶೀಲನೆ ನಡೆಸಿದ್ದ ರಾಘವೇಂದ್ರ ಅವರಿಗೆ, ಅಕ್ಷಯ್ ಮತ್ತು ರಶ್ಮಿ ನಡುವೆ ನಡೆದ ಚಾಟಿಂಗ್ ವಿಚಾರ ಗೊತ್ತಾಗಿತ್ತು. ಅದನ್ನು ರಶ್ಮಿಯ ಪತಿ ಮಂಜುನಾಥ್‌ಗೆ ತಿಳಿಸಿದ್ದರು. ಅಲ್ಲದೇ ಚಾಟಿಂಗ್ ಮಾಡಿರುವ ಸಾಕ್ಷ್ಯ ಕೂಡ ಕಲೆ ಹಾಕಿದ್ದರು.

ನಂತರ ಸಾಕ್ಷಿ ಸಮೇತ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು. ರಶ್ಮಿ ಪತಿ ಮಂಜುನಾಥ್ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಬ್ಯಾಡರಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆವಲಿಗೆ‌ ಬಿದ್ದ ಸೊಸೆ ಒಬ್ಬಳು ಯಜಮಾನಿಕೆಯ ಪಟ್ಟ ಅಲಂಕರಿಸಲು ತನ್ನ ಅಕ್ರಮ ಸಂಭಂದದ ಗೆಣೆಗಾರನೊಂದಿಗೆ ಸೇರಿಕೊಂಡು ತನ್ನ ಅತ್ತೆಯನ್ನೆ ಹತ್ಯೆಗೈದು ಜೈಲು ಪಾಲಾಗಿದ್ದಾಳೆ…

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!