ಪೋಕ್ಸೋ ಪ್ರಕರಣ ಆರೋಪಿ ಗ್ರಾಮ ಲೆಕ್ಕಾಧಿಕಾರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ

ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ಲೈಂಗಿಕ ಹಲ್ಲೆ ನಡೆಸಿರುವುದು ಸಾಬೀತಾಗಿರುವು ದಾಗಿ ದೃಢಪಡಿಸಿ ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ, ಪೋಕ್ಸೋ ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ ಮತ್ತು 4 ಸಾವಿರ ರೂ. ದಂಡ ಪಾವತಿಸಲು ಆದೇಶ ನೀಡಿದರು. ಸರಕಾರದಿಂದ ನೊಂದ ಬಾಲಕಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ನಿರ್ದೇಶಿಸಿ ಆದೇಶಿಸಿದರು.

ಅಂದಿನ ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ‌ರಾದ ಖಡಕ್ ಅಧಿಕಾರಿ ನೀಶಾ ಜೇಮ್ಸ್

ಪೋಕ್ಸೋ ಪ್ರಕರಣ ಆರೋಪಿ ಗ್ರಾಮ ಲೆಕ್ಕಾಧಿಕಾರಿಗೆ ಮೂರು ವರ್ಷ ಜೈಲು ಶಿಕ್ಷೆ

ಉಡುಪಿ : ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿ ಶಿಕ್ಷೆ ವಿಧಿಸಲಾಯಿತು.
2018ರಲ್ಲಿ ಹೆಜಮಾಡಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೇ ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿ ಯಾಗಿದ್ದಾನೆ.
17 ವರ್ಷದ ಪ್ರಾಯದ ನೊಂದ ಬಾಲಕಿ ತನ್ನ ಚಿಕ್ಕಮ್ಮಳೊಂದಿಗೆ ತನ್ನ ಅಕ್ಕನ ಜಾಗದ ತಕರಾರಿಗೆ ಸಂಬಂಧಿಸಿದಂತೆ ದಾಖಲೆಗಳ ಬಗ್ಗೆ ವಿಚಾರಿಸಲು ಹೆಜಮಾಡಿ ಗ್ರಾಮ ಪಂಚಾಯತಿ‌ ಕಚೇರಿಗೆ ಹೋಗಿದ್ದಾಳೆ ಇದೆ ವೇಳೆ ಆರೋಪಿಯು ನೊಂದ ಬಾಲಕಿ ಮತ್ತು ಆಕೆಯ ಚಿಕ್ಕಮ್ಮನನ್ನು ಕೆಲಸ ಆಗಿಲ್ಲವೆಂದು ವಾಪಾಸು ಕಳುಹಿಸಿದ್ದಾನೆ ನಂತರ ಕೂಡಲೇ ಅವರನ್ನು ಹಿಂಬಾಲಿಸಿಕೊಂಡು ಬಂದು ಬಸ್‌ ನಿಲ್ದಾಣದ ಬಳಿ ನಿಮ್ಮ ಕೆಲಸ ಆಗಿದೆ ಎಂದು ಹೇಳಿ 5 ಸಾವಿರ ರೂಪಾಯಿ ಪಡೆದಿದ್ದಾನೆ ಅ ನಂತರದಲ್ಲಿ ನೊಂದ ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡಿ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದನೆ ಎಂದು ದೂರಿನಲ್ಲಿ ದಾಖಲಾಗಿದೆಯಂತೆ.
ನಂತರದಲ್ಲಿ ಆಕೆಗೆ ನಿರಂತರವಾಗಿ ಕರೆಮಾಡಿ ಕಿರುಕುಳ ನೀಡುತ್ತಿದ್ದ‌ನಂತೆ ಆರೋಪಿ, ನೊಂದ ಬಾಲಕಿ ತಾನು ಅಪ್ರಾಪ್ತೆ ಎಂದು ಹೇಳಿಕೊಂಡರೂ ಆತ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿ ಆಕೆಯ ಅಶ್ಲೀಲ ಚಿತ್ರಗಳನ್ನು ಕಳುಹಿಸುವಂತೆ ಹೇಳುತ್ತಿದ್ದನಂತೆ! ಬಳಿಕ ಹೆಜಮಾಡಿಯ ಹೊಟೇಲ್‌ವೊಂದಕ್ಕೆ ಆಕೆಯನ್ನು ಬರಲು ಹೇಳಿದ್ದು, ಆಕೆ ನಿರಾಕರಿಸಿದಕ್ಕೆ ನೊಂದ ಬಾಲಕಿಯ ತಾಯಿಯ ವಿಧವಾ ವೇತನವನ್ನು ಬ್ಲಾಕ್ ಮಾಡುವುದಾಗಿ ಹೆದರಿಸಿದ್ದನಂತೆ. ಅದರಂತೆ ಸಂತ್ರಸ್ತೆ ತನ್ನ ತಮ್ಮನೊಂದಿಗೆ ಹೊಟೇಲ್‌ಗೆ ಹೋದಾಗ ಆಕೆಯ ಅಶ್ಲೀಲ ಭಾವಚಿತ್ರ ನೀಡುವಂತೆ ಕೇಳಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಆಕೆಯ ತಲೆಗೆ ಕೈಯಿಂದ ಹೊಡೆದಿದ್ದನಂತೆ. ತಮಗಾದ ಕಿರುಕುಳವನ್ನು ನೆಡೆದ ಘಟನೆಯನ್ನು ನೊಂದ ಬಾಲಕಿ ಹಾಗೂ ಆಕೆಯ ತಮ್ಮ ಮನೆಯವರಿಗೆ ತಿಳಿಸಿದ್ದು, ಅದರಂತೆ ಮನೆಯವರು ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆ ಸಮಯದ ಪೊಲೀಸ್ ಉಪನಿರೀಕ್ಷಕರಾಗಿದ್ದ ಸತೀಶ್ ಎಂ.ಪಿ. ಪ್ರಕರಣ ದಾಖಲಿಸಿಕೊಂಡು ಆಗಿನ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಆಗಿನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಖಡಕ್ ಪೋಲಿಸ್ ಅಧಿಕಾರಿ ನಿಶಾ ಜೇಮ್ಸ್‌ ಮಾರ್ಗದರ್ಶನದಲ್ಲಿ ಕೂಲಂಕಷವಾಗಿ ತನಿಖೆ ಮಾಡಿ ದೋಷಾ ರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 46 ಸಾಕ್ಷಿಗಳನ್ನು ನಮೂದಿಸಲಾಗಿದ್ದು, ಈ ಪೈಕಿ 26 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀನಿವಾಸ್ ಸುವರ್ಣ ಅವರು ಆರೋಪಿ ಲೈಂಗಿಕ ಹಲ್ಲೆ ನಡೆಸಿರುವುದು ಸಾಬೀತಾಗಿರುವು ದಾಗಿ ದೃಢಪಡಿಸಿ ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ, ಮತ್ತು ಪೋಕ್ಸೋ ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ ಮತ್ತು 4 ಸಾವಿರ ರೂ.ದಂಡ ಪಾವತಿಸಲು ಆದೇಶಿಸಿ ತೀರ್ಪು ನೀಡಿದ್ದಾರೆ.ಜೋತೆಗೆ ಸರಕಾರದಿಂದ ನೊಂದ ಬಾಲಕಿಗೆ 50 ಸಾವಿರ ರೂ.ಪರಿಹಾರ ನೀಡುವಂತೆ ನಿರ್ದೇಶಿಸಿ ಆದೇಶಿಸಿದರು.
ಆರೋಪಿಗೆ ಸಹಕರಿಸಿದ್ದಾರೆ ಎನ್ನಲಾದ 2ನೇ ಆರೋಪಿ ಪಂಚಾಯತ್ ಗ್ರಂಥಪಾಲಕಿಯ ವಿರುದ್ಧ ಮಾಡಲಾದ ದೋಷಾರೋಪಣೆ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಎರಡನೇ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ವೈ.ಟಿ.ರಾಘವೇಂದ್ರ ಅವರು ವಾದ ಮಂಡಿಸಿದ್ದರು.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!