ಖಾಲಿ ಮನೆಗಳ ಬಗ್ಗೆ ಮನೆಗಳ್ಳರಿಗೆ ಮಾಹಿತಿ ಕೊಟ್ಟು ಪೊಲೀಸ್ ಸಿಬಂದಿಯೇ ಕಳ್ಳತನ ಮಾಡಿಸುತ್ತಿದ್ದ ಕೃತ್ಯವನ್ನು ಜ್ಞಾನಭಾರತಿ ಪೊಲೀಸರು ಪತ್ತೆ ಮಾಡಿದ್ದು ಪ್ರಕರಣ ಸಂಬಂಧ ಪೊಲೀಸ್ ಪೇದೆ ಒಬ್ಬನನ್ನು ಬಂಧಿಸಿದ್ದಾರೆ.
ಕುಖ್ಯಾತ ಆರೋಪಿಗಳ ಜೊತೆಗೆ ಸೇರಿಕೊಂಡು ಮನೆಗಳ್ಳತನ ಮಾಡಿಸುತ್ತಿದ್ದ ಆರೋಪದಲ್ಲಿ ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಯಲ್ಲಪ್ಪ ತನ್ನ ಇಲಾಖೆಯ ಪೋಲಿಸರ ಸಿಕ್ಕಿಬಿದ್ದಿದ್ದಾನೆ. ಚಂದ್ರಾಲೇ ಔಟ್, ಚಿಕ್ಕಜಾಲ, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವಂತಹ ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಪೇದೆ ಯಲ್ಲಪ್ಪನ ಕೈವಾಡ ಇರುವುದು ಪತ್ತೆಯಾಗಿತ್ತು. ಖಾಲಿ ಮನೆಗಳು, ಒಂಟಿಯಾಗಿ ವಾಸವಿರುವ ವ್ಯಕ್ತಿಗಳ ಬಗ್ಗೆ ಮನೆ ಕಳ್ಳರಿಗೆ ಮಾಹಿತಿ ನೀಡಿ ಅವರಿಂದಲೇ ಕಳವು ಕೃತ್ಯ ಮಾಡಿಸುತ್ತಿದ್ದ ಪೊಲೀಸ್ ಪೇದೆ ಕಳವು ಮಾಡಿದ ವಸ್ತುನಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದನಂತೆ!?
ಇತ್ತೀಚೆಗಷ್ಟೇ ದೇವನಹಳ್ಳಿ
ಠಾಣೆಗೆ ವರ್ಗಾವಣೆಗೊಂಡಿದ್ದ ಪೇದೆ ಯಲ್ಲಪ್ಪನ ಬಗ್ಗೆ ಪೊಲೀಸ್ ತನಿಖೆಯಲ್ಲಿ ಅನುಮಾನ ಬಂದ ಹಿನ್ನಲೆಯಲ್ಲಿ ಜ್ಞಾನಭಾರತಿ ಪೋಲಿಸರು ಬಂಧಿಸಿದ್ದರು.
.
ಆನ್‌ಲೈನ್ ಗೆಮ್ ಚಟಕ್ಕೆ ಬಿದ್ದ ಪೋಲಿಸ್ ಸಾಲ ತೀರಿಸಲು ಮನೆಗಳ್ಳತನಕ್ಕೆ ಕೈ ಹಾಕಿದ!!
ಇದೊಂದು ರಕ್ಷಕನೆ ಭಕ್ಷಕನಾದ ಕತೆ. ದಿಢೀರ್ ಶ್ರೀಮಂತನಾಗುವ ಖಯಾಲಿಗೆ ಬಿದ್ದ ಪೋಲಿಸನೊಬ್ಬ ಹಣ ಗಳಿಸಲು ಹಣ ಗಳಿಸಲು ಕೈಹಾಕಿದ್ದು ಆನ್‌ಲೈನ್ ಗೇಮಿಗೆ! ಆನ್‌ಲೈನ್ ಗೆಮಿನ ಚಟಕ್ಕೆ ಬಿದ್ದ ಪೇದೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ತನ್ನ ಬಳಿ ಇದ್ದ ಸಾಕಷ್ಟು ಹಣವನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದ ಪೇದೆ ಮಾಡಿದ್ದ 20 ಲಕ್ಷ ರೂಪಾಯಿ ಸಾಲ ತೀರಿಸಲು ಮನೆಗಳ್ಳತನಕ್ಕೆ ಕೈಹಾಕಿ ತನ್ನದೆ ಇಲಾಖೆಯ ಪೋಲಿಸರ ಕೈಗೆ ಸಿಕ್ಕಿ ಕಂಬಿ ಏಣಿಸುತ್ತಿದ್ದಾನೆ!!
ತಮ್ಮದೆ ಇಲಾಖೆಯ ಪೇದೆಯೊಬ್ಬನ ಕಳ್ಳತನದ ಮಾಹಿತಿ ಕಲೆಹಾಕಿದ ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ಕಳ್ಳ ಪೇದೆಯನ್ನು ಬಂಧಿಸಿ ಜೈಲಿಗೆ ಬಿಟ್ಟು ಬಂದಿದ್ದಾರೆ
ಬೆಂಗಳೂರು ಇದೊಂದು ವಿಚಿತ್ರ ಎನಿಸಿದರೂ ಸತ್ಯ ರಕ್ಷಣೆ ಮಾಡಬೇಕಾದ ಪೋಲಿಸಪ್ಪನೆ ಮನೆ ಕಳ್ಳತನಮಾಡಿದ್ದಾನೆ ಎಂದರೆ ನಂಬಲು ಅಸಾಧ್ಯವೆ ಹೌದು?
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಯಲ್ಲಪ್ಪನೆ ( 30 ) ಕಳ್ಳತನಕ್ಕೆ ಕೈ ಹಾಕಿದ ಪೋಲಿಸ್ ಪೇದೆ ಬಂಧಿತ ಆರೋಪಿ. ಕಳ್ಳ ಪೋಲಿಸಪ್ಪನನ್ನು ಕೆಡವಿಕೊಂಡ ಜ್ಞಾನಭಾರತಿ ಠಾಣೆಯ ಪೋಲಿಸರು ಈತನಿಂದ 26 ಗ್ರಾಂ ಚಿನ್ನಾಭರಣ, 4 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದರೆ! ಅಕ್ಟೋಬರ್ 3ರಂದು ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದಂತಹ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಬೆನ್ನು ಬಿದ್ದ ಪೋಲಿಸರ ತಂಡ ಪಕ್ಕಾ ಮಾಹಿತಿ ಅಧಾರದ ಮೇಲೆ ಕಾರ್ಯಾಚರಣೆ ನಡೆಸಿ ಪೋಲಿಸ್ ಪೇದೆ ಯಲ್ಲಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನ್‌ಲೈನ್ ಗೇಮ್ಸ್ ನ ಚಟಕ್ಕೆ ಬಿದ್ದ ಪೇದೆ ತನ್ನಲ್ಲಿರುವ ಹಣವನ್ನು ಕಳೆದುಕೊಂಡು ನಂತರ ಚಟಬಿಡಲಾರದೆ ಸುಮಾರು 20 ಲಕ್ಷ ರೂಪಾಯಿ ಅವರಿವರಿಂದ ಸಾಲಮಾಡಿದ ಪೇದೆ ಯಲ್ಲಪ್ಪ ಆನ್‌ಲೈನ್ ಗೇಮಿಗೆ ಸುರಿದಿದ್ದಾನೆ!! ಚಟಕ್ಕೆ ಬಿದ್ದವನು ಸುಮಾರು 20 ರಿಂದ 25 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದನಂತೆ. ಬ್ಯಾಂಕ್ ಹಾಗೂ ಕೆಲವರಿಂದ ಸಾಲ ಪಡೆದು ಆನ್ಲೈನ್ ಗೇಮಿನಲ್ಲಿ ದುಡ್ಡು ಮಾಡಲು ಮುಂದಾದವನು ಸೋತು ಸಾಲಗಾನಾಗಿದ್ದ. ಹೀಗಾಗಿ ಸಾಲಗಾರರ ಕಾಟ ಕಿರುಕುಳ ಹೆಚ್ಚಾಗಿ ಸಾಲ ತೀರಿಸಲು ಅನ್ಯಮಾರ್ಗ ವಿಲ್ಲದೆ ಮನೆಗಳ್ಳತನಕ್ಕೆ ಇಳಿದಿದ್ದ ಎನ್ನುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಈ ಹಿಂದೆಯೂ ಒಮ್ಮೆ ಸಿಕ್ಕಿಬಿದ್ದಿದ್ದನಂತೆ! ಈತ ಬಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದವನು 2016ರಲ್ಲಿ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದ 2017ನೇ ಸಾಲಿನಲ್ಲಿ ಬನಶಂಕರಿ ಪೊಲೀಸ್ ಠಾಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ. ಕಳೆದ ಫೆಬ್ರವರಿಯಲ್ಲಿ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳ ಅಭಿ ಎಂಬಾತನ ಜೋತೆಗೆ ಸೇರಿಕೊಂಡು ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಭಿಯನ್ನು ಬಂಧಿಸಿದ್ದರು.ಅಭಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಾನ್ಸ್‌ಟೇಬಲ್ ಯಲ್ಲಪ್ಪನ ಬಂಡವಾಳ ಬಯಲಾಗಿತ್ತು ಕೂಡಲೇ ಯಲ್ಲಪ್ಪ ಜಾಮೀನು ಪಡೆದುಕೊಂಡಿದ್ದ. ಬಳಿಕ ಈತನನ್ನು ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು.
ಅಮಾನತು ರದ್ದತಿ ಬಳಿಕವೂ ಬದಲಾಗ ಬೇಕಾಗಿದ್ದ ಖದೀಮ ಪುಗಸ್ಸಟ್ಟೆ ಹಣಕ್ಕೆ ಮತ್ತೆ ಕೈಹಾಕಿದ
ಮತ್ತೆ ಕಳ್ಳತನ: ಕಳೆದ ಮೇ ತಿಂಗಳಲ್ಲಿ ಯಲ್ಲಪ್ಪನ ಅಮಾನತು ಆದೇಶ ಹಿಂಪಡೆದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅ.3ರಂದು ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲಿಸರಿಗೆ ಪೇದೆ ಯಲ್ಲಪ್ಪನೇ ಕಳ್ಳ ಎಂದು ಗೊತ್ತಾಗಿತ್ತು ಕೂಡಲೇ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಯಲ್ಲಪ್ಪ ಜ್ಞಾನಭಾರತಿ ಠಾಣೆ ಮಾತ್ರವಲ್ಲ, ಬೆಂಗಳೂರಿನ ಚಿಕ್ಕಜಾಲ ಮತ್ತು ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ತಲಾ ಒಂದು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಪವಿತ್ರ ಖಾಕಿ ತೊಟ್ಟು ರಕ್ಷಣೆ ಕೊಡಬೇಕಾದ ಪೋಲಿಸ್ ಪೇದೆಯೊಬ್ಬ ಮನೆಗಳ್ಳತನಕ್ಕೆ ಕೈ ಹಾಕಿ ಜೈಲು ಪಾಲಾಗಿದ್ದಾನೆ. ಇಂತಹ ಕೇಲವು ನೀಚರಿಂದ ಖಡಕ್ ಪೋಲಿಸ್ ತಲೆತಗ್ಗಿಸುವಂತಾಗಿದೆ
ಸುಧೀರ್ ವಿಧಾತ ,ಶಿವಮೊಗ್ಗ