ಶಿವಮೊಗ್ಗ : ಕೆಎಸ್ಆರ್ಪಿ ಪೊಲೀಸರಿಗೆ ಹೊಸ ಬ್ಲೂ ಕ್ಯಾಪ್ ವಿತರಣೆ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ದಿ: 20-11-2025 ರಂದು 8 ನೇ ಪಡೆ,ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮಾಚೇನಹಳ್ಳಿ, ಶಿವಮೊಗ್ಗ ಘಟಕದ 500 ಆರ್ಹೆಚ್ಸಿ ಹಾಗೂ ಆರ್ಪಿಸಿ ರವರಿಗೆ ಕೆಎಸ್ಆರ್ಪಿ ಕಮಾಂಡೆಂಟ್ ಆದ ಎಸ್.

ಯುವಕುಮಾರ್ರವರು ಹೊಸ ನೇವಿ ಬ್ಲೂ ಪೀಕ್ ಕ್ಯಾಪ್ನ್ನು ಎಲ್ಲಾ ಸಿಬ್ಬಂದಿಗಳಿಗೂ ವಿತರಿಸಿದರು. ಈ ಸಮಾರಂಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಎಸ್. ಚಂದ್ರಶೇಖರ್, ಹಾಗೂ ಸಹಾಯಕ ಕಮಾಂಡೆಂಟ್ ರಾಚಪ್ಪ ಬಿ. ಕಾಜಗಾರ, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

