ಶಿವಮೊಗ್ಗ :16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ,ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ.

ಅಪ್ರಾಪ್ತ ಬಾಲಕಿಯ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲಂ:PROTECTION OF CHILDREN FROM SEXUAL OFFENCES ACT 2012 U/s: 6 IPC 1860 U/s: 376(2)(n),366 ಅಡಿಯಲ್ಲಿ.....
news.ashwasurya. in
ಅಶ್ವಸೂರ್ಯ/ಶಿವಮೊಗ್ಗ : 2022 ನೇ ಸಾಲಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲಂ: PROTECTION OF CHILDREN FROM SEXUAL OFFENCES ACT 2012 U/s: 6 IPC 1860 U/s: 376(2)(n),366 ಅಡಿಯಲ್ಲಿ ಪ್ರಕರಣವು ದಾಖಲಾಗಿರುತ್ತು. ಅಂದಿನ
ತನಿಖಾಧಿಕಾರಿಗಳಾದ ರಾಘವೇಂದ್ರ ಕಾಂಡಿಕೆ ಸಿಪಿಐ ಭದ್ರಾವತಿ ನಗರ ವೃತ್ತ ರವರು ಸದರಿ ಪ್ರಕರಣದ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಶ್ರೀಧರ್ ಸರ್ಕಾರಿ ಅಭೀಯೋಜಕರವರು ವಾದ ಮಂಡಿಸಿರುತ್ತಾರೆ. ಘನ ನ್ಯಾಯಾಲಯದಲ್ಲಿ ಆರೋಪಿತನ ವಿರುದ್ಧ ಆರೋಪವು ಧೃಡಪಟ್ಟ ಹಿನ್ನೆಲೆಯಲ್ಲಿ ಘನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ FTSC 1 ಶಿವಮೊಗ್ಗ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ನಿಂಗನಗೌಡ ಪಾಟೀಲ್ ರವರು ಆರೋಪಿತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 65,000/- ರೂ ದಂಡ ಮತ್ತು ನೊಂದ ಬಾಲಕಿಗೆ ಸರ್ಕಾರದ ಪರವಾಗಿ 4,50,000/- ರೂ ಪರಿಹಾರ ನೀಡಬೇಕಾಗಿ ಆದೇಶಿಸಿರುತ್ತಾರೆ.

