ಬೆಂಗಳೂರು : ಡೇಟಿಂಗ್ ಆ್ಯಪ್ನಲ್ಲಿ ಸಿಗ್ತಾಳೆ.! ಪರಿಚಯ ಆಗ್ತಾಳೆ.!ವಿಡಿಯೋ ಹಾಲ್ನಲ್ಲಿ ಅದೇನು ಮೋಡಿ ಮಾಡ್ತಾಳೊ.! ಪುರುಷನ ಜೋತೆಗೆ ಲಾಡ್ಜ್ವರೆಗೂ ಬರ್ತಾಳೆ.!ಲೇಡಿಯ ಬೆನ್ನಿಗೆ ಬಿದ್ದ ಬೆಂಗಳೂರು ಪೊಲೀಸ್..!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಡೆಟೀಂಗ್ ಆ್ಯಪ್ ಮೇಲೆ ಕೈ ಇಡುವ ಮುನ್ನ ಎಚ್ಚರ ಇರಲಿ.? ಯುವತಿ ಡೇಟಿಂಗ್ ಆ್ಯಪ್ನಲ್ಲಿ ಪರಿಚಯ ಆಗ್ತಾಳೆ..ಕರೆದ ಕೂಡಲೇ ಲಾಡ್ಜ್ವರೆಗೂ ಬರ್ತಾಳೆ,ಬೆಳಗಾಗುವುದರೊಳಗೆ ಮಾಯ ಆಗ್ತಾಳೆ.! ಲಾಡ್ಜ್ ನಿಂದ ಮಾಯವಾದ ಡೆಟೀಂಗ್ ಲೇಡಿಯ ಬಂಧನಕ್ಕಾಗಿ ಪೊಲೀಸರು ಭಲೇ ಬಿಸಿದ್ದಾರೆ.ಪುರುಷನಿಗೆ ಯುವತಿಯ ಜೊತೆ ಲಾಡ್ಜ್ಗೆ ಹೋಗಿದ್ದು ಮಾತ್ರ ಗೊತ್ತು, ಬೆಳಗ್ಗೆ ಎದ್ದಾಗ ಅವನ ಬಳಿ ಇದ್ದ ಹಣ ಚಿನ್ನ ಯಾವೂದು ಇಲ್ಲ.! ಎಲ್ಲವನ್ನೂ ಡೆಟೀಂಗ್ ಲೇಡಿ ಕದ್ದು ಪರಾರಿಯಾಗಿದ್ದಾಳೆ.! ಈಗ ಲೇಡಿ ವಿರುದ್ದ ದೂರು ದಾಖಲಾಗಿದೆ.
ಡೇಟಿಂಗ್ ಲೇಡಿ ಆ್ಯಪ್ನಲ್ಲಿ ಪರಿಚಯ ಮಾಡಿಕೊಳ್ತಾಳೆ ನಂತರ ಪರಿಚಯವಾದ ಪುರುಷರನ್ನು ಕಾಫಿ ಶಾಪ್ಗೆ ಕರೆದು ಭೇಟಿಯಾಗುತ್ತಾಳೆ,ನನವರಂಗಿ ಮಾತನಾಡಿ ತನ್ನ ತೆಕ್ಕೆಗೆ ಕೆಡವಿಕೊಂಡು ನಿಧಾನವಾಗಿ ಲಾಡ್ಜ್ನಲ್ಲಿ ಒಂದು ರಾತ್ರಿಗೆ ರೇಡಿ ಎನ್ನುವ ಸಿಗ್ನಲ್ ಕೊಡುತ್ತಾಳಂತೆ.ಮೊದಲೇ ಬಕರಗಳು ಒಂದು ಕಡೆ ತೆವಲು,ಮತ್ತೊಂದು ಕಡೆ ಹುಡುಗಿ ಸಿಕ್ಕ ಖುಷಿ ಅವಳ ಜೋತೆಗೆ ಲಾಡ್ಜ್ ಹೋಗ್ತಾರೆ ಅದರೆ ಬೆಳಗ್ಗೆ ಎದ್ದು ನೋಡಿದಾಗ ಜೇಬಿನಲ್ಲಿದ್ದ ಹಣವು ಇಲ್ಲ.! ಮೈಮೇಲೆ ಇದ್ದ ಒಡವೆಯು ಇಲ್ಲ.! ಜೋತೆಗೆ ಬಂದು ರಾತ್ರಿ ಇದ್ದವಳು ಬೆಳಿಗ್ಗೆ ಇಲ್ಲ.! ಲಾಡ್ಜ್ಜೆ ಹೋಗಿದ್ದು ಮಾತ್ರ ನೆನಪು, ಮತ್ತೇನಾಗಿದೆ ಅನ್ನೋದು ಯಾರಿಗೂ ಗೊತ್ತೆ ಆಗೋಲ್ಲ. ಈಕೆಯ ಕಾಮದ ಸುಳಿಗೆ ಸಿಲುಕಿದ ಬೆಂಗಳೂರಿನ ಹಲವು ಯುವಕರನ್ನು ನೀಟಾಗಿ ವಂಚಿಸಿರುವ ಮಾಯಾಂಗನೆಯ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೊಡ್ಡ ದುರಂತವೆಂದರೆ ಈ ಡೆಟೀಂಗ್ ಆ್ಯಪ್ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು ಕೋಟಿ ಕೋಟಿ ರೂಪಾಯಿ ಕಳೆದುಕೊಂಡ ಪುರುಷರು ಸಾಕಷ್ಟು ಮಂದಿ ಇದ್ದಾರೆ.! ಇಂದಿರಾನಗರ, ಉತ್ತರ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದೆ.
ಆಕೆ ಜೋತೆಗಿದ್ದಾಗ ಎಣ್ಣೆಯು ಹೊಡಿಯುತ್ತಾಳೆ,ಜೋತೆಗಿದ್ದವರಿಗೆ ಸರಿಯಾಗಿ ನಶೆ ಏರಿಸುತ್ತಾಳೆ.!
ಪ್ರಕರಣದ ಹಿನ್ನೆಲೆ :
Happn app ಅನ್ನೋ ಡೇಟಿಂಗ್ ಆ್ಯಪ್ ಮೂಲಕ 2 ತಿಂಗಳ ಹಿಂದೆ ಯುವಕನೊಬ್ಬನಿಗೆ ಕವಿಪ್ರಿಯಾ ಅನ್ನೋ ಯುವತಿ ಪರಿಚಯವಾಗಿದ್ದಾಳೆ. ಡೇಟಿಂಗ್ ಆ್ಯಪ್ನಲ್ಲಿ ಪ್ರೀತಿಯಿಂದ ಮಾತನಾಡಿಸುುತ್ತಾ ಆತ್ಮೀಯವಾಗಿದ್ದಾಳೆ. ಯುವಕ ತನ್ನ ಜಾಲಕ್ಕೆ ಬಿದ್ದಿರುವುದು ಖಚಿತವಾಗುತ್ತಿದ್ದಂತೆ, ಇಂದಿರಾನಗರ ರೆಸ್ಟೋರೆಂಟ್ನಲ್ಲಿ ಭೇಟಿಯಾಗುವ ಪ್ರಸ್ತಾವನೆ ಮುಂದಿಟ್ಟಿದ್ದಾಳೆ. ಸಿಕ್ಕಿದ್ದೇ ಚಾನ್ಸ್ ಎಂದ ಯುವಕ ಜೋಲ್ಲು ಸುರುಸಿಕೊಂಡು ಒಕೆ ಎಂದಿದ್ದಾನೆ. ಇಂದಿರಾನಗರ ರೆಸ್ಟೋರೆಂಟ್ನಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಆ್ಯಪ್ನಲ್ಲೇ ಆತ್ಮೀಯವಾಗಿದ್ದ ಕಾರಣ ಇನ್ನೇನಿದೆ ಹೇಳೊಕೆ ಸಾಕಷ್ಟು ಚರ್ಚೆಗಳು ಅಲ್ಲೆ ಮುಗಿದಿದೆ. ರೆಸ್ಟೋರೆಂಟ್ನಲ್ಲಿ ಇಬ್ಬರು ಮದ್ಯಪಾನ ಮಾಡಿದ್ದಾರೆ. ಯುವಕ ಒಂದೊಂದೆ ಗುಟುಕು ಹೀರುವಾಗಲೂ ಖುಷಿಯಿಂದ ಹಿಗ್ಗಿದ್ದಾನೆ.
ಒಂದು ರಾತ್ರಿಗೆ ಲಾಡ್ಜ್ ಬುಕ್
ರೆಸ್ಟೋರೆಂಟ್ನಲ್ಲಿ ಎಣ್ಣೆ ಪಾರ್ಟಿ ಬಳಿಕ ಕುಡಿದು ಮನೆಗೆ ಹೋಗುವುದಕ್ಕಿಂತ ಇಲ್ಲೇ ಲಾಡ್ಜ್ ಮಾಡೋಣ, ನಾಳೆ ಹೋಗೋಣ ಎಂದಿದ್ದಾಳೆ.ಯುವಕ ತುಪ್ಪಜಾರಿ ಬಾಯಿಗೆ ಬಿದ್ದಷ್ಟೆ ಖುಷಿಯಾಗಿದ್ದಾನೆ.! ಹಿಂದು ಮುಂದು ನೋಡದೆ ಯುವಕ ಒಕೆ ಎಂದು ರಾತ್ರಿಯ ಹತ್ತು ಹಲವು ಕನಸುಗಳೊಂದಿಗೆ ಆಕೆಯ ಜೊತೆ ಲಾಡ್ಜ್ಗೆ ತೆರಳಿದ್ದಾನೆ.ನಂತರ ಅವಳೆ ಆನ್ಲೈನ್ ಮೂಲಕ ಊಟವನ್ನೂ ಆರ್ಡರ್ ಮಾಡಿದ್ದಾಳೆ. ಊಟ ಮಾಡಿದ ಬಳಿಕ ನೀರು ಕೂಡ ಅವಳೆ ಕೊಟ್ಟಿದ್ದಾಳೆ. ಅಷ್ಟೆ ನೋಡಿ, ನೀರು ಕುಡಿದ ಯುವಕನ ಪ್ರಜ್ಞೆ ತಪ್ಪಿದೆ ಆತ ಕಂಡ ಕನಸುಗಳು ನಿದ್ರೆಯಲ್ಲೆ ಮುಗಿದಿದೆ.! ಇತ್ತ ಮೊದಲ ಭೇಟಿಯಲ್ಲಿ ಇಂಪ್ರೆಸ್ ಮಾಡಲು ತನ್ನಲ್ಲಿರುವ ಎಲ್ಲಾ ಚಿನ್ನ ಅಂದರೆ ಚೈನ್, ಕೈಯಲ್ಲಿ ಬ್ರಾಸ್ಲೆಟ್, ಒಂದಿಷ್ಟು ಹಣ ಎಲ್ಲವನ್ನೂ ಹಿಡಿದು ರೆಸ್ಟೋರೆಂಟ್ನಲ್ಲಿ ಹೋಗಿದ್ದ ಅವಳ ಮುಂದೆ ಶೋ ಕೊಡಲು… ಬೆಳಗ್ಗೆ ಎದ್ದು ನೋಡಿದಾಗ ತಾನು ಲಾಡ್ಜ್ನಲ್ಲಿದ್ದರೆ ಜೋತೆಗೆ ಬಂದಿದ್ದ ಡೆಟೀಂಗ್ ಲೇಡಿ ಎಸ್ಕೇಪ್ ಆಗಿದ್ದಳು ಸಾಲದ್ದಕ್ಕೆ ತನ್ನ ಚಿನ್ನಾಭರಣ, ನಗದು ಸೇರಿದಂತೆ ಎಲ್ಲವೂ ನಾಪತ್ತೆಯಾಗಿತ್ತು.!ಸುಮಾರು 6.89 ಲಕ್ಷರೂಪಾಯಿ ಮೌಲ್ಯದ ಚಿನ್ನಾಭರಣ, ದುಬಾರಿ ಹೆಡ್ಸೆಡ್, 10 ಸಾವಿರ ರೂಪಾಯಿ ನಗದು ಎಗರಿಸಿ ಕವಿಪ್ರಿಯಾ ಪರಾರಿಯಾಗಿದ್ದಾಳೆ. ಈ ಘಟನೆ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾನೆ.
1.29 ಕೋಟಿ ರೂಪಾಯಿ ವಂಚನೆ.!
ಮತ್ತೊಂದು ಡೇಟಿಂಗ್ ಆ್ಯಪ್ನಲ್ಲಿ ಯುವತಿಯಿಂದ 1.29 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದೆ. ವೃದ್ದಾಶ್ರಮ, ಹೂಡಿಕೆ ಹೆಸರಲ್ಲಿ ಬೆಂಗಳೂರಿನ ವ್ಯಕ್ತಿಗೆ ವಂಚನೆ ಮಾಡಲಾಗಿದೆ. QUACK QUACK APP ಮೂಲಕ ವ್ಯಕ್ತಿಯೊಬ್ಬರಿಗೆ ಯುವತಿ ಪರಿಚಯವಾಗಿದ್ದಾಳೆ. ಸಲುಗೆ, ಮಾತುಕತೆ ಬೆಳೆದಿದೆ. ಮೇಘನಾ ರೆಡ್ಡಿ ಎಂದು ಯುವತಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಇವರ ಚಾಟಿಂಗ್ ಟೆಲಿಗ್ರಾಂ ಆ್ಯಪ್ ಮೂಲಕ ಬೆಳೆದಿದೆ. ಇದೇ ವೇಳೆ ಯುವಕನ ಸೆಂಟಿಮೆಂಟ್, ಆತನ ಹಿನ್ನಲೆ, ಕುಟುಂಬ ಎಲ್ಲವನ್ನೂ ತಿಳಿದುಕೊಂಡಿದ್ದಾಳೆ. ಬಳಿಕ ನಿಮ್ಮ ತಂದೆಯ ಹೆಸರಿನಲ್ಲಿ ವದ್ಧಾಶ್ರಮ ಕಟ್ಟಿಸುವುದಾಗಿ ಯುವಕನಿಗೆ ಹೇಳಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಸಾಕು, ಅದರ ಲಾಭದಿಂದ ವೃದ್ಧಾಶ್ರಮ ಕಟ್ಟಿಸುವುದಾಗಿ ಯುವತಿ ಹೇಳಿದ್ದಾಳೆ.ಯುವತಿಯ ಮಾತು ನಂಬಿದ ಯುವಕ ಹಣ ಹೂಡಿಕೆ ಮಾಡಿದ್ದಾನೆ. ವೆಬ್ ಸೈಟ್ ಒಂದರ ಮೂಲಕ ಹಣ ಪಾವತಿ ಮಾಡಿದ್ದಾನೆ. ಹಂತಹಂತವಾಗಿ ಬರೋಬ್ಬರಿ 1.29 ಕೋಟಿ ರೂಪಾಯಿ ಹೂಡಿಕೆ ಮಾಡಿಸಿದ್ದಾಳೆ. ಆದರೆ ಮೇಘನಾ ರೆಡ್ಡಿ ಹೂಡಿಕೆ ಮಾಡಿದ ಹಣ, ಲಾಭ ಯಾವುದು ನೀಡದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಉತ್ತರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


