ಶಿವಮೊಗ್ಗ : ನೆಹರೂ ರಸ್ತೆ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ನೆಹರು ರಸ್ತೆಯ ವರ್ತಕರ ಸಭೆ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ನ,12 ರಂದು ಶಿವಮೊಗ್ಗ ನಗರದ ಶುಭಂ ಹೋಟೆಲ್ ಹಾಲ್ ನಲ್ಲಿ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರ ನೇತೃತ್ವದಲ್ಲಿ, ನೆಹರೂ ರಸ್ತೆ ಸುಗಮ ಸಂಚಾರ ವ್ಯವಸ್ಥೆ ಗೆ ಸಂಬಂಧಿಸಿದಂತೆ ನೆಹರು ರಸ್ತೆಯ ವರ್ತಕರ ಸಭೆಯನ್ನು ಹಮ್ಮಿಕೊಂಡಿರುತ್ತದೆ. ಸದರಿ ಸಭೆಯಲ್ಲಿ ಹಾಜರಿದ್ದವರ ಕುರಿತು ಮಾನ್ಯ ಪೊಲೀಸ್ ಅಧೀಕ್ಷಕರು, ಈ ಕೆಳಕಂಡಂತೆ ಮಾತನಾಡಿರುತ್ತಾರೆ.

1) ಹಳೆಯ ಶಿವಮೊಗ್ಗ ಭಾಗಕ್ಕೆ ಗಾಂಧಿಬಜಾರ್ ಯಾವ ರೀತಿ ಪ್ರಮುಖವಾದ ರಸ್ತೆಯಾಗಿರುತ್ತದೆಯೋ ಅದೇ ರೀತಿ ಹೊಸ ಶಿವಮೊಗ್ಗ ಭಾಗಕ್ಕೆ ನೆಹರೂ ರಸ್ತೆಯು ಪ್ರಮುಖವಾದ ರಸ್ತೆಯಾಗಿರುತ್ತದೆ. ಇದರ ಜೊತೆಗೆ ನೆಹರೂ ರಸ್ತೆಯು ಹಲವು ರಸ್ತೆಗಳಿಗೆ ಪ್ರವೇಶ ಬಿಂದು / ಸಂಧಿಸುವ ರಸ್ತೆಯಾಗಿರುತ್ತದೆ. ಹೆಚ್ಚಿನ ಅಂಗಡಿ ಮುಂಗಟ್ಟುಗಳು ಇರುವ ಕಾರಣದಿಂದ ಸದರಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಸರ್ವೇ ಸಾಮಾನ್ಯವಾಗಿರುತ್ತದೆ
2) ಈ ಹಿಂದಿನಿಂದಲೂ ಗಾಂಧಿ ಬಜಾರ್ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯ ಸಮಸ್ಯೆಯು ಹೆಚ್ಚಿದ್ದು, ಸಾರ್ವಜನಿಕರ ಹಿತ ದೃಷ್ಟಿಯಿಂದ ಹಾಗೂ ಸಂಚಾರದ ಹಿತ ದೃಷ್ಟಿಯಿಂದ ಕೈಗೊಂಡ ಸುಧಾರಣಾ ಕ್ರಮಗಳಿಂದ ಈ ದಿನ ಸಮಸ್ಯೆಗೆ ಪರಿಹಾರ ದೊರಕಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಇರಿಸಿದಂತಹ ನಂಬಿಕೆಯನ್ನು ಉಳಿಸಿಕೊಂಡಿರುತ್ತೇವೆ. ಪೊಲೀಸ್ ಇಲಾಖೆಗೆ ಸಹಕರಿಸಿದ ಎಲ್ಲಾ ನಾಗರೀಕರಿಗೆ ಧನ್ಯವಾದಗಳು.

3) ಯಾವುದೇ ಸಮಸ್ಯೆಗಳು ಕಂಡುಬಂದಾಗ ನಾಗರೀಕರು ಕೂಡಲೇ ಸಂಬಂಧಪಟ್ಟಂತಹ ಇಲಾಖೆಯ ಗಮನಕ್ಕೆ ಸದರಿ ವಿಚಾರಗಳನ್ನು ತಂದಾಗ ಸಮಸ್ಯೆಗೆ ಸೂಕ್ತ ಕಾಲದಲ್ಲಿ, ಸೂಕ್ತ ರೀತಿಯಲ್ಲಿ ಪರಿಹಾರ ದೊರಕಿದಂತಾಗುತ್ತದೆ.
4) ನೆಹರೂ ರಸ್ತೆಗೆ ಹೊಂದಿಕೊಂಡಂತೆ ಹಾಗೂ ನೆಹರೂ ರಸ್ತೆಗೆ ಹತ್ತಿರವಾಗಿ ಸುಮಾರು 21 ಕನ್ಸರ್ ವೆನ್ಸಿ ರಸ್ತೆಗಳಿರುತ್ತವೆ. ಮಹಾ ನಗರ ಪಾಲಿಕೆಯ ವತಿಯಿಂದ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದು, ಸದರಿ ರಸ್ತೆಗಳಲ್ಲಿ ಉಚಿತವಾಗಿ ಪಾರ್ಕಿಂಗ್ ಮಾಡಬಹುದು ಎಂದು ಆದೇಶವನ್ನು ಸಹಾ ಮಾಡಿಕೊಟ್ಟಿರುತ್ತಾರೆ.

5) ಸದರಿ ಕನ್ಸರ್ ವೆನ್ಸಿ ರಸ್ತೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿದಾಗ ಮಾತ್ರವೇ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುತ್ತದೆ. ಈಗಾಗಲೇ 09 ಕನ್ಸರ್ ವೆನ್ಸಿ ರಸ್ತೆಗಳನ್ನು ಈ ಹತ್ತಿರದ ಆಸ್ಪತ್ರೆಗಳಿಗೆ ಬರುವ ವಾಹನಗಳಿಗೆ ಬಳಕೆ ಮಾಡಲು ಸೂಚನೆ ನೀಡಿದ್ದು, ಈ ಕ್ರಮದಿಂದ 40 ರಿಂದ 50 ಪ್ರತಿಶತ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾದ್ಯವಿರುತ್ತದೆ ಹಾಗೂ ಕನ್ಸರ್ ವೆನ್ಸಿ ಗಳ ಸಮರ್ಪಕ ಬಳಕೆಯಿಂದ ಮಾತ್ರವೇ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗುತ್ತದೆ.
6) ರಸ್ತೆಗಳಲ್ಲಿ ತಮ್ಮ ಅಂಗಡಿ ಮುಂಗಟ್ಟುಗಳ ಪ್ರವೇಶದಲ್ಲಿ, ಕಬ್ಬಿಣದ ಜಾಲರಿ ಫುಟ್ ಬೋರ್ಡ್ ಗಳನ್ನು ಹಾಕಲಾಗಿದ್ದು, ರಸ್ತೆಯು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿದ್ದು, ರಸ್ತೆಗೆ ಅಡ್ಡಲಾಗಿ ಈ ರೀತಿ ಫುಟ್ ಬೋರ್ಡ್ ಗಳನ್ನು ಹಾಕಿ ಯಾರೂ ಸಂಚಾರಕ್ಕೆ ಅಡಚಣೆ ಮಾಡಬಾರದು.
7) ನೆಹರೂ ರಸ್ತೆಯಲ್ಲಿ ಅಂದಾಜು 140 ಅಂಗಡಿಗಳಿದ್ದು, ಎಲ್ಲಾ ಅಂಗಡಿಯವರು ತಮ್ಮ ವಾಹನಗಳನ್ನು ತಂದು ಪಾರ್ಕಿಂಗ್ ಮಾಡಿದರೂ ಸಹಾ ನೂರಾರು ವಾಹನಗಳಾಗುತ್ತವೆ. ಆದ್ದರಿಂದ ನೀವುಗಳು ಸೋಮವಾರದಿಂದ ನಿಮ್ಮ ವಾಹನಗಳನ್ನು ಹತ್ತಿರದ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ಮಾಡಿರಿ. ಇದರಿಂದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯ.
8) ನಗರ ಪಾಲಿಕೆಯ ವತಿಯಿಂದ ಅಗತ್ಯ ಲೈಟಿಂಗಸ್ಸ್ ಮತ್ತು ಸಿಸಿ ಟಿವಿ ಅಳವಡಿಕೆ ಮಾಡಿಕೊಡುತ್ತಾರೆ. ಹಾಗೆಯೇ ನೀವು ಸಹಾ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಂಡರೂ ಸಹಾ ಇನ್ನು ಉತ್ತಮವಾಗಿ ಅಂಗಡಿಗಳ ಮುಂದೆ ಮಾರ್ಕಿಂಗ್ ಮಾಡಲಾಗುತ್ತದೆ. ಪೊಲೀಸ್ ಇಲಾಖೆ / ನಗರ ಪಾಲಿಕೆಯ ಸಹಯೋಗದೊಂದಿಗೆ ಈ ಮಾರ್ಕಿಂಗ್ ಕೆಲಸ ಮಾಡಿಕೊಡಲಾಗುತ್ತದೆ
9) ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ತಮ್ಮ ತಮ್ಮ ಅಂಗಡಿಗಳ ಮುಂದೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿರಿ. ಇದರಿಂದ ಅಪರಾಧಗಳು ಜರುಗಿದಾಗ ಶೀಘ್ರವಾಗಿ ಪತ್ತೆ ಮಾಡಲು ಮತ್ತು ಅಪರಾಧ ಕೃತ್ಯಗಳು ನಡೆಯದಂತೆ ತಡೆಯಲು ಇದರಿಂದ ಸಾಧ್ಯವಿರುತ್ತದೆ.

10) 8277983204 ಇದು ಶಿವಮೊಗ್ಗ ನಗರದ ಟ್ರಾಫಿಕ್ ಹೆಲ್ಪ್ ಲೈನ್ ನಂಬರ್ ಆಗಿದ್ದು, ಯಾವುದೇ ರೀತಿಯ ಸಂಚಾರ ಸಮಸ್ಯೆಗಳಿಗೆ ನೀವು ಸಂಪರ್ಕಿಸಬಹುದು ಹಾಗೆಯೇ ಯಾರಾದರೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿ ಪಾರ್ಕಿಂಗ್ ಮಾಡಿದ್ದರೂ ಸಹಾ ನೀವು ಈ ನಂಬರ್ ಗೆ ಫೋಟೋ ವನ್ನು ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ.
11) ನೆಹರೂ ರಸ್ತೆಯಲ್ಲಿ ಅಸಂಬದ್ಧ ಪಾರ್ಕಿಂಗ್, ಡಬ್ಬಲ್ ಪಾರ್ಕಿಂಗ್, ರಸ್ತೆಗೆ ಅಡಚಣೆಯಾಗಿ ನಿಲ್ಲಿಸಿದ್ದರೆ, ಅಂತಹವರ ವಿರುದ್ಧ ನೋ ಪಾರ್ಕಿಂಗ್ ವಿಧಿಸುವುದರ ಜೊತೆಗೆ, ವ್ಹೀಲ್ ಲಾಕ ಕೂಡ ಮಾಡಲಾಗುತ್ತದೆ. ಶಿವಮೊಗ್ಗ ನಗರದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಸಹಾ ಇದ್ದು, ಬಳಕೆ ಮಾಡಿಕೊಳ್ಳಿ.
ಸಭೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ,ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಗೂ ನೆಹರೂ ರಸ್ತೆಯ ವರ್ತಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು


