
ತಮಿಳುನಾಡು : ಸಲಿಂಗ ಕಾಮದ ದಾಹಕ್ಕೆ 5 ತಿಂಗಳ ಮಗು ಬಲಿ.!
news.ashwasurya.in
ಅಶ್ವಸೂರ್ಯ/ತಮಿಳುನಾಡು : ವಿಚಿತ್ರವಾದರು ಸತ್ಯ.! ಮಹಿಳೆ ಮತ್ತು ಯುವತಿಯೊಬ್ಬಳ ಸಲಿಂಗ ಕಾಮದ ತೀರದ ದಾಹಕ್ಕೆ ಐದು ತಿಂಗಳ ಮುದ್ದಾದ ಮಗು ಬಲಿಯಾಗಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ.
ಭಾರತಿ ಎಂಬ ವಿವಾಹಿತ ಮಹಿಳೆಯ ಜೊತೆಗೆ ಸುಮಿತ್ರಾ ಎಂಬ ಯುವತಿ ಇಬ್ಬರು ಸಲಿಂಗ ಕಾಮದ ಸುಳಿಗೆ ಸಿಲುಕಿದ್ದರು. ಸುರೇಶ್ ಮತ್ತು ಮಹಿಳೆ ಭಾರತಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗು ಕೂಡ ಇತ್ತು.ಇವರಿದ್ದ ಏರಿಯಾದಲ್ಲೆ ಸುಮಿತ್ರಾ ಎಂಬಾ ಯುವತಿ ಕೂಡ ಇದ್ದಳು, ಇಕೆಯ ಜೊತೆಗೆ ಭಾರತಿ ಸ್ನೇಹ ಬೆಳೆಸಿಕೊಂಡಿದ್ದಳು. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿ ಇಬ್ಬರು ಒಬ್ಬೊರನೊಬ್ಬರು ಬಿಟ್ಟಿರಲಾರದಷ್ಟರ ಮಟ್ಟಿಗೆ ಇದ್ದರಂತೆ.! ಪತಿ ಇಲ್ಲದೆ ಇದ್ದಾಗ ಭಾರತಿ ಮನೆಯಲ್ಲಿ ಇಬ್ಬರು ಸೇರಿಕೊಳ್ಳುತ್ತಿದ್ದರಂತೆ.! ಕಳೆದ ನಾಲ್ಕು ವರ್ಷಗಳಿಂದ ಭಾರತಿ-ಸುಮಿತ್ರಾ ಸಲಿಂಗ ಕಾಮಿಗಳಾಗಿದ್ದರು ಎನ್ನುವ ವಿಷಯ ಬಯಲಾಗಿದೆ.! ಇಬ್ಬರು ಮಾತನಾಡಿಕೊಳ್ಳೋಕೆ ಬೇರೆ ಮೊಬೈಲ್ ಕೂಡ ಇಟ್ಟುಕೊಂಡಿದ್ದರಂತೆ.! ಇಬ್ಬರು ಅಶ್ಲೀಲವಾಗಿ ವಿಡಿಯೋ ಮತ್ತು ಫೋಟೊ ತೆಗೆದುಕೊಳ್ಳುವುದು ಮತ್ತು ಒಬ್ಬರಿಗೊಬ್ಬರು ಹಂಚಿಕೊಳ್ಳುವುದು ಮ ಮಾಡುತ್ತಿದ್ದರಂತೆ.! ಭಾರತಿ ಎದೆಯ ಮೇಲೆ ‘ಸುಮಿ’ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಳಂತೆ. ಅಲ್ಲದೇ ಇಬ್ಬರೂ ಫೋಟೋಗಳನ್ನ ಹಾಕಿ ರೀಲ್ಸ್ ವಿಡಿಯೋ ಕೂಡ ಮಾಡಿದ್ದರಂತೆ.
ಕಳೆದ ಐದು ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ಆದಾಗಿನಿಂದ ಭಾರತಿ ತನ್ನನ್ನ ಅವೈಡ್ ಮಾಡುತ್ತಿದ್ದಾಳೆ ಎಂದು ಸುಮಿತ್ರಾ ಅಂದುಕೊಂಡಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಮಗುವಿನಿಂದಲೇ ಈ ಗಲಾಟೆ ಆಗುತ್ತಿದೆ ಎಂದು ಮಗುವನ್ನ ಕೊಲೆ ಮಾಡುವಂತೆ ಸುಮಿತ್ರಾ ಭಾರತಿಗೆ ಹೇಳಿದ್ದಳಂತೆ. ಅದರಂತೆ ಭಾರತಿ ತನ್ನ ಮಗುವನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಹಾಲು ಕುಡಿಯುವಾಗ ನೆತ್ತಿಗೇರಿ ಸಾವನ್ನಪ್ಪಿದೆ ಎಂದು ಕಥೆ ಕಟ್ಟಿದ್ದಾಳೆ.! ಇದನ್ನೇ ನಿಜ ಎಂದು ತಿಳಿದ ಕುಟುಂಬಸ್ಥರು ಮಗುವಿನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು.

ಇದಾದ ಬಳಿಕ ಭಾರತಿ ಪತಿ ಸುರೇಶ್ಗೆ ಮನೆಯಲ್ಲಿ ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಮೊಬೈಲ್ ಸಿಕ್ಕಿದೆ. ಅದರಲ್ಲಿ ಇಬ್ಬರ ಸಲಿಂಗ ಕಾಮದ ವಿಷಯ ಮತ್ತು ಮಗುವಿನ ಕೊಲೆ ರಹಸ್ಯ ಬಯಲಾಗಿದೆ. ಸತ್ಯಾಂಶ ತಿಳಿದ ಸುರೇಶ್ ಪೋಲಿಸರಿಗೆ ದೂರು ಕೊಡೋವುದಾಗಿ ಹೇಳಿ ಹೋಗಿದ್ದ. ಈ ವೇಳೆ ಸುರೇಶ್ಗೆ ಫೋನ್ ಮಾಡಿ ಭಾರತಿ ಮಗುವನ್ನ ನಾನೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಳಂತೆ. ಆಡಿಯೋ, ವೀಡಿಯೋ, ಫೋಟೋಗಳ ಸಮೇತವಾಗಿ ಪೊಲೀಸರಿಗೆ ಸುರೇಶ್ ದೂರು ನೀಡಿದ್ದಾರೆ. ಘಟನೆ ಸಂಬಂಧ ಕೆಳಮಂಗಲಂ ಪೊಲೀಸ್ ಠಾಣೆಯಲ್ಲಿ ಭಾರತಿ ಮತ್ತು ಸುಮಿತ್ರಾ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಳಮಂಗಲಂ ತಹಶೀಲ್ದಾರ್ ಗಂಗೈರವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಿದ್ದ ಗುಂಡಿಯಿಂದ ಮಗುವಿನ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸದ್ಯ ಇಬ್ಬರು ಸಲಿಂಗ ಕಾಮಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


