
ಬೆಂಗಳೂರು : ಒಟ್ಟಿಗೆ ಎಣ್ಣೆ ಹೊಡೆದು ಜೋತೆಗಿದ್ದ ಸ್ನೇಹಿತನಿಗೆ ಬೀರ್ ಬಾಟಲಿ ಒಡೆದು ತಿವಿದರು.! ಎಣ್ಣೆ ಏಟಿಗೆ ಸ್ನೇಹಿತ ಬಲಿ.!

news.ashwasurya.in
ಅಶ್ವಸೂರ್ಯ/ಶಿವಮೊಗ್ಗ :ಒಟ್ಟಿಗೆ ಎಣ್ಣೆ ಹೋಡೆದು ಎಣ್ಣೆಯ ನಶೆಯಲ್ಲಿ ಜೋತೆಗಿದ್ದ ಸ್ನೇಹಿತನನ್ನು ಸ್ನೇಹಿತರೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.! ನಶೆ ಇಳಿದ ಮೇಲೆ ಆರೋಪಿಗಳ ಮಾತು ಕೇಳಿ ಪೊಲೀಸ್ ಒಮ್ಮೆ ಶಾಕ್ ಆಗಿದ್ದಾರೆ.?
ಫೋಟೋದಲ್ಲಿರುವ ವ್ಯಕ್ತಿಯ ಹೆಸರು ಸುರೇಶ್, ಈತನೇ ಸ್ನೇಹಿತರಿಂದ ಕೊಲೆಯಾಗಿ ಹೋದ ಯುವಕ.! ಈ ಹತ್ಯೆ ಮಾಡಿದವರು ಈತನ ಪರಮಾಪ್ತಾ ಗೆಳೆಯರಾದ ವೇಲು, ನೇತಾಜಿ, ಪ್ರತಾಪ್ ಎನ್ನುವವರು, ಇನ್ನು ಈ ಪ್ರಕರಣ ನಡೆದಿರೋದು ಬನಶಂಕರಿಯ ಕೆ.ಆರ್ ರೋಡಲ್ಲಿ.
ಕೊಲೆಯಾದ ಸುರೇಶ್ ಕೂಲಿ ಕೆಲಸ ಮಾಡಿದ್ರೆ. ಆರೋಪಿಗಳು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಮೊನ್ನೆ ರಾತ್ರಿ ಕೆಲಸ ಮುಗಿಸಿದ ಬಳಿಕ ನಾಲ್ವರು ಕೆ.ಆರ್ ರೋಡಲ್ಲಿರುವ ಎಂಆರ್ಪಿ ವೈನ್ ಶಾಪ್ಗೆ ಹೋಗಿದ್ದಾರೆ. ಅಲ್ಲಿ ಎಣ್ಣೆ ಪಾರ್ಸೆಲ್ ತಗೊಂಡ ಮಿತ್ರರು ಸೀದಾ ಆಟೋದಲ್ಲಿ ಕೂತ್ಕೊಂಡು ಕುಡಿದಿದ್ದಾರೆ. ಆದ್ರೆ ಯಾಕೋ ಎಣ್ಣೆ ಸಾಕಾಗಿಲ್ಲ ಮತ್ತೆ ಆಟೋ ಸ್ಟಾರ್ಟ್ ಮಾಡ್ಕೊಂಡು ಬಾರ್ ಇರೋ ಕಡೆಯಲ್ಲಿ ಮತ್ತೊಮ್ಮೆ ಎಣ್ಣೆ ತಗೊಂಡಿದ್ದಾರೆ.ಎಲ್ಲರೂ ಸೇರಿ ಕುಡಿದಿದ್ದಾರೆ ಎಣ್ಣೆ ಜಾಸ್ತಿ ಆಗುತ್ತಿದ್ದಂತೆ ಸುರೇಶ್ ಹಾಗೂ ವೇಲು ನಡುವೆ
ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪಗೊಂಡ ವೇಲು ಬಿಯರ್ ಬಾಟೆಲ್ ಒಡೆದು ಸುರೇಶ್ ಕುತ್ತಿಗೆಗೆ ಬಲವಾಗಿ ತಿವಿದಿದ್ದಾನೆ.
ಇತ್ತ ಸುರೇಶ್ ಕುತ್ತಿಗೆಗೆ ಬಿಯರ್ ಬಾಟಲ್ ತಿವಿದಿದ್ದಂತೆ ತೀವ್ರ ರಕ್ತಸ್ರಾವ ಆಗಿದೆ. ಆಗ ಅಲ್ಲಿಯೇ ಇದ್ದ ವೇಲುನ ಇಬ್ಬರು ಸಹಚರರಾದ ನೇತಾಜಿ ಹಾಗೂ ಪ್ರತಾಪ್ ಅವರು ಕೂಡ ಕೈಲಿದ್ದ ಬಾಟೆಲ್ ಒಡೆದು ಅವರು ಸಹ ಸುರೇಶನಿಗೆ ಮನಸ್ಸೊ ಇಚ್ಚೆ ತಿವಿದುಬಿಟ್ಟಿದ್ದಾರೆ. ಸುರೇಶ್ ಕೂಗಲು ಶುರು ಮಾಡಿದಾಗ ಭಯಭೀತರಾಗಿದ್ದ ಹಂತಕರು ಸುರೇಶನನ್ನು ಅವರದ್ದೇ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಲು ನೋಡಿದ್ದಾರೆ ಅದರೆ ಅಷ್ಟೋತ್ತಿಗೆ ಸುರೇಶ್ ಸಾವನ್ನಪ್ಪಿದ್ದಾನೆ. ಬಳಿಕ ಶವವನ್ನು ಆಟೋದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದು,
ಹತ್ಯೆಯಾದ ಸುರೇಶ್.

ಸುದ್ದಿ ತಿಳಿಯುತ್ತಿದ್ದಂತೆ ಹತ್ಯೆ ನೆಡೆದ ಸ್ಥಳಕ್ಕೆ ಆಗಮಿಸಿದ ಬನಶಂಕರಿ ಠಾಣಾ ಪೊಲೀಸರ ತಂಡ ಸ್ಥಳ ಪರಿಶೀಲಿಸಿ ಬಳಿಕ ಮಾಹಿತಿ ಕಲೆಹಾಕಿ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಟೋ ನಂಬರ್, ಲೊಕೇಶನ್ ಆಧರಿಸಿ ಆರೋಪಿಗಳ ಪತ್ತೆ ಮಾಡಿದ್ದಾರೆ. ಇನ್ನು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಲು ಹೋದಾಗ ನಿಜವಾಗಿಯೂ ನಮಗೆ ಗೊತ್ತಾಗಿಲ್ಲ,ಎಣ್ಣೆಯ ನಶೆಯಲ್ಲಿ ಕೊಲೆ ಮಾಡಿದ್ದೀವಿ, ನಮ್ಮ ಸ್ನೇಹಿತ ನಿಜವಾಗಿಯೂ ಸತ್ತು ಹೋಗಿದ್ದಾನಾ.? ಅಂತಾ ಪೊಲೀಸರನ್ನೇ ಪ್ರಶ್ನೆ ಮಾಡಿದ್ದಾರೆ.

ಕೊನೆಗೆ ಪೊಲೀಸರು ಮೂವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ತನಿಖೆ ಮುಂದುವರೆಸಿದ್ದಾರೆ. ಅದರು ಏನೇ ಹೇಳಿ, ಹಲವು ವರ್ಷಗಳಿಂದ ಜೊತೆ ಇದ್ದು ಒಟ್ಟಿಗೆ ಸೇರಿ ಎಣ್ಣೆ ಹೋಡೆಯುತ್ತಿದ್ದ ಸ್ನೇಹಿತನನ್ನು ಕೊಲೆ ಮಾಡ್ತಾರೆ ಅಂದ್ರೆ ಹೆಂಡದ ನಶೆ ಇನ್ಯಾವ ಮಟ್ಟಕ್ಕೆ ಕೆಲಸ ಮಾಡಬಹುದು ನೀವೆ ಯೋಚಿಸಿ.


