
ಶಿವಮೊಗ್ಗ : ಮಹಿಳಾ ವಿಧ್ಯಾರ್ಥಿ ನಿಲಯದ ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲಿಲ್ಲ.! ವನಿಷಾಗೆ ಏನಾಯ್ತು.!? ಸಾವಿನ ಸುತ್ತ ಅನುಮಾನದ ಹುತ್ತಾ.?
news.ashwasurya.in
ಮಹಿಳಾ ವಿದ್ಯಾರ್ಥಿ ನಿಲಯದ ಟರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲಿಲ್ಲ.! ಹಾಗಾದರೆ ವನಿಷಾಗೆ ಏನಾಯ್ತು.? ಸರ್ಕಾರಿ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ದುರಂತ ಘಟನೆಯೊಂದು ನಡೆದು ಹೋಗಿದೆ. ಅಷ್ಟಕ್ಕೂ 21ರ ಹರೆಯದ ವನಿಷಾಗೆ ಏನಾಯ್ತು…..!?
ಅಶ್ವಸೂರ್ಯ/ಶಿವಮೊಗ್ಗ,ನ.05 : ಸರ್ಕಾರಿ ಕಾಲೇಜಿನ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ದುರಂತ ಘಟನೆಯೊಂದು ನಡೆದಿದೆ. ವಸತಿ ನಿಲಯದ ಟೆರೇಸ್ ಮೇಲೆ ಹೋದ 21 ವರ್ಷದ ವಿದ್ಯಾರ್ಥಿನಿ ವನಿಷಾ ಎಷ್ಟೇ ಹೊತ್ತಾದರು ಮರಳಿ ತನ್ನ ಕೊಠಡಿಗೆ ಬರಲೇ ಇಲ್ಲ. ವಿದ್ಯಾರ್ಥಿನಿ ನಾಪತ್ತೆಯಾಗಿ ಕೆಲ ಗಂಟೆಗಳು ಕಳೆದರೂ ಯಾರಿಗೂ ಸುಳಿವು ಕೂಡ ಸಿಗಲಿಲ್ಲ. ಆದರೆ ಹಾಸ್ಟೆಲ್ ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿ ಸಾವಿನ ಮನೆ ಸೇರಿದ್ದಾಳೆ.!ಈ ಘಟನೆ ನೆಡೆದಿರುವುದು ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಸರ್ಕಾರಿ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ.!

ಏನಾಯ್ತು ವನಿಷಾಗೆ.?
ಭದ್ರಾವತಿ ತಾಲೂಕಿನ ಗಂಗೂರಿನ ವನಿಷಾ ಶಿವಮೊಗ್ಗದ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು.ಓದಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ವನಿಷಾ ತರಗತಿಯಲ್ಲಿ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ವಸತಿ ನಿಲಯದಲ್ಲೂ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಳು.ವಸತಿ ನಿಲಯದ ಇತರ ವಿದ್ಯಾರ್ಥಿನಿಯರ ಜೊತೆಗೆ ಇದ್ದ ವನಿಷಾ ಕೆಲ ಕ್ಷಣದಲ್ಲಿ ನಾಪತ್ತೆಯಾಗಿದ್ದಳು.!? ಹಾಸ್ಟೆಲ್ ಟರೇಸ್ ಮೇಲೆ ಹೋದ ವನಿಷಾ ಟ್ಯಾಂಕ್ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ವನಿಷಾ ಹಾಸ್ಟೆಲ್ ಟೆರೇಸ್ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.! ಟೆರೇಸ್ ಮೇಲೆ ಹೋದ ಇತರ ವಿದ್ಯಾರ್ಥಿನಿಯರು ವನಿಷಾ ಮೃತದೇಹವನ್ನು ನೋಡಿ ಸ್ಥಳದಲ್ಲಿ ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಾರ್ಡನ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ವಿದ್ಯಾರ್ಥಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾವಿಗೆ ಕಾರಣ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.?


