SHOCKING NEWS : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಹೋದರಿಯರ ದುರಂತ ಸಾವು : ಮುಗಿಲು ಮುಟ್ಟಿದ ಪೋಷಕರ ಆಕ್ರಂದನ.!
news.ashwasurya.in

ಅಶ್ವಸೂರ್ಯ/ತೆಲಂಗಾಣ : ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದಲ್ಲಿ ನಡೆದ ರಸ್ತೆ ಅಪಘಾತದಲ್ಲಿ.. ತಂದೂರು ಪಟ್ಟಣದ ಗಾಂಧಿನಗರ ಪ್ರದೇಶದ ನಿವಾಸಿ ಎಲ್ಲಯ್ಯ ಗೌಡ್ ತನ್ನ ಮೂವರು ಮಕ್ಕಳನ್ನು ಕಳೆದುಕೊಂಡು ದಿಕ್ಕೆ ತೋಚದವರಂತಾಗಿದ್ದಾರೆ.!
ಈ ಅಪಘಾತದಲ್ಲಿ ದುರಂತ ಅಂತ್ಯಕಂಡ ಸಹೋದರಿಯರಾದ ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಂದು ತಿಳಿದುಬಂದಿದೆ. ತನ್ನ ಮೂವರು ಮಕ್ಕಳು ಇನ್ನಿಲ್ಲ ಎಂದು ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ಮಕ್ಕಳ ಮದುವೆಗಳನ್ನು ಅದ್ಧೂರಿಯಾಗಿ ಮಾಡುವ ಪೋಷಕರ ಆಸೆ ದುರಂತದಲ್ಲಿ ಕೊಚ್ಚಿ ಹೋಗಿದೆ.
ಮೃತರಲ್ಲಿ ಎರಡನೇ ಮಗಳು ತನುಷಾ ಎಂಬಿಎ ಓದುತ್ತಿದ್ದಳು. ಮೂರನೇ ಮಗಳು ಸಾಯಿಪ್ರಿಯಾ ಕೋಠಿ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿದ್ದಳು ಮತ್ತು ಕಿರಿಯ ಮಗಳು ನಂದಿನಿ ಕೂಡ ಅದೇ ಕಾಲೇಜಿನಲ್ಲಿ ಪದವಿಯ ಮೊದಲ ವರ್ಷದಲ್ಲಿ ಓದುತ್ತಿದ್ದಳು. ಅವರು ಇತ್ತೀಚೆಗೆ ಹಳ್ಳಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದರು. ಭಾನುವಾರ ರಜೆ ಮುಗಿದ ಕಾರಣ, ಅವರು ತಮ್ಮ ಕಾಲೇಜುಗಳಿಗೆ ಹಿಂತಿರುಗಲು ಹೊರಟರು. ಆದರೆ ಅವರು ಹಿಂತಿರುಗಿ ಬರುವಾಗ ಅಪಘಾತಕ್ಕೆ ಬಲಿಯಾಗಿ ಬಾರದೂರಿಗೆ ಪಯಣ ಬೆಳಸಿದ್ದಾರೆ.!

ಇತ್ತೀಚೆಗೆ ಈ ಮೂವರು ಸಹೋದರಿಯರ ಅಂತ್ಯಕ್ರಿಯೆಯು ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಗ್ರಾಮಸ್ಥರ ಕಣ್ಣೀರಿನ ನಡುವೆ ನಡೆಯಿತು. ಒಂದೇ ಹೊಟ್ಟೆಯಲ್ಲಿ ಹುಟ್ಟಿ ಒಂದೇ ಸಮಯದಲ್ಲಿ ನಿಧನರಾದ ಈ ಹುಡುಗಿಯರನ್ನು ನೋಡಿ ಇಡೀ ಊರಿಗೆ ಊರೆ ಕಣ್ಣೀರು ಹಾಕಿದೆ….


