ಬೆಂಗಳೂರು : ದರ್ಶನ್ ಮೂವೀ “ಡೆವಿಲ್”ನಲ್ಲಿ ಗಿಲ್ಲಿ ನಟನ “ಡೆವಿಲ್” ಲುಕ್..!
news.ashwasurya.in

ಅಶ್ವಸೂರ್ಯ/ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳಲ್ಲಿ ಗಿಲ್ಲಿ ನಟ ಕೂಡ ಒಬ್ಬರು ಈಗಾಗಲೇ ಬಿಗ್ ಬಾಸ್ ನಿಂದ ಮತ್ತಷ್ಟು ಕನ್ನಡಿಗರ ಮನಸ್ಸು ಕದ್ದಿರುವ ಗಿಲ್ಲಿನಟ ದರ್ಶನ್ ಅಭಿನಯದ ಡೆವಿಲ್ ಮೂವೀಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆಯಾಗಲಿದೆ.
ಬಿಗ್ಬಾಸ್ ಸೀಸನ್ 12ರಲ್ಲಿ ಟಾಪ್ ಸ್ಪರ್ಧಿಯಾಗಿರೋ ಗಿಲ್ಲಿ ನಟ (Gilli Nata) ಡೆವಿಲ್ ಸಿನಿಮಾದಲ್ಲಿ (Devil Movie) ನಟಿಸಿದ್ದಾರೆ ಅನ್ನೋ ಸಖತ್ ಇಂಟ್ರೆಸ್ಟಿಂಗ್ ಸುದ್ದಿ ಇತ್ತೀಚೆಗೆ ಹೊರ ಬಿದ್ದಿದ್ದು ಗಿಲ್ಲಿಯ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಸಿಕ್ಕಾಪಟ್ಟೆ ಹೈಲೈಟ್ ಆಗುತ್ತಿದ್ದಾರೆ.ತಾನು ಕಾಣಿಸಿಕೊಳ್ಳುತ್ತಿರುವ ಪ್ರತಿಯೊಂದು ಶೋನಲ್ಲಿ ಜನ ಮುಚ್ಚುವಂತೆ ಖಡಕ್ ಆಗಿ ಮಿಂಚುತ್ತಿರುವ ಸಮಯದಲ್ಲಿಯೇ ಗಿಲ್ಲಿ ನಟ ದರ್ಶನ್ ಆಭಿನಯದ ಡೆವಿಲ್ ಸಿನಿಮಾದಲ್ಲಿ ನಟಿಸಿರುವ ಸುದ್ದಿ ಹೊರ ಬಿದ್ದಿದೆ.
ಗಿಲ್ಲಿ ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಬಗ್ಗೆ ಅಪ್ಡೇಟ್ ಒಂದು ಹೊರಬಿದ್ದಿದೆ ಜೋತೆಗೆ ಗಿಲ್ಲಿ ನಟನ ಡಿಫರೆಂಟ್ ಪೋಸ್ಟರ್ ಕೂಡಾ ಚಿತ್ರತಂಡ ಶೇರ್ ಮಾಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಕಳೆದ ವರ್ಷ ಜೈಲು ಸೇರಿದ ದರ್ಶನ್ ಈಗ ಚಾರ್ಜ್ ಫ್ರೇಮ್ ಎದುರಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನಟನಿಗೆ ಜಾಮೀನು ನೀಡಿ ಅವರು ಹೊರಗೆ ಬಂದಿದ್ದರೂ ಕೂಡಾ ಸುಪ್ರೀಂ ಆದೇಶದಂತೆ ಮತ್ತೆ ಜೈಲು ಸೇರುವಂತಾಗಿತ್ತು. ಅದೃಷ್ಟವಶಾತ್ ಅಷ್ಟೊತ್ತಿಗೆ ‘ಡೆವಿಲ್’ ಚಿತ್ರದ ಶೂಟ್ ಪೂರ್ಣಗೊಳಿಸಿದ್ದರು. ಜೊತೆಗೆ ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದರು.

ಈಗ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇದೆ. ಹೀಗಿರುವಾಗಲೇ ಚಿತ್ರದಲ್ಲಿ ನಟಿಸಿದ ಕಲಾವಿದರ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ. ಗಿಲ್ಲಿ ನಟ ‘ಡೆವಿಲ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಫುಲ್ ಸ್ಲೀವ್ ಶರ್ಟ್, ಟೈ, ಸೀರಿಯಸ್ ಲುಕ್ ಕಾಮಿಡಿ ನಟ ಗಿಲ್ಲಿಯನ್ನು ಸಂಥಿಂಗ್ ಸ್ಪೆಷಲ್ ರೋಲ್ನಲ್ಲಿ ಕಾಣುವಂತಿದೆ.!
ಪ್ರಮುಖ ಪಾತ್ರವನ್ನು ಅವರು ಮಾಡುತ್ತಿದ್ದಾರೆ ಎಂದು ತಂಡ ಮಾಹಿತಿ ನೀಡಿದೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆಯಾಗಲಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೂಡಾ ಗಂಡನ ಸಿನಿಮಾ ಪೊಸ್ಟರ್, ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ….


