Headlines

ಮಥುರಾ : ಕೋಟಿ ಕುಳ ದಿನೇಶ್ 555 ಬೀಡಿ ಮಾಲೀಕ ಸುರೇಶ್ ಅಗರ್ವಾಲ್‌ರನ್ನು ಗುಂಡಿಕ್ಕಿ ಕೊಂದ ಮಗ ನಂತರ ತಾನು‌‌ ಆತ್ಮಹತ್ಯೆಗೆ ಶರಣಾದ.!?

ಅಶ್ವಸೂರ್ಯ/ ಮಥುರಾ: ಕೋಟ್ಯಾಧಿಪತಿ ಕುಳ ಹೆಸರಾಂತ ದಿನೇಶ್ 555 ಬೀಡಿ ಮಾಲೀಕನನ್ನು ಅವರ ಮಗನೇ ಗುಂಡಿಕ್ಕಿ ಕೊಂದ ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಈ ಆಘಾತಕಾರಿ ಘಟನೆ ಶುಕ್ರವಾರ ರಾತ್ರಿ ಮಥುರಾದ ವೃಂದಾವನದಲ್ಲಿ ನಡೆದಿದೆ.
ರಾತ್ರಿ ವೇಳೆ ನಡೆದ ಅಪ್ಪ ಮಗನ ಗಲಾಟೆಯಲ್ಲಿ ಮಗ ಅಂತಿಮವಾಗಿ ತನ್ನ ಬಳಿ ಇದ್ದ ಲೈಸೆನ್ಸ್ ರಿವಲ್ವಾರ್‌ನಿಂದ ಅಪ್ಪನ ಮೇಲೆ ಗುಂಡು ಹಾರಿಸಿ ಹೆತ್ತ ತಪ್ಪಿಗೆ ಅಪ್ಪನನ್ನೆ ಕೊಂದು ಮುಗಿಸಿದ್ದಾನೆ ನೀಚ ಮಗ.! ಅಪ್ಪನನ್ನು ಕೊಂದ ಬಳಿಕ ಅದೇ ಪಿಸ್ತೂಲ್ ನಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.!ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.
ಮೃತರನ್ನು ಸುರೇಶ್ ಚಂದ್ರ ಅಗರ್ವಾಲ್ (75), ಮತ್ತು ಅವರ ಮಗ ನರೇಶ್ ಅಗರ್ವಾಲ್ (50) ಎಂದು ಗುರುತಿಸಲಾಗಿದೆ.
ಸುರೇಶ್ ಚಂದ್ರ ಅಗರ್ವಾಲ್ (75), ದಿನೇಶ್ ಬೀಡಿ ಮತ್ತು 555 ಬೀಡಿ ಎಂಬ ಎರಡು ಪ್ರಸಿದ್ಧ ಬೀಡಿ ಕಂಪನಿಗಳ ಮಾಲೀಕರು. ಪೊಲೀಸರ ಮೇಲ್ನೋಟದ ತನಿಖೆಯಂತೆ ಸುರೇಶ್ ಚಂದ್ರ ಅವರ ಮಗ ನರೇಶ್ ದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಂತೆ. ಇದರಿಂದಾಗಿ ರೋಸಿ ಹೋಗಿದ್ದ ತಂದೆ ಸುರೇಶ್ ಚಂದ್ರ ಅವರು ಮಗನಿಗೆ ಗದರಿಸಿ ಬುದ್ಧಿ ಹೇಳುತ್ತಿದ್ದರಂತೆ. ನಿತ್ಯ ದಂತೆ ಶುಕ್ರವಾರ ರಾತ್ರಿ, ನರೇಶ್ ಮತ್ತೆ ಮನೆಯಲ್ಲಿ ಕುಡಿಯಲು ಪ್ರಾರಂಭಿಸಿದಾಗ, ಅವರ ತಂದೆ ಅವರನ್ನು ತಡೆದು ಬುದ್ಧಿ ಹೇಳಲು ಮುಂದಾಗಿದ್ದಾರೆ, ಈ ವೇಳೆ ಅಪ್ಪ ಮತ್ತು ಮಗನ ನಡುವೆ ದೊಡ್ಡ ಗಲಾಟೆಯೆ ಪ್ರಾರಂಭವಾಗಿದೆ. ಈ ವೇಳೆ ನಶೆಯ ಮತ್ತಿನಲ್ಲಿದ್ದ ನರೇಶ್ ಕೋಪದಿಂದ ತನ್ನ ಪರವಾನಗಿ ಪಡೆದ ಪಿಸ್ತೂಲನ್ನು ಹೊರತೆಗೆದು ತನ್ನ ತಂದೆಯ ಮೇಲೆ ಗುಂಡು ಹಾರಿಸಿದ್ದಾನಂತೆ.! ಗುಂಡು ಸುರೇಶ್ ಅವರ ಎದೆಯನ್ನು ಸೀಳಿದೆ.!ತಕ್ಷಣವೇ ಅವರು ನೆಲಕ್ಕೂರುಳಿದಿದ್ದಾರೆ ತಂದೆ ಅವರು ತಾನು ಹೋಡೆದ ಗುಂಡಿಗೆ ಬಲಿಯಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ಬಳಿಕ ತಾನು ಮಾಡಿದ ತಪ್ಪಿನ ಅರಿವಾಗಿ ನರೇಶ್ ಗಾಬರಿಗೊಂಡು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟಿದ್ದಾನೆ.

ಗುಂಡಿನ ಸದ್ದು ಕೇಳಿದ ನಂತರ ಕುಟುಂಬದ ಸದಸ್ಯರು ಕೋಣೆಯ ಕಡೆಗೆ ಓಡೋಡಿ ಬಂದಿದ್ದಾರೆ, ತಂದೆ ಮಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ಅಲ್ಲಿ ವೈದ್ಯರು ಇಬ್ಬರನ್ನೂ ಪರಿಕ್ಷೀಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗೌರಾ ನಗರ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.
ಸುರೇಶ್ ಚಂದ್ರ ಅಗರ್ವಾಲ್ ಬೀಡಿ ವ್ಯಾಪಾರದಲ್ಲಿ ಪ್ರಸಿದ್ಧ ಹೆಸರಾಗಿದ್ದರು. ಅವರು ತಮ್ಮ ಹಿರಿಯ ಮಗ ದಿನೇಶ್ ಹೆಸರಿನಲ್ಲಿ ವ್ಯವಹಾರವನ್ನು ಪ್ರಾರಂಭಿಸಿದ್ದರು ಮತ್ತು ಕ್ರಮೇಣ ಅದನ್ನು ಹಲವಾರು ರಾಜ್ಯಗಳಿಗೆ ವಿಸ್ತರಿಸಿದ್ದರು. ಕುಟುಂಬದ 555 ಬೀಡಿ ಬ್ರ್ಯಾಂಡ್ ಹೆಚ್ಚು ಜನಪ್ರಿಯವಾಯಿತು. ವ್ಯವಹಾರವು ಈಗ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ಸುರೇಶ್ ತಮ್ಮ ಇಬ್ಬರು ಕಿರಿಯ ಪುತ್ರರಾದ ನರೇಶ್ ಮತ್ತು ಮಹೇಶ್ ಮತ್ತು ಅವರ ಕುಟುಂಬಗಳೊಂದಿಗೆ ವೃಂದಾವನದಲ್ಲಿ ವಾಸಿಸುತ್ತಿದ್ದರು. ದಿನೇಶ್ ಕೋಲ್ಕತ್ತಾದಲ್ಲಿ ಕಂಪನಿಯ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ, ನರೇಶ್ ಮತ್ತು ಮಹೇಶ್ ವೃಂದಾವನದಲ್ಲಿ ವ್ಯವಹಾರವನ್ನು ನಿರ್ವಹಿಸುತ್ತಾರೆ. ಕುಟುಂಬವು ಮಥುರಾ-ವೃಂದಾವನ ಮತ್ತು ಪಶ್ಚಿಮ ಬಂಗಾಳದಲ್ಲಿ ದೊಡ್ಡ ಆಸ್ತಿಗಳನ್ನು ಹೊಂದಿದ್ದು, ಅವುಗಳ ಒಟ್ಟು ಮೌಲ್ಯ ಶತಕೋಟಿಗಳಷ್ಟಿದೆ ಎಂದು ಹೇಳಲಾಗುತ್ತದೆ.
ಎನೇ ಇರಲಿ ದೊಡ್ಡ ಕುಟುಂಬ ಒಂದರಲ್ಲಿ ಸಣ್ಣ ಎಣ್ಣೆ ವಿಷಯಕ್ಕೆ ಎರಡು ಹೆಣ ಬಿದ್ದಿದ್ದು ಮಾತ್ರ ದೊಡ್ಡ ದುರಂತವೆ ಹೌದು.?

Leave a Reply

Your email address will not be published. Required fields are marked *

Optimized by Optimole
error: Content is protected !!