

ಉತ್ತರಪ್ರದೇಶ : ಮಹಿಳಾ ಪೊಲೀಸರ ತಂಡದಿಂದ ದೇಶದಲ್ಲೇ ಮೊದಲ ಎನ್ಕೌಂಟರ್ ! ಸಿನಿಮೀಯ ಶೈಲಿಯಲ್ಲಿ ಕ್ರಿಮಿನಲ್ ಬಂಧನ.!
news.ashwasurya.in
ಅಶ್ವಸೂರ್ಯ/ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅತೀ ಹೆಚ್ಚು ಎನ್ಕೌಂಟರ್ ನಡೆದಿದ್ದು, ಗ್ಯಾಂಗ್ಸ್ಟರ್, ರೌಡಿಗಳು ಸೇರಿದಂತೆ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಯೋಗಿ ಸರ್ಕಾರ ಖಡಕ್ ಉತ್ತರ ಕೊಟ್ಟಿದ್ದಾರೆ. ಕ್ರಿಮಿನಲ್ ಅದೆಷ್ಟೇ ವೀರನಾಗಿದ್ದರೂ ಯುಪಿ ಪೊಲೀಸರ ಗುಂಡು ಅವರ ನಡು ಸಿಳಿದೆ. ಗುರಿಯಿಟ್ಟು ಕ್ರಿಮಿನಲ್ಗಳ ಕತೆ ಮುಗಿಸಿದ್ದಾರೆ.
ಇದೀಗ ಇದೇ ಉತ್ತರ ಪ್ರದೇಶದಲ್ಲಿ ಮಹಿಳಾ ಪೊಲೀಸರ ತಂಡ ದೇಶದಲ್ಲೇ ಮೊದಲ ಎನ್ಕೌಂಟರ್ ನಡೆಸಿದೆ. ಈ ಮೂಲಕ ಕ್ರಿಮಿನಲ್ ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.

ಯುಪಿಯ ಘಾಝಿಯಾಬಾದ್ನಲ್ಲಿ ಮಹಿಳಾ ಪೊಲೀಸರ ತಂಡ ಎನ್ಕೌಂಟರ್ ನಡೆಸಿದೆ. ಚೆಕ್ ಪಾಯಿಂಟ್ನಲ್ಲಿದ್ದ ಮಹಿಳಾ ಪೊಲೀಸರಿಗೆ ಇದೇ ಚೆಕ್ ಪಾಯಿಂಟ್ ಮೂಲಕ ಕ್ರಿಮಿನಲ್ ಜಿತೇಂದ್ರ ಹೋಗುವ ಮಾಹಿತಿ ಸಿಕ್ಕಿದೆ,ತಕ್ಷಣವೇ ಆಲರ್ಟ್ ಅದ ಮಹಿಳಾ ಪೊಲೀಸರ ತಂಡ ಜಿತೇಂದ್ರನ ಹಿಡಿಯಲು ಚಕ್ ಪೋಸ್ಟ್ನಲ್ಲಿ ಸಜ್ಜಾಗಿದ್ದರು. ಚೆಕ್ ಪೋಸ್ಟ್ ಬಳಿ ಕ್ರಿಮಿನಲ್ ಜಿತೇಂದ್ರ ಸ್ಕೂಟರ್ ಮೂಲಕ ಬರುತ್ತಿದ್ದಂತೆ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಕ್ರಿಮಿನಲ್ ದೌಲತ್ತು ಜಿತೇಂದ್ರ ಸ್ಕೂಟರ್ ನಿಲ್ಲಿಸದೆ ತೆರಳುವ ಪ್ರಯತ್ನ ಮಾಡಿದ್ದಾನೆ. ಬ್ಯಾರಿಕೇಡ್ ಹಾಕುತ್ತಿದ್ದಂತೆ ಸ್ಕೂಟರ್ಗೆ ಬಡಿದಿದೆ. ಇತ್ತ ನಿಯಂತ್ರಣ ಕಳೆದುಕೊಂಡ ಕ್ರಿಮಿನಲ್ ಜಿತೇಂದ್ರ ನೆಲಕ್ಕೆ ಬಿದ್ದಿದ್ದಾನೆ. ಜಿತೇಂದ್ರ ಸ್ಥಳದಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೆನ್ನಲ್ಲೇ ಪೊಲೀಸರು ಶರಣಾಗಲು ಸೂಚಿಸಿದ್ದಾರೆ. ಶರಣಾದರೆ ಒಳಿತು ಇಲ್ಲ ಗುಂಡು ತೂರಿಸಬೇಕಾದಿತು ಇನ್ನೂ ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನ ಉತ್ತಮವಲ್ಲ ಎಂದು ಮಹಿಳಾ ಪೊಲೀಸರು ಸೂಚಿಸಿದ್ದಾರೆ.

ಆದರೆ ಆರಂಭದಲ್ಲಿ ತೀವ್ರವಾಗಿ ಗಾಯಗೊಂಡಂತೆ ನಟಿಸಿದ ಕ್ರಿಮಿನಲ್ ಜಿತೇಂದ್ರ, ಕೆಲ ಹೊತ್ತು ರಸ್ತೆಯಲ್ಲೇ ಕುಸಿದು ಬಿದ್ದವನಂತೆ ನಟಿಸಿ ಮಲಗಿದ್ದಾನೆ. ಪೊಲೀಸರು ಸುತ್ತುವರಿಯಲು ಹೋಗುತ್ತಿದ್ದಂತೆ ಗುಂಡಿನ ದಾಳಿಗೆ ಕ್ರಿಮಿನಲ್ ಜಿತೇಂದ್ರ ಮುಂದಾಗಿದ್ದಾನೆ. ನೆಲಕ್ಕೆ ಬಿದ್ದ ಜಿತೇಂದ್ರ ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಮೊದಲೆ ಎಂತವುದೇ ಪರಿಸ್ಥಿತಿಗೂ ಸಜ್ಜಾಗಿದ್ದ ಮಹಿಳಾ ಪೊಲೀಸರು ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ.
ನೆಲಕ್ಕೆ ಬಿದ್ದ ಬೆನ್ನಲ್ಲೇ ರಿವಾಲ್ವರ್ ತೆಗೆದು ದಾಳಿ ಆರಂಭಿಸಿದ ಜಿತೇಂದ್ರನ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಜಿತೇಂದ್ರನ ಮೊಣಕಾಲಿನ ಕೆಳಗೆ ಗುಂಡಿನ ದಾಳಿ ನಡೆಸಿದ್ದಾರೆ. ಎರಡೂ ಕಾಲಿಗೆ ಗುಂಡಿನ ಮಳೆ ಸುರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಜಿತೇಂದ್ರ ರಕ್ತದ ನಡುವಿನಲ್ಲಿ ಕುಸಿದು ಬಿದ್ದಿದ್ದಾನೆ. ಮಹಿಳಾ ಪೊಲೀಸರ ತಂಡ, ಜಿತೇಂದ್ರನಿಂದ ರಿವಾಲ್ವರ್ ಕಸಿದುಕೊಂಡು ಆತನನ್ನು ಬಂಧಿಸಿದ್ದಾರೆ. ಜಿತೇಂದ್ರನ ಬಳಿಯಿಂದ ಪಿಸ್ತೂಲ್, ಸ್ಕೂಟರ್ನಲ್ಲಿ ಇಟ್ಟಿದ್ದ ಟ್ಯಾಬ್, ಸ್ಮಾರ್ಟ್ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.


