

ಮಹಾರಾಷ್ಟ್ರ : ಇನ್ಸ್ಪೆಕ್ಟರ್ನಿಂದ 4 ಬಾರಿ ನನ್ನ ಮೇಲೆ ಅತ್ಯಾಚಾರ..! ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯ ಗೊಳಿಸಿಕೊಂಡ ವೈದ್ಯೆ.!?
news.ashwasurya.in
ಅಶ್ವಸೂರ್ಯ/ಮಹಾರಾಷ್ಟ್ರ : 4 ಬಾರಿ ನನ್ನ ಮೇಲೆ ಇನ್ಸ್ಪೆಕ್ಟರ್ ಮಾಡಿದ್ದಾನೆ ಎಂದು ತನ್ನ ಕೈಯಲ್ಲಿ ಡೆತ್ ನೋಟ್ ಕರೆದುಕೊಂಡು ಬದುಕು ಅಂತ್ಯಗೊಳಿಸಿದ ಕೊಂಡ ವೈದ್ಯೆಯ ಪ್ರಕರಣ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಕಳೆದ 5 ತಿಂಗಳಲ್ಲಿ ನಡೆದಙತಹ ಈ ಘಟನೆಗೆ ಸಂಬಂಧಿಸಿದಂತೆ ವೈದ್ಯೆ ಆತ್ಮಹತ್ಯೆಗು ಮುನ್ನ ತನ್ನ ಕೈಯಲ್ಲಿ ನೋಟ್ ಬರೆದು ಉಸಿರು ಚಲ್ಲಿದ್ದಾಳೆ.;
ಈ ಪ್ರಕರಣ ಸತಾರದಲ್ಲಿ ಅಕ್ಟೋಬರ್ 24 ನೆಡೆದಿದೆ.! ಮಹಿಳಾ ಡಾಕ್ಟರ್ ಸಾವಿನ ಪ್ರಕರಣ ಇದೀಗ ದೊಡ್ಡ ಕೋಲಾಹಲವನ್ನೆ ಸೃಷ್ಟಿ ಮಾಡಿದೆ. ಕಳೆದ ಐದು ತಿಂಗಳಲ್ಲಿ ನಾಲ್ಕು ಬಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳಾ ವೈದ್ಯೆ ಬದುಕು ಅಂತ್ಯಗೊಳಿಸಿದ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ಮಹಿಳಾ ವೈದ್ಯೆ ದುರಂತ ಅಂತ್ಯಕಂಡಿದ್ದಾಳೆ. ಎಡಗೈನ ಅಂಗೈ ಮೇಲೆ ಡೆತ್ ನೋಟ್ ಬರೆದಿಟ್ಟು ಮಹಿಳಾ ವೈದ್ಯೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ.ಈ ಪ್ರಕರಣ ಬೆನ್ನಲ್ಲೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋಪಾಲ್ ಬಡ್ನೆಯನ್ನು ಅಮಾನತು ಮಾಡಲಾಗಿದೆ.

ಎಡಗೈನಲ್ಲಿ ನೋಟ್ ಬರೆದ ವೈದ್ಯೆ
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋಪಾಲ್ ಬಡ್ನೆ ಕಳೆದ ಐದು ತಿಂಗಳಲ್ಲಿ ತೀವ್ರವಾಗಿ ಮಾನಸಿಕ ಹಿಂಸೆ, ದೈಹಿಕ ಹಿಂಸೆ ನೀಡಿದ್ದಾನೆ.ಆತನ ಕಿರುಕುಳಕ್ಕೆ ಬೇಸತ್ತು ನಾನು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾನೆ. ಕಳೆದ ಐದು ತಿಂಗಳಲ್ಲಿ ನಾಲ್ಕು ಬಾರಿ ನನ್ನ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ. ಇದೇ ವೇಳೆ ಪೊಲೀಸ್ ಅಧಿಕಾರಿ ಪ್ರಶಾಂತ್ ಬಂಕರ್ ಕೂಡ ಕಿರುಕುಳ ನೀಡಿರುವುದಾಗಿ ವೈದ್ಯೆ ಉಲ್ಲೇಖಿಸಿದ್ದಾರೆ. ವೈದ್ಯೆಯ ಸಾವು ಮಹಾರಾಷ್ಟ್ರದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ.ರಕ್ಷಣೆ ಕೊಡಬೇಕಾದ ಪೊಲೀಸ್ ಅಧಿಕಾರಿಯೆ ತನ್ನ ಅಧಿಕಾರದ ದರ್ಪದಿಂದ ದಬ್ಬಾಳಿಕೆ ನಡೆಸಿ ಅತ್ಯಾಚಾರ ಮಾಡಿದ್ದಾನೆ.! ಅಮಾಯಕ ವೈದ್ಯೆಯನ್ನು ಟಾರ್ಗೆಟ್ ಮಾಡಿದ್ದಾನೆ ಎಂದು ಆಕ್ರೋಶಗಳು ಬಲವಾಗಿ ವ್ಯಕ್ತವಾಗಿದೆ.
ಸತತ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸದ ಪೊಲೀಸರು.!

ಫಲ್ಟಾನ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಜೂನ್ ತಿಂಗಳಿನಿಂದ ಸತತವಾಗಿ ಮಾನಸಿಕ ಹಾಗೂ ದೈಹಿಕ ಕಿರುಕಳ ಕುರಿತು ದೂರು ನೀಡಿದ್ದಾಳೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾಳೆ. ಆದರೆ ಈಕೆಯ ದೂರು, ಮನವಿಯನ್ನು ಗಂಭೀರವಾಗಿ ಪರಿಗಣಿಸದೆ ಹೋಗಿದೆ ಪೊಲೀಸ್ ಇಲಾಖೆ.! ಅನ್ನೋ ಆರೋಪವೂ ಕೇಳಿಬಂದಿದೆ. ಜೂನ್ 19 ರಂದು ಫಲ್ಟಾನ್ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ಗೆ ಇದೇ ಆರೋಪವನ್ನು ಮೊದಲ ಬಾರಿ ಮಾಡಿದ್ದರು. ಆದರೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.
ಸೆಪ್ಟೆಂಬರ್ನಲ್ಲಿ ಡಿಎಸ್ಪಿಗೆ ಪತ್ರ ಬರೆದಿದ್ದ ವೈದ್ಯೆ
ಫಲ್ಟಾನ್ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ತನ್ನ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇಬ್ಬರು ಪ್ರಮುಖ ಪೊಲೀಸ್ ಅಧಿಕಾರಿಗಳು ಆಗಿರುವ ಕಾರಣ ತನಗೆ ನ್ಯಾಯ ಸಿಗುತ್ತಿಲ್ಲ. ನನಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಸಬ್ ಇನ್ಸ್ಪೆಕ್ಟರ್ ಅಮಾನತಿಗೆ ಸೂಚಿಸಿದ ಸಿಎಂ ಫಡ್ನವಿಸ್
ವೈದ್ಯ ಸಾವು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆ ವಿರುದ್ದ ತೀವ್ರ ಆಕ್ರೋಶಗಳು ವ್ಯಕ್ತವಾಗಿತ್ತು. ತಕ್ಷಣವೇ ಸಭೆ ಸೇರಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ. ಈ ಆದೇಶ ಬೆನ್ನಲ್ಲೇ ಗೋಪಾಲ್ ಬಿಡ್ನೆ ಅಮಾನತಾಗಿದ್ದಾರೆ.


