


ಶಿವಮೊಗ್ಗ : ಶ್ರೀ ಎಸ್. ಬಂಗಾರಪ್ಪ ಫೌಂಡೇಷನ್ (ರಿ.) – ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆ ಅಡಿಯಲ್ಲಿ ಎಸ್ ಬಂಗಾರಪ್ಪ ನವರ “93”ನೇ ಜನ್ಮದಿನೋತ್ಸವ ಕಾರ್ಯಕ್ರಮ.
news ashwasurya.in
ನಾಡಿನ ಹೆಮ್ಮೆಯ ಜನಪ್ರಿಯ ರಾಜಕಾರಣಿ ಚಿಂತಕ, ಅಭಿವೃದ್ಧಿಯ ಹರಿಕಾರ, ಬಡವರ ಬಂಧು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪನವರ “93” ನೇ ಜನ್ಮದಿನೋತ್ಸವದ ಅದ್ದೂರಿ ಕಾರ್ಯಕ್ರಮ…..

ಅಶ್ವಸೂರ್ಯ/ಸೊರಬ : ಕರ್ನಾಟಕದ ಜನಪ್ರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಬಂಗಾರಪ್ಪನವರ 93ನೇ ಜನ್ಮದಿನಾಚರಣೆಯ ಅದ್ದೂರಿಯಾಗಿ ಸಮಾರಂಭವನ್ನು ಶ್ರೀ ಎಸ್ ಬಂಗಾರಪ್ಪ ಫೌಂಡೇಶನ್ (ರಿ) ಮತ್ತು ಶ್ರೀ ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ಅಕ್ಟೋಬರ್ “26”ರಂದು ಜಿಲ್ಲೆಯ ಸೊರಬದಲ್ಲಿರುವ ‘ಬಂಗಾರಧಾಮ’ದಲ್ಲಿ ನಡೆಯಲಿದೆ.
‘ಎಸ್.ಬಂಗಾರಪ್ಪ – ಶಕುಂತಲಾ ದಂಪತಿಯ ಸಮಾಧಿ ಸ್ಥಳವಾದ ‘ಬಂಗಾರಧಾಮ’ದಲ್ಲಿ ಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪನವರಕನಸಿನಂತೆ ಆಕರ್ಷಕವಾಗಿ ವಿನ್ಯಾಸಗೊಂಡಿದೆ. ರಾಜ್ಯ ಸರ್ಕಾರ ” ಬಂಗಾರಧಾಮ” ವನ್ನು ಈಗಾಗಲೇ ಪ್ರವಾಸಿ ಸ್ಥಳ ಎಂದು ಗುರುತಿಸಿದೆ. ಹೀಗಾಗಿ ಈ ಬಾರಿ ಬಂಗಾರಪ್ಪ ಅವರ ಹುಟ್ಟುಹಬ್ಬದ ಸಂಭ್ರಮ ಇನ್ನಷ್ಟು ಅದ್ದೂರಿಯಾಗಿ ನೆಡೆಯಲಿದೆ ಎಂದು ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನಾಯಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಅದ್ದೂರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ “ಬಂಗಾರ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ….

ನಮನ – ಚಿಂತನ – ಸನ್ಮಾನ ಕಾರ್ಯಕ್ರಮ
26″ ಅಕ್ಟೋಬರ್ 2025, ಭಾನುವಾರ
ಸಮಯ : ಸಂಜೆ 05:00 ರಿಂದ
ಸ್ಥಳ : ಬಂಗಾರಧಾಮ, ಸೊರಬ.ಈಗಾಗಲೇ
ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿತಾಣವಾಗಿ ಗುರುತಿಸಿದೆ.
“ವಿಚಾರ ಸಂಕಿರಣ”
ದಿನಾಂಕ : 26 ಅಕ್ಟೋಬರ್ 2025. ಭಾನುವಾರ
ಸಮಯ : ಬೆಳಿಗ್ಗೆ 10:30
ಸ್ಥಳ : ಡಾ|| ರಾಜ್‌ಕುಮಾರ್ ರಂಗಮಂದಿರ. ಸೊರಬ.
ಬಂಗಾರಪ್ಪನವರ ಚಿಂತನೆಗಳು
ವಿಷಯ : ಸುಸ್ಥಿರ ಬದುಕು-ಪ್ರಸ್ತುತತೆ
ಉದ್ಘಾಟನೆ : ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಪ್ರಸಿದ್ಧ ಕವಿಗಳು.
ಅಧ್ಯಕ್ಷತೆ : ಡಾ|| ಕಾಳೇಗೌಡ ನಾಗವಾರ ಮೈಸೂರು.
ವಿಚಾರ ಮಂಡನೆ : ಶ್ರೀಮತಿ ಹೆಚ್.ಎಲ್. ಪುಷ್ಪ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ.
ಡಾ| ಮಂಜುನಾಥ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ,
ಆಳ್ವಾಸ್ ಸಾಂಸ್ಕೃತಿಕ ವೈಭವ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಮೂಡಬಿದರೆ.
ಪ್ರಶಸ್ತಿ ಪ್ರದಾನ ಸಮಾರಂಭ.
ಉದ್ಘಾಟನೆ :
ಶ್ರೀ ಕೆ.ಹೆಚ್. ಮುನಿಯಪ್ಪ
ಸಚಿವರು, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಸರ್ಕಾರ.
ಮುಖ್ಯ ಅಥಿತಿಗಳು :
ಮಾಜಿ ಸಚಿವರು ಹಾಗೂ ಹಾಲಿ ಶಾಸಕರು. ಹಳಿಯಾಳ ಕ್ಷೇತ್ರ.
ಶ್ರೀ ಸಂತೋಷ್ ಲಾಡ್
ಸಚಿವರು, ಕಾರ್ಮಿಕ ಹಾಗೂ ಮೂಲ ಸೌಕರ್ಯ ಇಲಾಖೆ, ಕಲಘಟಗಿ ಕ್ಷೇತ್ರ
ಶ್ರೀ ಬೇಳೂರು ಗೋಪಾಲಕೃಷ್ಣ
ಅಧ್ಯಕ್ಷರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ, ಹಾಗೂ ಶಾಸಕರು, ಸಾಗರ ಕ್ಷೇತ್ರ.
ಗೌರವ ಉಪಸ್ಥಿತಿ
ಶ್ರೀ ಕೆ.ಎನ್. ತಿಲಕ್ಕುಮಾರ್
ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್.
ಉಪಸ್ಥಿತಿ
ಶ್ರೀ ವೇಣುಗೋಪಾಲ್ ನಾಯಕ್
ಅಧ್ಯಕ್ಷರು, ಬಂಗಾರಪ್ಪ ವಿಚಾರ ವೇದಿಕೆ.
ಡಾ|| ಕೆ.ವಿ. ನಾಗರಾಜ ಮೂರ್ತಿ
ಅಧ್ಯಕ್ಷರು, ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರ,
ಅಧ್ಯಕ್ಷತೆ :
ಶ್ರೀ ಎಸ್. ಮಧುಬಂಗಾರಪ್ಪ
ಅಧ್ಯಕ್ಷರು: ಎಸ್. ಬಂಗಾರಪ್ಪ ಫೌಂಡೇಷನ್. ಮಾನ್ಯ ಸಚಿವರು, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ.
“ಬಂಗಾರ” ಪ್ರಶಸ್ತಿ ಪುರಸ್ಕೃತರು
” ಸಾಹಿತ್ಯ ಬಂಗಾರ ” ಪ್ರಶಸ್ತಿ ಪುರಸ್ಕೃತರು
ಡಾ|| ಕಾಳೇಗೌಡ ನಾಗವಾರ
ಪ್ರಸಿದ್ಧ ಸಾಹಿತಿಗಳು, ಮೈಸೂರು.

ಕಿರು ಪರಿಚಯ – ಡಾ. ಕಾಳೇಗೌಡ ನಾಗವಾರ ಅವರು ಪ್ರಸಿದ್ಧ ಕನ್ನಡ ಸಾಹಿತಿಗಳು, ಜಾನಪದ ವಿದ್ವಾಂಸರು ಮತ್ತು ನಿವೃತ್ತ ಪ್ರಾಧ್ಯಾಪಕರಾಗಿದ್ದು, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಾಹಿತ್ಯವನ್ನು ಬೋಧಿಸಿದ್ದಾರೆ. ಅವರು ಸಂಶೋಧನೆ, ಜಾನಪದ ಸಾಹಿತ್ಯ ಸಂಗ್ರಹ ಮತ್ತು ಬಂಡಾಯ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ “ಬೆಟ್ಟ ಸಾಲು ಮಳೆ” ಮತ್ತು “ಅಲೆಗಳು” ಕಥಾಸಂಕಲನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
“ಧರ್ಮ ಬಂಗಾರ”ಪ್ರಶಸ್ತಿ ಪುರಸ್ಕೃತರು
ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ, ಬೆಂಗಳೂರು, ಪರವಾಗಿ,
ಶ್ರೀ ಎಲ್. ರೇವಣಸಿದ್ದಯ್ಯ
(ಐ.ಪಿ.ಎಸ್. ಎ) ನಿವೃತ್ತ ಪೊಲೀಸ್ ಮಹಾನಿರ್ದೇಶಕರು.

ಕಿರು ಪರಿಚಯ – ರಾವ್ ಬಹದ್ದೂರ್ ಧರ್ಮಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ (ಆರ್‌ಬಿಡಿಜಿಟಿಸಿ) ಬೆಂಗಳೂರಿನ ಒಂದು ಪ್ರಮುಖ ದತ್ತಿ ಸಂಸ್ಥೆಯಾಗಿದೆ. ಇದನ್ನು 1903ರಲ್ಲಿ ಲೋಕೋಪಕಾರಿ ಗುಬ್ಬಿ ತೋಟದಪ್ಪ ಅವರು ಸ್ಥಾಪಿಸಿದರು.
” ಜಾನಪದ ಬಂಗಾರ ” ಪ್ರಶಸ್ತಿ ಪುರಸ್ಕೃತರು
ಶ್ರೀಮತಿ ರಾಧಾಬಾಯಿ ಮಾದರ್ ,
ಚೌಡಿಕೆ ಕಲಾವಿದರು. ಬೆಳಗಾವಿ.

ಕಿರು ಪರಿಚಯ – ಚೌಡಿಕೆ ಕಲಾವಿದರು, ವಿಶೇಷವಾಗಿ ಯಲ್ಲಮ್ಮ ದೇವರನ್ನು ಆರಾಧಿಸುವ ಸಮುದಾಯದವರು. ಬೆಳಗಾವಿಯ ಚೌಡಿಕೆ ಕಲಾವಿದೆ ರಾಧಾಬಾಯಿ ಮಾರತಿ ಮಾದರ್, 2020ರಲ್ಲಿ ಶಿವಮೊಗ್ಗದಲ್ಲಿ ನಡೆದ ಗಣೇಶ ಚತುರ್ಥಿ ಸಂಗೀತೋತ್ಸವದಲ್ಲಿ ಭಾಗವಹಿಸಿದ್ದರು. ಇವರು ತಮ್ಮ ತಂಡದೊಂದಿಗೆ ಯಲ್ಲಮ್ಮ ದೇವಿಯ ಹಾಡುಗಳನ್ನು ಹಾಡಿ, ಆ ಪ್ರಾಚೀನ ಕಲೆಯನ್ನು ಪ್ರದರ್ಶಿಸಿದ್ದರು.
” ಕಲಾ ಬಂಗಾರ “ಪ್ರಶಸ್ತಿ ಪುರಸ್ಕೃತರು
ಶ್ರೀ ಜೇವರ್ಗಿ ರಾಜಣ್ಣ ರಂಗಭೂಮಿ ಕಲಾವಿದರು, ಗುಲ್ಬರ್ಗ.

ಕಿರು ಪರಿಚಯ – 1993ನೇ ಇಸವಿಯಲ್ಲಿ ಗುಲ್ಬರ್ಗ ಜಿಲ್ಲೆಯ ಚಿತ್ತಾಪೂರ ತಾಲೂಕಿನ ರಾವೂರ ಗ್ರಾಮದಲ್ಲಿ ‘ವಿಶ್ವಾರಾಧ್ಯರ ಮಹಾತ್ಮೆ’ ನಾಟಕ ಪ್ರದರ್ಶನ ನಡೆದಿತ್ತು. ನಾಟಕದಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬೇಕಾದ ಜವಾಬ್ದಾರಿ ‘ಗಂಟೆಪ್ಪ’ನ ಪಾತ್ರ ನಿರ್ವಹಿಸಿದ್ದ ಕಲಾವಿದನದಾಗಿತ್ತು. ಆ ಜವಾಬ್ದಾರಿಯನ್ನು ಆತ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಕೂಡ. ಗಂಟೆಪ್ಪ ರಂಗಭೂಮಿಗೆ ಕಾಲಿಟ್ಟರೆ ಸಾಕು ಪ್ರೇಕ್ಷಕರೆಲ್ಲ ಬಿದ್ದು ಬಿದ್ದು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. ಆದರೆ, ಅದೇ ಗಂಟೆಪ್ಪ ತನ್ನ ಪಾಲಿನ ದೃಶ್ಯಗಳ ಅಭಿನಯ ಮುಗಿಸಿ ಪರದೆಯ ಹಿಂದೆ ಹೋದಾಗಲೆಲ್ಲ ನೆಲಕ್ಕೆ ಬಿದ್ದು ಬೋರಾಡಿ ಅಳುತ್ತಿದ್ದ..! ಆ ಅಳು ಅಭಿನಯವಾಗಿರಲಿಲ್ಲ..! ಕೆಲವೇ ಕ್ಷಣಗಳಲ್ಲಿ ಮತ್ತೆ ರಂಗ ಪ್ರವೇಶ ಮಾಡಿ ಅಕ್ಷರಶ: ಪಾತ್ರವೇ ಆಗುತ್ತಿದ್ದ. ಕಲಾರಾಧಕರನ್ನು ನಗಿಸುತ್ತಿದ್ದ.. ಪರದೆಯ ಹಿಂದೆ ಹೋಗಿ ಮತ್ತೆ ಕಣ್ಣೀರಾಗುತ್ತಿದ್ದ… ಒಳಗೊಳಗೇ ಅಳುತ್ತ ಎಲ್ಲರನ್ನೂ ನಗಿಸುವ ಈ ಭಾವನೆಗಳ ತಾಕಲಾಟ ನಾಟಕ ಮುಗಿಯುವವರೆಗೆ ಹತ್ತಾರು ಬಾರಿ ನಡೆದೇ ಇತ್ತು..!


ಸರ್ವರಿಗೂ ಸುಸ್ವಾಗತ


