ಶಿವಮೊಗ್ಗ : ಆಗುಂಬೆ ಠಾಣೆಯಲ್ಲಿ ದಕ್ಷ ಅಧಿಕಾರಿ ಶಿವಣ್ಣಗೌಡಪಾಟೀಲ್.ಇಂತಹ ಅಧಿಕಾರಿಗೂ ಮಸಿಬಳಿಯಲು ಮುಂದಾದ ಕೀಡಿಗೇಡಿಗಳು.!
Highlights….
ಅಕ್ರಮವಾಗಿ ಕೋಳಿ ಅಂಕ ನೆಡೆಸುತ್ತಿದ್ದಾರೆ ಎನ್ನುವ ಮಾಹಿತಿ ಅಧಾರದ ಮೇಲೆ ಆಗುಂಬೆ ಠಾಣೆಯ ಪಿಎಸ್ಐ ಮತ್ತು ಸುಮಾರು ಏಳುಜನ ಪೋಲಿಸರ ತಂಡ ಮುಂದಿನ ಕ್ರಮಕ್ಕಾಗಿ ಆಗುಂಬೆ ಠಾಣೆಯಲ್ಲಿ ಅಸಂಜ್ಞೇಯ ಪ್ರಕರಣ ದಾಖಲಿಸಿ ದಾಳಿಗೆ ತೆರಳಿರುತ್ತಾರೆ.? ಅಕ್ರಮವಾಗಿ ಕೋಳಿ ಅಂಕ ನೆಡೆಸುತ್ತಿದ್ದ ಸ್ಥಳಕ್ಕೆ ತೆರಳಿ ದಾಳಿಗೆ ಮುಂದಾದಾಗ ಆಗುಂಬೆ ಠಾಣೆಯ ಪಿಎಸ್ಐ ಶಿವಣ್ಣಗೌಡ ಮತ್ತು ಪೊಲೀಸರ ತಂಡವನ್ನು ದೂರದಿಂದಲೇ ಗಮನಿಸಿದ ಕೋಳಿ ಅಂಕದಲ್ಲಿ ಇದ್ದಂತವರು ಅಲ್ಲಿಂದ ಪರಾರಿಯಾಗಿರುತ್ತಾರೆ.!

news.ashwasurya.in
ಅಶ್ವಸೂರ್ಯ/ಆಗುಂಬೆ : ಅಂದು ಬುಧವಾರ ಎಲ್ಲೆಡೆ ದೀಪಾವಳಿ ಹಬ್ಬದ ಸಡಗರ ಒಂದುಕಡೆಯಾದರೆ,ಹಬ್ಬ ಹರಿದಿಗಳು, ಮಡದಿ ಮಕ್ಕಳನ್ನು ಮರೆತು ತಮ್ಮ ಬಿಡುವಿಲ್ಲದೆ ಸಾರ್ವಜನಿಕರ ಹಿತ ಕಾಯುವಿಕೆಯಲ್ಲಿ ತಮ್ಮನ್ನು ತೋಡಗಿಸಿಕೊಳ್ಳುವ ಪೊಲೀಸ್ ಇಲಾಖೆಯನ್ನು ಪ್ರತಿಯೊಬ್ಬ ನಾಗರಿಕರು ಗೌರವದಿಂದ ಕಾಣಬೇಕಿದೆ,ಅಂದು ದೀಪಾವಳಿಯ ಸಡಗರ ಆದರೆ ಯಾವುದೇ ಅಹಿತಕರ ಘಟನೆಗಳು ನೆಡೆಯದಹಾಗೆ ಎಚ್ಚರವಹಿಸಿದ್ದ ಆಗುಂಬೆ ಠಾಣೆಯ ಪಿಎಸ್ಐ ಶಿವಣ್ಣಗೌಡ ಮತ್ತು ಪೊಲೀಸರ ತಂಡ ತಮ್ಮ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದರು,
ಅದೆ ಸಮಯದಲ್ಲಿ ಆಗುಂಬೆ ಹೋಬಳಿ ನಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗಾರ್ಡರಗದ್ದೆಯ ಹುರುಳಿಯ ಪ್ರಕಾಶ್ ಶೆಟ್ಟಿ ಎನ್ನುವವರ ಮನೆಯ ಹತ್ತಿರ ಅಕ್ರಮವಾಗಿ ಕೋಳಿ ಅಂಕ ನೆಡೆಸುತ್ತಿದ್ದಾರೆ ಎನ್ನುವ ಮಾಹಿತಿ ಅಧಾರದ ಮೇಲೆ ಆಗುಂಬೆ ಠಾಣೆಯ ಪಿಎಸ್ಐ ಮತ್ತು ಸುಮಾರು ಏಳುಜನ ಪೋಲಿಸರ ತಂಡ ಮುಂದಿನ ಕ್ರಮಕ್ಕಾಗಿ ಆಗುಂಬೆ ಠಾಣೆಯಲ್ಲಿ ಅಸಂಜ್ಞೇಯ ಪ್ರಕರಣ ದಾಖಲಿಸಿ ದಾಳಿಗೆ ತೆರಳಿರುತ್ತಾರೆ.? ಅಕ್ರಮವಾಗಿ ಕೋಳಿ ಅಂಕ ನೆಡೆಸುತ್ತಿದ್ದ ಸ್ಥಳಕ್ಕೆ ತೆರಳಿ ದಾಳಿಗೆ ಮುಂದಾದಾಗ ಆಗುಂಬೆ ಠಾಣೆಯ ಪಿಎಸ್ಐ ಶಿವಣ್ಣಗೌಡ ಮತ್ತು ಪೊಲೀಸರ ತಂಡವನ್ನು ದೂರದಿಂದಲೇ ಗಮನಿಸಿದ ಕೋಳಿ ಅಂಕದಲ್ಲಿದ್ದವರು ಅಲ್ಲಿಂದ ಪರಾರಿಯಾಗಿರುತ್ತಾರೆ.!

ಅ ಸ್ಥಳದಲ್ಲಿ ಇದ್ದಂತಹ ಬೈಕ್ಗಳು ಬಗ್ಗೆ ಸ್ಥಳೀಯರಲ್ಲಿ ವಿಚಾರಿಸುತ್ತಾ ಬೈಕಿನ ಬ್ಯಾಗ್ಗಳನ್ನು ಪರಿಶಿಲಿಸಿದಾಗ ಕೋಳಿ ಅಂಕಕ್ಕೆ ತಂದಂತ ಕೋಳಿಗಳನ್ನು ಹಾಕಿಕೊಂಡು ಬಂದಂತಹ ಚೀಲಗಳನ್ನು ಪರಿಶೀಲಿಸಿ ಸ್ಥಳೀಯರನ್ನು ವಿಚಾರಿಸುತ್ತಿರುವ ಸಮಯದಲ್ಲಿ ಅಲ್ಲೆ ಇದ್ದಂತಹ ಯುವಕನೊಬ್ಬ ಪಿಎಸ್ಐ ಅವರ ಬಳಿಗೆ ಬಂದು ವಿಚಾರಿಸಲು ನಿಮಗೆ ಅನುಮತಿ ಇದೀಯಾ.? ಇದನ್ನು ವಿಚಾರಿಸಲು ನೀವು ಯಾರು.? ಎಂದು ಪೊಲೀಸ್ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾನೆ.! ಸಾಲದ್ದಕ್ಕೆ ಇಲ್ಲಿ ಅಂಕದ ಕೋಳಿಗಳು ಇದೀಯಾ.? ಕೋಳಿಗೆ ಕಟ್ಟುವ ಚೂರಿ ಇದೀಯಾ ಎಂದು ಪ್ರಶ್ನೆ ಮಾಡಿದ್ದಾನೆ,ಪೊಲೀಸರು ಸ್ಥಳ ಪರಿಶೀಲನೆ ಮಾಡುವ ಸಮಯದಲ್ಲಿ ಸದರಿ ಯುವಕ ಅದನ್ನು ವಿಡಿಯೋ ಮಾಡುತ್ತಿರುತ್ತಾನೆ.ವಿಡಿಯೋ ಮಾಡಬೇಡಿ ಎಂದು ಅಧಿಕಾರಿಗಳು ಹೇಳಿದಾಗ ಏಕಾಏಕಿ ಅಧಿಕಾರಿಗಳನ್ನು ತಳ್ಳಿದ್ದಾನೆ.ಆವಾಗ ತಳ್ಳಾಟವಾಗಿದೆ.ತಕ್ಷಣವೇ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸದರಿ ಯುವಕನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ,ನಂತರ ಠಾಣೆಗೆ ಕರೆದುಕೊಂಡು ಬಂದ ಯುವಕನ ಕಡೆಯವರಾದ ಹುರುಳಿ ಪ್ರಕಾಶ್ ಶೆಟ್ಟಿ ಅವರನ್ನು ಠಾಣೆಗೆ ಕರೆಸಿ ಯುವಕನ ಬಗ್ಗೆ ವಿಚಾರಿಸಿದಾಹ ಆತ ಹಬ್ಬದ ನಿಮಿತ್ತ ಧಾರ್ಮಿಕ ಸಂಕೇತವಾಗಿ ಕೋಳಿ ಅಂಕವನ್ನು ಅಡಿಸಲು ಸಿದ್ಧತೆಮಾಡಿಕೊಳ್ಳುತ್ತಿದ್ದ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ, ಆಗುಂಬೆ ಪೊಲೀಸ್ ಠಾಣೆಯ ಅಧಿಕಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಣ್ಣಗೌಡ ಅವರು ಕೋಳಿ ಅಂಕ ಆಡುವುದು ಕಾನೂನು ಬಾಹಿರ ಎಂದು ತಿಳಿಸುತ್ತಾರೆ,ಅದನ್ನು ಒಪ್ಪಿಕೊಂಡ ಹುರುಳಿ ಪ್ರಕಾಶ್ ಅವರು ಇನ್ನು ಮುಂದೆ ಗ್ರಾಮದಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ, ಠಾಣೆಗೆ ಕರೆದುಕೊಂಡು ಬಂದಂತಹ ಯುವಕ ಕೂಡಾ ಇನ್ನುಮುಂದೆ ನಾನು ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಒಪ್ಪಿಕೊಂಡು “ಭಾರತೀಯ ನ್ಯಾಯ ದಂಡ ಸಂಹಿತೆ”ಯ ಕಲಂ 132 ಪ್ರಕಾರ ಸಾರ್ವಜನಿಕರ ಸೇವಕರನ್ನು ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಅವರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದು ಆತನಿಗೆ ಕಾನೂನಿನ ಪಾಠವನ್ನು ತಿಳಿ ಹೇಳಿ ಇನ್ನೊಂದು ಬಾರಿ ಈ ರೀತಿ ನೆಡೆದುಕೊಳ್ಳದಂತೆ ಬುದ್ಧಿ ಹೇಳಿ ಯುವಕರನ್ನು ಕಳುಹಿಸಿ ಕೊಟ್ಟಿದ್ದಾರೆ.
ಜೋತೆಗೆ ಇಂತಹ ಅಕ್ರಮ ಚಟುವಟಿಕೆಗಳು ನೆಡೆಯುವುದು ಕಂಡುಬಂದರೆ ನಮಗೆ ತಿಳಿಸಿ ಪೊಲೀಸರ ಜೋತೆಗೆ ಕೈಜೋಡಿಸಿ ಸಮಾಜದ ಏಳಿಗೆಗಾಗಿ ಒಟ್ಟಿಗೆ ಶ್ರಮಿಸೋಣ ಎಂದು ತಿಳಿಸಿರುತ್ತಾರೆ.
ಒಟ್ಟಿನಲ್ಲಿ ಈ ಪ್ರಕರಣದಲ್ಲಿ ತಪ್ಪು ಮಾಡಿದವನೆ ಹೀರೊ ಆಗಲು ಹೋಗಿ ಸೋಶಿಯಲ್ ಮಿಡಿಯಾದವರಿಗೂ ಸುಳ್ಳು ಮಾಹಿತಿ ನೀಡಿ ಪೊಲೀಸರಿಗೆ ಮಸಿಬಳಿಯಲು ಮುಂದಾಗಿದ್ದು ಹಾಸ್ಯಾಸ್ಪದವಾಗಿದೆ.
ಒಟ್ಟಿನಲ್ಲಿ ಪಿಎಸ್ಐ ಶಿವಣ್ಣಗೌಡ ಎನು.! ಅವರ ಕಾರ್ಯದಕ್ಷತೆ ಎನು.? ಎನ್ನುವುದು ಈಗಾಗಲೇ ಶಿವಮೊಗ್ಗ ಜಿಲ್ಲೆಯ ಕುಂಸಿ ಮತ್ತು ತೀರ್ಥಹಳ್ಳಿಯ ಜನತೆಗೆ ಗೊತ್ತಿದೆ,ಸದರಿ ಆಗುಂಬೆ ಠಾಣೆಗೆ ಪಿಎಸ್ಐ ಆಗಿ ಶಿವಣ್ಣಗೌಡರು ಬಂದು ಕೇವಲ ನಾಲ್ಕು ತಿಂಗಳು ಕಳೆದಿದೆ,ಈ ನಾಲ್ಕು ತಿಂಗಳ ಅವದಿಯಲ್ಲಿ ತಮ್ಮ ದಕ್ಷತೆಯನ್ನು ಮೇರೆದು ಎರಡು ಕಳ್ಳತನ ಪ್ರಕರಣ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಆಗುಂಬೆಯ ಸೂಕ್ಷ್ಮ ಸ್ಥಳಗಳ ಜೋತೆಗೆ ಕೆಲವು ಪ್ರಮುಖ ಗ್ರಾಮ ಪಂಚಾಯತಿಯ ಸೂಕ್ಷ್ಮ ಸ್ಥಳಗಳಲ್ಲಿ ಶಕ್ತಿಯುತವಾದ ಉನ್ನತ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಆಳವಡಿಸಿದ್ದಾರೆ, ಇನ್ನೂ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಸ್ಥಳೀಯ ಸಾರ್ವಜನಿಕರು ಮತ್ತು ಮುಖಂಡರ ಬೆಂಬಲದೊಂದಿಗೆ ಸಿಸಿ ಟಿವಿ ಅಳವಡಿಸಲು ಮುಂದಾಗಿದ್ದಾರೆ, ಜೋತೆಗೆ ಆಗುಂಬೆ ಘಾಟಿಯ ಡೆಂಜರಸ್ ತಿರುವುಗಳಲ್ಲಿ ದಾನಿಗಳ ಸಹಕಾರದೊಂದಿಗೆ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಕನ್ನಡಿಗಳನ್ನು ಅಳವಡಿಸಿದ್ದಾರೆ.
ಪಿಎಸ್ಐ ಶಿವಣ್ಣಗೌಡರು ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡೆ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ, ಈಗಾಗಲೇ ಪಿಎಸ್ಐ ಶಿವಣ್ಣಗೌಡರು ಆಗುಂಬೆ ಠಾಣೆಗೆ ಕರ್ತವ್ಯಕ್ಕೆ ಕಾಲಿಡುತ್ತಿದ್ದಂತೆ ಅಕ್ರಮ ದಂಧೆಕೋರರ ಚಟುವಟಿಕೆಗಳಿಗೆ ಒಂದಷ್ಟು ಬ್ರೇಕ್ ಬಿದ್ದಿದೆ.ಇಂತಹ ದಕ್ಷ ಅಧಿಕಾರಿ ಶಿವಣ್ಣಗೌಡರಿಂದ ಆಗುಂಬೆ ಠಾಣಾ ಸರಹದ್ದಿನಲ್ಲಿ ಇನ್ನಷ್ಟು ಕೆಲಸವಾಗಬೇಕಿದೆ.ಅಕ್ರಮ ಮರಳು ದಂಧೆ ಮತ್ತು ಕೆಲವು ಅಂಗಡಿ ಮತ್ತು ಗ್ರಾಮದ ಮನೆಗಳಲ್ಲಿ ಬಿಕರಿಯಾಗುತ್ತಿರುವ ಅಕ್ರಮ ಹೆಂಡ ಮಾರಾಟ.! ಅಕ್ರಮ ಕಲ್ಲು ಕೊರೆ ದಂಧೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಪ್ರಜ್ಞಾವಂತ ನಾಗರಿಕರ ಬೇಡಿಕೆಯಾಗಿದೆ..ನಮ್ಮ ಪತ್ರಿಕೆ ಕೂಡ ಇದನ್ನೆ ಬಯಸುವುದರ ಜೋತೆಗೆ ಅಕ್ರಮ ದಂಧೆಕೋರರನ್ನು ಮಟ್ಟಹಾಕಲು ಪತ್ರಿಕೆ ಕೂಡ ನಿಮ್ಮೊಂದಿಗೆ ಇದೆ. ಆಗುಂಬೆ ದಕ್ಷ ಅಧಿಕಾರಿ ಪಿಎಸ್ಐ ಶಿವಣ್ಣಗೌಡ ಅವರಿಂದ ಇನ್ನಷ್ಟು ಉತ್ತಮ ಕೆಲಸಗಳು ಆಗಲಿ ಅಕ್ರಮ ದಂಧೆಕೋರರನ್ನು ಮಟ್ಟಹಾಕಲಿ ಎನ್ನುವುದೇ ಸಾರ್ವಜನಿಕರ ಮತ್ತು ಪತ್ರಿಕೆಯ ಆಶಯವಾಗಿದೆ.


