
ಶಿವಮೊಗ್ಗ : ದನಗಳ್ಳರ ಗ್ಯಾಂಗ್ ನಿಂದ ದನಗಳ್ಳನ ಮೇಲೆ ಅಟ್ಯಾಕ್ ಆಸ್ಪತ್ರೆ ಸೇರಿದ ಚೋಟು (ತೌಫೀಕ್), ಲಾಂಗಿನೇಟಿಗೆ ಚೋಟು ಕೈ ಕಟ್ಟಾಯ್ತಾ.?
ಅಶ್ವಸೂರ್ಯ/ ಹೊಳೆಹೊನ್ನೂರು : ಹೊಳೆಹೊನ್ನೂರು ಠಾಣಾ ಸರಹದ್ದಿನಲ್ಲಿ ದನಗಳ್ಳರ ಗ್ಯಾಂಗ್ ಒಂದು ದನಗಳ್ಳನ ಮೇಲೆ ಅಟ್ಯಾಕ್ ಮಾಡಿದೆ.ಲಾಂಗಿನೇಟಿಗೆ ದನಗಳ್ಳ ಚೋಟು ( ತೌಫೀಕ್ವಿ )ನ ಕೈ ಕಟ್ಟಾಗಿದ್ದು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಜೀವಕ್ಕೆ ಯಾವುದೇ ಅಪಾಯ ವಿಲ್ಲ ಎಂದು ತಿಳಿದುಬಂದಿದೆ.

ಚೋಟು ಅಲಿಯಾಸ್ ತೌಫೀಕ್
ಗೌತಮ್ ( ಇಲಿಯಾಸ್ ) & ಗ್ಯಾಂಗ್ ಇದೆ ಕಾರಿನಲ್ಲಿ ಬಂದ ಅನುಮಾನವಿದೆ.?
ಪ್ರಕರಣದ ಹಿನ್ನೆಲೆ :
ಶಿವಮೊಗ್ಗ ನಗರದ ಟಿಪ್ಪು ನಗರದ ದನಗಳ್ಳರಾದ ಗೌತಮ್ ಅಲಿಯಾಸ್ ಇಲಿಯಾಸ್ ಮತ್ತು ಮಕ್ಸೂದ್ ಗ್ಯಾಂಗ್ ಮತ್ತು ಭದ್ರಾವತಿಯ ನಗರದ ಹಿತ್ಲಾಪುರದ ದನಗಳ್ಳ ಚೋಟುವಿನ ನಡುವು ಹಲವು ದಿನಗಳಿಂದ ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಿದ್ದರಂತೆ.!
ಕಳೆದ ನಾಲ್ಕು ತಿಂಗಳ ಹಿಂದೆ ಗೌತಮ್ (ಇಲಿಯಾಸ್) ಗ್ಯಾಂಗ್ ಭದ್ರಾವತಿಯ ಚೋಟುವನ್ನು ಎಳೆದುಕೊಂಡು ಬಂದು ಟಿಪ್ಪುನಗರದಲ್ಲಿ ಇಟ್ಟು ನಿನ್ನಿಂದ ನಮಗೆ ಮೂರ್ನಾಲ್ಕು ಲಕ್ಷ ಲಾಸ್ ಆಗಿದೆ ಡಿಪಾರ್ಟ್ ಮೆಂಟ್ ಗೆ ನೀನು ನಮ್ಮ ವಿರುದ್ಧ ಮಾಹಿತಿ ನೀಡಿದ್ದಿಯಾ. ನಮಗೆ ನೀನು ನಾಲ್ಕುಲಕ್ಷ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರಂತೆ.ಚೋಟುವನ್ನು ಕರೆದುಕೊಂಡು ಬಂದಿರುವುದು ಡಿಪಾರ್ಟ್ ಮೆಂಟ್ ಗೆ ಗೊತ್ತಾಗಿದೆ ಎಂದು ಹೆದರಿ ಚೋಟುವನ್ನು ಬಿಟ್ಟು ಕಳಿಸಿದ್ದರಂತೆ.!
ಅ ಕ್ಷಣದಿಂದಲೆ ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಿದ್ದರು ಎನ್ನುವ ಮಾತು ಕೇಳಿಬರುತ್ತಿದೆ.ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಚೋಟೊ ತನ್ನ ನಾಲ್ಕೈದು ಜನ ಸ್ನೇಹಿತರ ಜೋತೆಗೆ ಹೊಳೆಹೊನ್ನೂರು ವ್ಯಾಪ್ತಿಯ ಕ್ಯಾಂಟೀನ್ ಒಂದರಲ್ಲಿ ಟೀಫನ್ ಮಾಡುತ್ತಿದ್ದ ಸಂದರ್ಭದಲ್ಲಿ ಮೊದಲೇ ಸ್ಕೇಚ್ ಕುಳಿತಿದ್ದ ಗೌತಮ್ (ಇಲಿಯಾಸ್ ) ಮತ್ತು ಮಕ್ಸೂದ್ ಗ್ಯಾಂಗ್ ಏಕಾಏಕಿ ಚೋಟುವಿನ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಿದ್ದಾರೆ.!

ತಕ್ಷಣವೇ ಚೋಟು ಜೋತೆಗಿದ್ದ ಸ್ನೇಹಿತರು ಓಡಿಹೋಗಿದ್ದಾರೆ.ನಾಲ್ಕೈದು ಜನರ ಗ್ಯಾಂಗ್ ಚೋಟಿನ ಮೇಲೆ ಹತಾರಗಳನ್ನು ಬಿಸಿ ಅಲ್ಲಿ ಎಸ್ಕೇಪ್ ಆಗಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೋಟುವನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರ ತಂಡ ಗೌತಮ್ (ಇಲಿಯಾಸ್) ಗ್ಯಾಂಗ್ ಅನ್ನು ಹೆಡೆಮುರಿಕಟ್ಟಲು ಮುಂದಾಗಿದ್ದಾರೆ.ಸಧ್ಯಕ್ಕೆ ಇಷ್ಟು ಮಾಹಿತಿ ಲಭ್ಯವಿದ್ದು ಹೆಚ್ಚಿನ ಮಾಹಿತಿಗೆ ಗೌತಮ್ ಗ್ಯಾಂಗ್ನ ಬಂಧನದ ನಂತರ ಬಯಲಾಗಲಿದೆ.
ಒಟ್ಟಿನಲ್ಲಿ ಶಿವಮೊಗ್ಗ ಭದ್ರಾವತಿ ವ್ಯಾಪ್ತಿಯಲ್ಲಿ ರಾಜರೋಷವಾಗಿ ನೆಡೆಯುತ್ತಿರುವ ದನಗಳ್ಳರ ಟೀಮ್ಗಳು ತಮ್ಮ ಪಾರುಪತ್ಯಾಕ್ಕಾಗಿ ಅವರವರೆ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದ್ದು ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದೆ ಹೋದರೆ ಇದು ದೊಡ್ಡ ಮಟ್ಟದ ಗ್ಯಾಂಗ್ವಾರ್ ವೇದಿಕೆಯಾಗಬಹುದು.?


