ಕುಂದಾಪುರ : ಗುಳಿಗ ದೈವದ ನಿಜರೂಪವನ್ನು ಒಮ್ಮೆ ನೋಡಲೆ ಬೇಕು.!ಅದರ ಶಕ್ತಿ ಅದರ ಆರಾಧನೆ ಮತ್ತು ಅದು ಏನೆಲ್ಲಾ ಸೇವಿಸುತ್ತದೆ ಗೊತ್ತಾ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಗುಳಿಗ ದೈವ ಆರಾಧನೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಭೂತ ಆರಾಧನೆ, ವಿಶೇಷವಾಗಿದೆ. ಗುಳಿಗ ಭೂತ ಕೊಲಾ, ಜನರ ನಂಬಿಕೆ ಮತ್ತು ಸಂಸ್ಕೃತಿ ಅಲ್ಲಿಯ ಜನರ ಬದುಕಿ ಅಂಗವಾಗಿದೆ. ತುಳುನಾಡು ಭಾಗದ ಜನರ ಆಚಾರ ವಿಚಾರಗಳೆ ವಿಶೇಷವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಕರಾವಳಿಯ ಪ್ರದೇಶಗಳಲ್ಲಿ ವಿಶಿಷ್ಟವಾದ ಆಚರಣೆಯ ಸಾಂಸ್ಕೃತಿಕ ವಲಯವೆಂದೆ ಹೇಳಬಹುದು. ಇಲ್ಲಿಯ ಜನರ ಭೂತದ ಆರಾಧನೆ ಮತ್ತು ಭೂತಕೊಲಾ ಎನ್ನುವುದು ಕೇವಲ ಆಚರಣೆ ಅಥವಾ ಉತ್ಸವವಲ್ಲ, ಅದು ದೇವತೆ, ನಂಬಿಕೆ ಮತ್ತು ಜನಜೀವನದ ನಂಟನ್ನು ಬಲಪಡಿಸುವ ಜೀವಂತ ಪರಂಪರೆ.
ಗುಳಿಗ ದೈವವು ತುಳುನಾಡಿನ ಅತ್ಯಂತ ಪ್ರಾಚೀನ ದೈವಗಳಲ್ಲಿ ಒಂದಾಗಿದೆ. ಪುರಾಣಗಳು ಹಾಗೂ ಜನಶ್ರುತಿಗಳ ಪ್ರಕಾರ ಗುಳಿಗನು ಶಿವಗಣಗಳಲ್ಲಿ ಒಬ್ಬ, ಅಂದರೆ ಭಗವಾನ್ ಶಿವನ ಭಕ್ತ ಹಾಗೂ ಅನುಯಾಯಿ. ಸ್ಥಳಾವಲಂಬಿಯಾಗಿ, ಸಂದರ್ಭ ಹಾಗೂ ಸಂಪ್ರದಾಯದ ಪ್ರಕಾರ ಗುಳಿಗ ದೈವವನ್ನು ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ. ಕೆಲವೆಡೆ ಈ ದೈವವನ್ನು ಕೋಪಿಷ್ಠನಾಗಿ, ಇನ್ನೂ ಕೆಲವೆಡೆ ರಕ್ಷಣಾ ದೈವವಾಗಿ ಈ ಭಾಗದಲ್ಲಿ ಪೂಜಿಸುತ್ತಾರೆ.

ಭೂತ ಕೊಲಾ ಕಾರ್ಯಕ್ರಮವು ಭಕ್ತರ ಜೀವನದ ಅವಿಭಾಜ್ಯ ಭಾಗವಾಗಿದೆ. ಭೂತನೆಂದರೆ ಕೇವಲ ಆತ್ಮವಲ್ಲ; ಅದು ದೈವೀ ಶಕ್ತಿಯ ಪ್ರತೀಕ, ಗ್ರಾಮವನ್ನು ರಕ್ಷಿಸುವ, ಜನರ ಹಿತಕ್ಕಾಗಿ ಕೆಲಸ ಮಾಡುವ ದೇವದೂತ. ಕೊಲಾ ಎಂಬ ಆಚರಣೆಯ ಮೂಲಕ ದೈವ ಮತ್ತು ಮಾನವರ ನಡುವಿನ ಆಧ್ಯಾತ್ಮಿಕ ನಂಟನ್ನು ಕಟ್ಟಲ್ಪಡುತ್ತದೆ.
ಕೆಲವರು ಭೂತ ಆರಾಧನೆಯ ಮೂಲವನ್ನು ಹಿಂದೂ ಧರ್ಮಕ್ಕಿಂತಲೂ ಹಳೆಯದು ಎಂದು ನಂಬುತ್ತಾರೆ. ಈ ಸಂಪ್ರದಾಯವು ಜನರು ಪ್ರಕೃತಿಯೊಂದಿಗೆ, ಪೂರ್ವಜರೊಂದಿಗೆ ಮತ್ತು ದೈವಶಕ್ತಿಯೊಂದಿಗೆ ಹೊಂದಾಣಿಕೆಯಿಂದ ಬದುಕಲು ಕಲಿಸಿದೆ. ಇಂದು ಸಹ ತುಳುನಾಡಿನ ಹಳ್ಳಿ ಹಳ್ಳಿಗಳಲ್ಲಿ ಗುಳಿಗ ಭೂತ ಕೊಲಾ ನಡೆಯುವಾಗ, ಅದು ಧಾರ್ಮಿಕ ಕ್ರಿಯೆಯಷ್ಟೇ ಅಲ್ಲ ಅದು ಜನಸಾಮಾನ್ಯರ ಜೀವನದ ಭಾಗ, ನಂಬಿಕೆಯ ಹಬ್ಬ, ಸಂಸ್ಕೃತಿಯ ಉತ್ಸವ.ಗುಳಿಗ ಭೂತ ಕೊಲಾ ಎಂದರೆ ತುಳುನಾಡಿನ ಆತ್ಮ ನಂಬಿಕೆ, ಪರಂಪರೆ ಮತ್ತು ಭಕ್ತಿಯ ಜೀವಂತ ಆರಾಧನೆಯಾಗಿದೆ.


