ಆತ್ಮಹತ್ಯೆ : ಪ್ರಿಯತಮೆಯ ಸ್ನೇಹಿತೆಯನ್ನು ಲಾಡ್ಜ್ಗೆ ಕರೆದೊಯ್ದ ಪ್ರಿಯಕ.! ನೊಂದ ಎರಡು ಮಕ್ಕಳ ತಾಯಿ ಆತ್ಮಹತ್ಯೆಗೆ ಶರಣು.!
news.ashwasurya.in
ಅದೇನು ತೀಟೆ ಇತ್ತೊ ಗೋತ್ತಿಲ್ಲ ಮೃತ ಯಶೋದಾಗೆ ಮದುವೆಯಾಗಿ ಪ್ರೀತಿಸುವ ಗಂಡ,ಮುದ್ದಾದ ಇಬ್ಬರು ಮಕ್ಕಳಿದ್ದರು.ಪಕ್ಕದ ಏರಿಯಾದಲ್ಲಿದ್ದ ಆಡಿಟರ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ.!? ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರಂತೆ.? ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬಳನ್ನು ಪ್ರಿಯಕರನಿಗೆ ಪರಿಚಯಿಸಿದ್ದಳಂತೆ.ಪರಿಚಯವಾದ ಪ್ರಿಯತಮೆಯ ಗೆಳತಿಯನ್ನು ಲಾಡ್ಜ್ಗೆ ಕರೆದೊಕೊಂಡು ಹೋಗಿದ್ದನಂತೆ ಪ್ರಿಯಕರ….
ಅಶ್ವಸೂರ್ಯ/ಬೆಂಗಳೂರು: ವಿವಾಹಿತೆಯಾಗಿದ್ದು ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯೊಬ್ಬಳು, ತನ್ನ ಪ್ರಿಯಕರ ವಂಚಿಸಿದನೆಂದು ಮನ ನೊಂದು ಆತ್ಮಹತ್ಯೆಗೆ (Self Harming)ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದರಲ್ಲೂ ಮೃತಳು ತನ್ನ ಸ್ನೇಹಿತೆಯನ್ನು ಪ್ರಿಯಕರನಿಗೆ ಪರಿಚಯಿಸಿದ್ದು ನಂತರ ಆತ ಆ ಸ್ನೇಹಿತೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಕೊಂಡು ಓಯೋ ರೂಂಗೆ ಕರೆದುಕೊಂಡು ಹೋಗಿದ್ದ. ಈ ವಿಷಯ ತಿಳಿದು ಮಹಿಳೆ ಅವರಿಬ್ಬರೂ ಇರುವ ಲಾಡ್ಜ್ಗೆ ತೆರಳಿ ಗಲಾಟೆ ಮಾಡಿದ್ದಾಳೆ. ನಂತರ ನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯತಮ ಬೇರೊಂದು ಮಹಿಳೆಯೊಂದಿಗೆ ಇದ್ದ ಓಯೋ ರೂಂ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದಳು. ಗಲಾಟೆಗೆ ಪ್ರಿಯತಮ ಆಡಿಟರ್ ಸರಿಯಾಗಿ ರೆಸ್ಪಾನ್ಸ್ ಮಾಡದಿದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯಶೋದಾಗೆ ಮದುವೆಯಾಗಿ ಪ್ರೀತಿಸುವ ಗಂಡನಿದ್ದು ಜೋತೆಗೆ ಮುದ್ದಾದ ಇಬ್ಬರು ಮಕ್ಕಳಿದ್ದರು ಅವರನ್ನೆಲ್ಲ ಮರೆತು ಅವರ ಪ್ರೀತಿಯನ್ನು ಲೆಕ್ಕಿಸದೇ ಯಾವನೊ ಮೂರು ಬಿಟ್ಟವನು ಮೋಸ ಮಾಡಿದ್ದಾನೆ ಎನ್ನುವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.!ಯಶೋಧ ತನ್ನ ಸುಖಿ ಸಂಸಾರವಿದ್ದರೂ ಆಕೆಗೆ ಪಕ್ಕದ ಏರಿಯಾದಲ್ಲಿದ್ದ, ಆಡಿಟರ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ.!? ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರಂತೆ.!

ಆದರೆ ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬಳನ್ನು ಪ್ರಿಯಕರನಿಗೆ ಪರಿಚಯಿಸಿದ್ದಳಂತೆ.ಮೊದಲೇ ರುಚಿ ನೋಡಿದ ಬೆಕ್ಕಿನಂತಿದ್ದ
ಪ್ರಿಯಕರ ಯಶೋಧಳ ಸ್ನೇಹಿತೆಯ ಜೊತೆ ಸಲುಗೆ ಬೆಳೆಸಿ ಪ್ರೇಮದ ಬಲೆಗೆ ಕೆಡವಿಕೊಂಡಿದ್ದಾನೆ. ಅಲ್ಲದೇ, ಆಕೆಯನ್ನು ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಚಾರ ಯಶೋಧ ಕಿವಿಗೆ ಬಿದ್ದಿದೆ. ಪ್ರಿಯಕರ ಸ್ನೇಹಿತೆಯೊಟ್ಟಿಗೆ ಇರುವ ಲಾಡ್ಜ್ಗೆ ಹೋಗಿ ಗಲಾಟೆ ಮಾಡಿದ್ದಾಳೆ. ಪ್ರಿಯಕರ ಸರಿಯಾಗಿ ಸ್ಪಂದಿಸದೇ ಇದ್ದಾಗ, ಮನನೊಂದು ಅಲ್ಲೇ ಪಕ್ಕದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ….


